ಬಿಜೆಪಿ ಪಕ್ಷದವರು ಮಾಡಿರುವ ಭ್ರಷ್ಟಾಚಾರಕ್ಕೆ 10-15 ಪರಪ್ಪನ ಅಗ್ರಹಾರ ಜೈಲುಗಳು  ಬೇಕು ; ಮುರುಗೇಶ್ ನಿರಾಣಿ ಬ್ರಹ್ಮಾಂಡ ಭ್ರಷ್ಟ ! 

26-08-22 04:59 pm       Bangalore Correspondent   ಕರ್ನಾಟಕ

ರಾಜ್ಯದಲ್ಲಿ ಹಿಂದೆ ಬಿಜೆಪಿ ಸರಕಾರ ಇದ್ದಾಗ ಭೂ ವ್ಯವಹಾರಗಳಲ್ಲಿ ಅಕ್ರಮ ನಡೆದು ಸ್ವತಃ ಕೈಗಾರಿಕಾ ಸಚಿವರೇ ಜೈಲಿಗೆ ಹೋದರು. ಅದರೂ ಬಿಜೆಪಿ ಪಾಠ ಕಲಿತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಿಡಿ ಕಾರಿದರು.

ಬೆಂಗಳೂರು, ಆ 26: ರಾಜ್ಯದಲ್ಲಿ ಹಿಂದೆ ಬಿಜೆಪಿ ಸರಕಾರ ಇದ್ದಾಗ ಭೂ ವ್ಯವಹಾರಗಳಲ್ಲಿ ಅಕ್ರಮ ನಡೆದು ಸ್ವತಃ ಕೈಗಾರಿಕಾ ಸಚಿವರೇ ಜೈಲಿಗೆ ಹೋದರು. ಅದರೂ ಬಿಜೆಪಿ ಪಾಠ ಕಲಿತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಿಡಿ ಕಾರಿದರು.

ದೇವನಹಳ್ಳಿಯ ಚನ್ನರಾಯಪಟ್ಟಣದಲ್ಲಿ ಕೃಷಿ ಭೂಮಿಯನ್ನು ಸರಕಾರ ನಿರ್ದಯವಾಗಿ ಸ್ವಾಧೀನ ಮಾಡಿಕೊಳ್ಳುತ್ತಿರುವುದು ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಬೃಹತ್ ರೈತ ಪ್ರತಿಭಟನೆಯಲ್ಲಿ ಪಾಲ್ಗೊಂಡ ನಂತರ ಕುಮಾರಸ್ವಾಮಿ ಮಾಧ್ಯಮಗಳ ಜತೆ ಮಾತನಾಡಿದರು.

Murugesh Nirani gets honorary doctorate | Deccan Herald

"ಅಷ್ಟೆಲ್ಲಾ ಆದರೂ ಕೂಡ ಬಿಜೆಪಿಗೆ ಇನ್ನೂ ಬುದ್ದಿ ಬಂದಿಲ್ಲ. ಈಗಿನ ಕೈಗಾರಿಕಾ ಸಚಿವರದ್ದು ಬ್ರಹ್ಮಾಂಡ ಭ್ರಷ್ಟಾಚಾರ ಇದೆ. ರೈತರ ಬದುಕಿನ ಜೊತೆ ಚೆಲ್ಲಾಟ ಆಡುವುದು ಮುರುಗೇಶ್ ನಿರಾಣಿ ಮಾಡುತ್ತಿರುವ ಘನಂದಾರಿ ಕೆಲಸ. ಇವರ ದೃಷ್ಟಿಯಲ್ಲಿ ರೈತರು ಬದುಕುವ ಹಾಗೆಯೇ ಇಲ್ಲ. ಬೆಂಗಳೂರಿನಲ್ಲಿಯೂ ಬದಕಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ" ಎಂದು ಕುಮಾರಸ್ವಾಮಿ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿರುದ್ದ ಟೀಕಾ ಪ್ರಹಾರ ನಡೆಸಿದರು.

"ಕೇವಲ ಬೆಂಗಳೂರು ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿಯೇ ಕೈಗಾರಿಕೆ ಬರಬೇಕು ಎಂಬ ಚಿಂತನೆ ಬಿಡಿ, ಕೃಷಿಯೇತರ ಭೂಮಿಗಳಲ್ಲಿ ಕೈಗಾರಿಕೆಗಳನ್ನು ಆರಂಭ ಮಾಡಬೇಕೆ ವಿನಾ ಫಲವತ್ತಾದ ಜಮೀನನನ್ನು ಕಿತ್ತುಕೊಂಡು ಅಲ್ಲಿ ಕೈಗಾರಿಕೆ ಮಾಡುವುದಲ್ಲ" ಎಂದು ಮಾಜಿ ಮುಖ್ಯಮಂತ್ರಿಗಳು ಕಿಡಿಕಾರಿದರು.

ಸಿಸೋಡಿಯಾ ಅವರನ್ನು ಹಿಡಿಯಲು ಹೊರಟಿದ್ದಾರೆ ;

"ರಾಜ್ಯದಲ್ಲಿ ಅಕ್ರಮ, ಅನ್ಯಾಯಗಳು ಎಷ್ಟು ಮೇರೆ ಮೀರಿವೆ ಎಂದರೆ, ತಪ್ಪಿತಸ್ಥರಿಗೆ ಒಂದು ಪರಪ್ಪನ ಆಗ್ರಹಾರ ಜೈಲು ಸಾಲುವುದಿಲ್ಲ. ಈಗಿನ ಭ್ರಷ್ಟಾಚಾರ ನೋಡಿದರೆ 10-15 ಪರಪ್ಪನ ಅಗ್ರಹಾರ ಜೈಲುಗಳು ಬೇಕು. ಇಷ್ಟೆಲ್ಲಾ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಇಟ್ಟುಕೊಂಡು ಪಾಪ.. ಸಿಸೋಡಿಯಾ ಅವರನ್ನು ಹಿಡಿಯಲು ಹೊರಟಿದ್ದಾರೆ. ಅಬಕಾರಿ ನೀತಿಯಲ್ಲಿ ಒಂದು ಕೋಟಿ ವರ್ಗಾವಣೆ ಆಗಿದೆ ಅಂತ ಆರೋಪ ಮಾಡಿ ಅವರ ಮೇಲೆ ದಾಳಿ ನಡೆಸಲಾಗುತ್ತಿದೆ" ಎಂದು ಕುಮಾರಸ್ವಾಮಿ ಕಿಡಿಕಾರಿದರು.

Bjp has highly corrupted people, 10-15 jails aren't enough slams HDK.