ಎಸಿಬಿ ರದ್ದು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಹೋಗಲ್ಲ, ಲೋಕಾಯುಕ್ತ ಬಲಪಡಿಸ್ತೇವೆ ; ಗೃಹ ಸಚಿವ 

23-08-22 01:37 pm       HK News Desk   ಕರ್ನಾಟಕ

ಎಸಿಬಿ ರದ್ದು ಪಡಿಸಿರುವ ಹೈಕೋರ್ಟ್ ಕ್ರಮವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಕೋಲಾರ, ಆಗಸ್ಟ್ 23: ಎಸಿಬಿ ರದ್ದು ಪಡಿಸಿರುವ ಹೈಕೋರ್ಟ್ ಕ್ರಮವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. 

ಕೋಲಾರದ ಕೆಜಿಎಫ್ ಬಳಿಗೆ ಆಗಮಿಸಿದ್ದ ಗೃಹ ಸಚಿವರು ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸಿದರು.‌ ಎಸಿಬಿ ವಿಚಾರದಲ್ಲಿ ಕೇಳಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸದಿರಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಲೋಕಾಯುಕ್ತ ಬಲಪಡಿಸುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಾಗಿತ್ತು. ಆ ಹಿನ್ನಲೆಯಲ್ಲಿ ಎಸಿಬಿ ರದ್ದು ಮಾಡಿರುವುದನ್ನು ಸುಪ್ರೀಂನಲ್ಲಿ ಪ್ರಶ್ನಿಸುವುದಿಲ್ಲ ಎಂದು ಹೇಳಿದರು.‌

Supreme Court: Latest news, Updates, Photos, Videos and more.

ರಾಜಸ್ಥಾನದಲ್ಲಿ ಜೂಜಾಡಿ ಸಿಕ್ಕಿಬಿದ್ದ ಕೋಲಾರದ ಇನ್ಸ್ ಪೆಕ್ಟರ್ ಆಂಜಿನಪ್ಪ ಅವರನ್ನು ತಕ್ಷಣದಿಂದಲೇ ಅಮಾನತು ಮಾಡಲಾಗಿದೆ. ಉಳಿದವರು ಯಾರೆಲ್ಲ ಜೂಜಾಟದಲ್ಲಿ ಸಿಕ್ಕಿಬಿದ್ದವರಿದ್ದಾರೆ, ಅವರನ್ನು ಅಮಾನತು ಮಾಡಲು ಆಯಾ ಇಲಾಖೆಯ ಮುಖ್ಯಸ್ಥರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ‌

HC abolishes Karnataka ACB will not question it says Karnataka Home Minister. A division bench of Karnataka High Court on Thursday ordered abolishing the state government-controlled Anti-Corruption Bureau (ACB) police and revival of an anti-corruption police unit attached to the quasi-judicial institution Karnataka Lokayukta, which works independent of the state.