ಬ್ರೇಕಿಂಗ್ ನ್ಯೂಸ್
26-08-22 10:52 pm Bangalore Correspondent ಕರ್ನಾಟಕ
ಬೆಂಗಳೂರು, ಆಗಸ್ಟ್ 26: ಕರಾವಳಿ ಮತ್ತು ಕೋಲಾರ, ಚಿಕ್ಕಬಳ್ಳಾಪುರ ಜನರ ಕಣ್ಣಿಗೆ ಮಣ್ಣೆರಚಿ ರಾಜ್ಯ ಸರಕಾರ ನಡೆಸುತ್ತಿರುವ ಎತ್ತಿನಹೊಳೆ ನೀರಾವರಿ ಯೋಜನೆಯ ಪರಿಷ್ಕೃತ ಯೋಜನಾ ವೆಚ್ಚ 33 ಸಾವಿರ ಕೋಟಿಗೆ ಏರಿಕೆಯಾಗಿದೆ.
ಯೋಜನೆ ಆರಂಭವಾದ 2013ರಲ್ಲಿ 12,912 ಕೋಟಿ ರೂಪಾಯಿ ಯೋಜನಾ ಗಾತ್ರ ಇತ್ತು. ಕರಾವಳಿ ಜನರ ವಿರೋಧದ ಮಧ್ಯೆಯೂ ಸಿದ್ದರಾಮಯ್ಯ ಸರಕಾರ ಅಂದು ಕಾಮಗಾರಿ ಕೈಗೆತ್ತಿಕೊಂಡಿತ್ತು. ಅದಕ್ಕೂ ಹಿಂದೆ, 2011ರಲ್ಲಿ ಬಿಜೆಪಿ ಸರಕಾರ ಇದ್ದಾಗ ಅಂದಿನ ಸಿಎಂ ಸದಾನಂದ ಗೌಡ ಮತ್ತು ಮಾಜಿ ಸಿಎಂ ವೀರಪ್ಪ ಮೊಯ್ಲಿ ತರಾತುರಿಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದರು. 2001ರ ವೇಳೆಗೆ ಪರಮಶಿವಯ್ಯ ನೀಡಿದ್ದ ಎತ್ತಿನಹೊಳೆ ಯೋಜನಾ ವರದಿಯನ್ನು ಕರಾವಳಿ ಜನರ ಆಶಯ ಕಡೆಗಣಿಸಿ ಆಗಿನ ಸಿಎಂ ಆಗಿದ್ದ ಸದಾನಂದ ಗೌಡ ಅನುಮತಿ ನೀಡಿದ್ದರು.
ಸಿದ್ದರಾಮಯ್ಯ ಸರಕಾರ 2013ರಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದು ನಾಲ್ಕು ವರ್ಷದಲ್ಲಿ ನೀರು ಹರಿಸುತ್ತೇವೆಂದು ಆರಂಭಿಸಿದ್ದ ಯೋಜನೆಗೆ ಹತ್ತು ವರ್ಷ ಪೂರ್ತಿಯಾಗಿದೆ. ಎರಡು ವರ್ಷಗಳ ಹಿಂದೆ 23 ಸಾವಿರ ಕೋಟಿ ಯೋಜನಾ ವೆಚ್ಚವೆಂದು ನೀರಾವರಿ ಇಲಾಖೆಯೇ ಮಾಹಿತಿ ನೀಡಿತ್ತು. ಇದೀಗ ಜಲಸಂಪನ್ಮೂಲ ಇಲಾಖೆಯ ಪರಿಷ್ಕೃತ ಯೋಜನಾ ವರದಿ ಪ್ರಕಾರ, ವೆಚ್ಚವನ್ನು 33 ಸಾವಿರ ಕೋಟಿಗೇರಿಸಿದೆ ಎನ್ನುವ ಮಾಹಿತಿಗಳಿವೆ. ಇದರ ಪ್ರಕಾರ, ಹತ್ತು ವರ್ಷದಲ್ಲಿ 20 ಸಾವಿರ ಕೋಟಿ ರೂಪಾಯಿ ಯೋಜನಾ ವೆಚ್ಚ ಹೆಚ್ಚಳವಾಗಿದೆ. ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಕುರಿತು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ವಿವರಣೆ ನೀಡಿರುವ ಜಲಸಂಪನ್ಮೂಲ ಇಲಾಖೆಯು 2012-13ರಿಂದ 2022ರ ಜೂನ್ ಅಂತ್ಯದ ವರೆಗೆ 10,783 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.
