ಚಿಕ್ಕಮಗಳೂರು ಎಸ್ಪಿಗೆ ಕೇಸರಿ ಶಾಲು ಹೊದಿಸಿ ಸನ್ಮಾನ ; ವಿರೋಧಿಗಳ ಕೆಂಗಣ್ಣು ! 

24-08-22 05:09 pm       HK News Desk   ಕರ್ನಾಟಕ

ಚಿಕ್ಕಮಗಳೂರು ‌ಜಿಲ್ಲೆಯ ನೂತನ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಉಮಾ ಪ್ರಶಾಂತ್ ಅವರನ್ನು ಬಿಜೆಪಿ ಮುಖಂಡರೊಬ್ಬರು ಕೇಸರಿ ಶಾಲು ಹೊದಿಸಿ ಗೌರವಿಸಿದ್ದು ಮತ್ತು ಅದರ ಫೋಟೊ ಕ್ಲಿಕ್ಕಿಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. 

ಚಿಕ್ಕಮಗಳೂರು, ಆ.24: ಚಿಕ್ಕಮಗಳೂರು ‌ಜಿಲ್ಲೆಯ ನೂತನ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಉಮಾ ಪ್ರಶಾಂತ್ ಅವರನ್ನು ಬಿಜೆಪಿ ಮುಖಂಡರೊಬ್ಬರು ಕೇಸರಿ ಶಾಲು ಹೊದಿಸಿ ಗೌರವಿಸಿದ್ದು ಮತ್ತು ಅದರ ಫೋಟೊ ಕ್ಲಿಕ್ಕಿಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. 

ನೂತನ ಎಸ್ಪಿ ಕೇಸರಿ ಶಾಲು ಹೊದ್ದಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ನೂತನ ಎಸ್ಪಿಯಾಗಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿರುವ ಉಮಾ ಪ್ರಶಾಂತ್ ಅವರನ್ನು ಸಾರ್ವಜನಿಕರು, ಮಹಿಳಾ ಸಂಘಟನೆಗಳು, ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಅಭಿನಂದಿಸುತ್ತಿದ್ದಾರೆ. 

ಹೀಗೆ ಅಭಿನಂದಿಸುವ ಸಂದರ್ಭ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ದೇವನೂರು ರವಿ ಎಸ್ಪಿ ಉಮಾ ಪ್ರಶಾಂತ್ ಅವರನ್ನು ಕೇಸರಿ ಶಾಲನ್ನು ಹೊದಿಸಿ ಸನ್ಮಾನಿಸಿದ್ದಾರೆ. ಕೇಸರಿ ಶಾಲನ್ನು ಪೊಲೀಸ್ ಸಮವಸ್ತ್ರದ ಮೇಲೆಯೇ ಹೊದ್ದುಕೊಂಡಿರುವ ಎಸ್ಪಿ ಉಮಾ ಪ್ರಶಾಂತ್ ಬಿಜೆಪಿ ಮುಖಂಡನೊಂದಿಗೆ ನಿಂತು ಫೋಟೊ ಕ್ಲಿಕ್ಕಿಸಿರುವುದು ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ.

Chikmagalur SP Uma Prashanth honoured with kesari shawl sparks controversy.