ನೀರೇ ಸಿಗದ ಯೋಜನೆಗೆ ಸಾವಿರಾರು ಕೋಟಿ
ಎತ್ತಿನಹೊಳೆ ಯೋಜನೆಯಿಂದ 23 ಟಿಎಂಸಿ ನೀರು ಚಿಕ್ಕಬಳ್ಳಾಪುರಕ್ಕೆ ಹರಿಸುತ್ತೇವೆಂದು ಆಗಿನ ಕಾಂಗ್ರೆಸ್ ಸರಕಾರದ ನಾಯಕರು ಹೇಳಿಕೊಂಡಿದ್ದರೂ, ತಜ್ಞರ ಪ್ರಕಾರ ಅಲ್ಲಿ ನೀರೇ ಸಿಗುವುದಿಲ್ಲ ಎಂದಿದೆ. ಐಐಎಸ್ಸಿ ತಜ್ಞರು ಕೂಡ ಅಷ್ಟು ನೀರು ಸಿಗಲ್ಲ ಎಂದೇ ಹೇಳಿದ್ದರು. ಡಾ.ಟಿವಿ ರಾಮಚಂದ್ರ ಅವರು ಸ್ಥಳ ಅಧ್ಯಯನ ನಡೆಸಿ ರಾಜ್ಯ ಸರಕಾರಕ್ಕೂ ನೀರು ಸಿಗುವುದಿಲ್ಲ ಎಂದು ವರದಿ ಸಲ್ಲಿಸಿದ್ದರು. ಅಂದು ವಿರೋಧ ಪಕ್ಷದಲ್ಲಿದ್ದ ಬಿಜೆಪಿ ನಾಯಕರು ಎತ್ತಿನಹೊಳೆ ಯೋಜನೆಗೆ ವಿರೋಧಿಸುವ ಹೆಸರಲ್ಲಿ ಪ್ರತಿಭಟನೆ ನಾಟಕ ಮಾಡಿದ್ದರು. ತಾವು ಅಧಿಕಾರಕ್ಕೆ ಬಂದ ಬಳಿಕ ಯೋಜನಾ ವೆಚ್ಚವನ್ನೇ ದುಪ್ಪಟ್ಟು ಮಾಡಿ, ಜನರ ಕಣ್ಣಿಗೆ ಮಣ್ಣೆರಚಿದ್ದಾರೆ.
ಜಲ ತಜ್ಞರ ವರದಿಯನ್ನು ಅಲ್ಲಗಳೆದು ಆಡಳಿತ ನಡೆಸುತ್ತಿರುವ ಮಂದಿ ಎತ್ತಿನಹೊಳೆ ಯೋಜನೆಯನ್ನು ಪಾರ್ಟಿ ಫಂಡ್ ಗಿಟ್ಟಿಸಲೆಂಬಂತೆ ಬೃಹತ್ ನೀರಾವರಿ ಯೋಜನೆಯೆಂದು ಬಿಂಬಿಸುತ್ತಿದ್ದಾರೆ. ಪ್ರತಿ ವರ್ಷ 3-4 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿ, ರಾಜಕಾರಣಿಗಳು ಅದರ ಹೆಸರಲ್ಲಿ ಪಾಲು ಪಡೆದು ತಿಂದು ತೇಗುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲ ಪಕ್ಷಗಳೂ ಎತ್ತಿನಹೊಳೆ ಯೋಜನೆಯಲ್ಲಿ ಪಾಲು ಪಡೆದಿದ್ದಾಗಿ ಗಂಭೀರ ಆರೋಪ ಕೇಳಿಬರುತ್ತಿದೆ. ಜನರ ದುಡ್ಡನ್ನು ರಾಜಾರೋಷವಾಗಿ ಹಗಲು ದರೋಡೆ ನಡೆಸುತ್ತಿದ್ದು, ಚಿಕ್ಕಬಳ್ಳಾಪುರ, ಕೋಲಾರದ ಜನರು ಕೂಡ ಅಲ್ಲಿ ನೀರು ಸಿಗಲ್ಲವೆಂದು ವಿರೋಧ ಮಾಡುತ್ತಿದ್ದಾರೆ. ಹಾಗಿದ್ದರೂ, ಯೋಜನಾ ವೆಚ್ಚವನ್ನು ದುಪ್ಪಟ್ಟು ತೋರಿಸಿ ಜನರ ದುಡ್ಡನ್ನು ಪೋಲು ಮಾಡುತ್ತಿದ್ದಾರೆ.
Yettinahole project scam total 33 crores spent so far without water.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm