ಮುರುಘಾ ಮಠದ ಸ್ವಾಮೀಜಿಯನ್ನು ಕೂಡಲೇ ಬಂಧಿಸಬೇಕು, ಇಲ್ಲದಿದ್ದರೆ ಪೋಕ್ಸೋ ಕಾಯ್ದೆ ಒಪ್ಪಲ್ಲ ಎಂದು ಘೋಷಿಸಿ ! 

30-08-22 04:06 pm       HK News Desk   ಕರ್ನಾಟಕ

ಮುರುಘಾ ಮಠ ಗುರು ಪರಂಪರೆಯ ಇತಿಹಾಸ ಹೊಂದಿರುವ ಪ್ರಸಿದ್ಧ ಮಠ. ಈ ರೀತಿಯ ಆರೋಪ ಕೇಳಿಬಂದಿರುವುದರಿಂದ ತಾತ್ಕಾಲಿಕ ನೆಲೆಯಲ್ಲಾದರೂ ಸ್ವಾಮೀಜಿಗಳು ಪೀಠ ತ್ಯಜಿಸಬೇಕು. ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಗಂಭೀರ ಪ್ರಕರಣವಾಗಿದ್ದು ಮುಖ್ಯಮಂತ್ರಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.

ಮೈಸೂರು, ಆಗಸ್ಟ್ 30: ಮುರುಘಾ ಮಠ ಗುರು ಪರಂಪರೆಯ ಇತಿಹಾಸ ಹೊಂದಿರುವ ಪ್ರಸಿದ್ಧ ಮಠ. ಈ ರೀತಿಯ ಆರೋಪ ಕೇಳಿಬಂದಿರುವುದರಿಂದ ತಾತ್ಕಾಲಿಕ ನೆಲೆಯಲ್ಲಾದರೂ ಸ್ವಾಮೀಜಿಗಳು ಪೀಠ ತ್ಯಜಿಸಬೇಕು. ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಗಂಭೀರ ಪ್ರಕರಣವಾಗಿದ್ದು ಮುಖ್ಯಮಂತ್ರಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಪೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಕೂಡಲೇ ಬಂಧಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆಗ್ರಹಿಸಿದ್ದಾರೆ. ‌

ಚಿತ್ರದುರ್ಗದ ಮುರುಘಾ ಮಠಾಧೀಶರ ಮೇಲಿನ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಹೇಳಿಕೆ ನೀಡಿರುವ ವಿಶ್ವನಾಥ್, ಸ್ವಾಮೀಜಿಗಳ ರಕ್ಷಣೆಗೆ ಮುಖ್ಯಮಂತ್ರಿ ಅಥವಾ ಯಡಿಯೂರಪ್ಪ ಅವರು ನಿಲ್ಲಬಾರದು. ವಿದ್ಯಾರ್ಥಿಗಳ ಪೈಕಿ ದಲಿತ ವಿದ್ಯಾರ್ಥಿನಿ ಇದ್ದಾಳೆ.‌ ಹೀಗಾಗಿ ಎಸ್ಸಿ ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಬೇಕು ಅಂತ ವಿಶ್ವನಾಥ್ ಆಗ್ರಹಿಸಿದ್ದಾರೆ. ದೇಶದಲ್ಲಿ ನಿರ್ಭಯಾ ಪ್ರಕರಣದ ಬಗ್ಗೆ ಜನರು, ಸಂಘ ಸಂಸ್ಥೆಯವರು ತೀವ್ರ ಆಕ್ಷೇಪ ಪಡಿಸಿದ ಬಳಿಕ 2012ರಲ್ಲಿ ಪೋಕ್ಸೋ ಕಾಯ್ದೆ ಜಾರಿಗೆ ಬಂದಿತ್ತು. ಪೋಕ್ಸೋ ಕಾಯ್ದೆ ಬಲವಾಗಿ ನಮ್ಮ ಕೈಗೆ ಬಂದಿದೆ. ಇಂತಹ ಕಾಯ್ದೆಯಡಿ  ಗುರುಗಳು ನಿಂತಿದ್ದಾರೆ. ಈ ಕಾಯ್ದೆಯ ಜೊತೆಗೆ ಮಕ್ಕಳ ಅಪರಾಧಿಕರಣ ಹಾಗೂ ಎಸ್ಸಿ-ಎಸ್ಟಿ ಪ್ರಕರಣ ದಾಖಲಾಗಬೇಕು ಅಂತ ಆಗ್ರಹಿಸಿದ್ದಾರೆ.

Karnataka: I will come out clean, says Muruga mutt pontiff on sexual  assault charges | Cities News,The Indian Express

ಸ್ವಾಮಿಗಳು ಹಾಗೂ ಹೆಣ್ಣು ಮಕ್ಕಳ ಈ ಕೇಸ್ ನಲ್ಲಿ ಯಾರು ತಲೆ ಹಾಕಬಾರದು. ಪೋಕ್ಸೋ ದಾಖಲಾದ 24 ಗಂಟೆಯೊಳಗೆ ಆರೋಪಿ ಬಂಧನ ಆಗಬೇಕು. ಪೋಕ್ಸೋ ಕಾಯ್ದೆಯಲ್ಲಿ ಆರೋಪಿಯನ್ನು ಅಪರಾಧಿ ಎಂದೇ ಪರಿಗಣಿಸಬೇಕು ಎಂದಿದೆ ಅಂತ ವಿಶ್ವನಾಥ್ ಹೇಳಿದ್ದಾರೆ. 

Coward home minister': Karnataka home minister Araga Jnanendra faces heat  from ABVP members | Deccan Herald

ರಾಜ್ಯದ ಹೋಮ್ ಮಿನಿಸ್ಟರ್, ಅಲ್ಲಿನ ಜಿಲ್ಲಾ ಎಸ್ಪಿ ಏನು ಮಾಡುತ್ತಿದ್ದಾರೆ ? ಆರೋಪಿ ರಕ್ಷಣೆ ಮಾಡುವ ಕೆಲಸವನ್ನ ಯಾರು ಮಾಡಬಾರದು. ನೊಂದ ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಬೇಕು ಎಂಬುದು ರಾಜ್ಯದ ಜನತೆಯ ಒಕ್ಕೊರಳ ಒತ್ತಾಯವಾಗಿದೆ. ಸ್ವಾಮೀಜಿ ಎಲ್ಲಾದರು ಹೋದರೆ ಪೊಲೀಸರು ಅವರನ್ನ ಬಹಳ ಗೌರವಯುತವಾಗಿ ಕರೆದುಕೊಂಡು ಬರುತ್ತಾರೆ. ಯಾರು ಅಪರಾಧ ಮಾಡಿದ್ದರೋ ಅವರ ಪರವಾಗಿ ನಾವಿದ್ದೇವೆ ಎಂದು ಹೇಳುತ್ತಿದ್ದಾರೆ ಅಂತ ವಿಶ್ವನಾಥ್ ಕಿಡಿಕಾರಿದ್ದಾರೆ.

ಆರೋಪಿಯನ್ನು ಬಂಧಿಸದ ಚಿತ್ರದುರ್ಗದ ಎಸ್ಪಿಯನ್ನ ಸಸ್ಪೆಂಡ್ ಮಾಡಬೇಕು. ಕಾನೂನು ಮೌನವಾಗಿ ಕುಳಿತರೆ  ಬೇರೆಯವರು ಇಂತಹ ಕೃತ್ಯ ಮಾಡಲು ಮುಂದಾಗುತ್ತಾರೆ. ನಾಡಿನ  ಕಾನೂನಿಗೆ ಗೌರವ ಕೊಡಬೇಕು. ಜಗತ್ತಿನ ಅರಿವೇ ಇಲ್ಲದ ಮಕ್ಕಳ ಮೇಲೆ ಈ ಕೃತ್ಯವಾಗಿದೆ. ಸ್ವಾಮಿಗಳು  ತಮ್ಮ ಪೀಠವನ್ನ ತಾತ್ಕಾಲಿಕವಾಗಿ ತ್ಯಜಿಸಿ ಕಾನೂನನ್ನ ಗೌರವಿಸಿ ಅಂತ ಮೈಸೂರಿನಲ್ಲಿ ಎಚ್ ವಿಶ್ವನಾಥ್ ಆಗ್ರಹಿಸಿದ್ದಾರೆ. 

Siddaramaiah at 'Indo-China Friendship' event? 'No, I declined,' he says |  Bengaluru - Hindustan Times

Yediyurappa may quit Karnataka CM's post before August 15: Sources | Deccan  Herald

Sexual assault case against Lingayat seer: CM Bommai says cops have  complete freedom | The News Minute

HD Kumarswamy led coalition government falls in Karnataka; BJP to stake  claim - The Indian Wire

ವೋಟಿಗಾಗಿ ರಾಜಕಾರಣಿಗಳು ಸುಮ್ಮನಾದ್ರಾ ? 

ಸ್ವಾಮೀಜಿಗೆ ಒಂದು ನ್ಯಾಯ, ಸಾಮಾನ್ಯ ಜನರಿಗೆ ಒಂದು ನ್ಯಾಯಾನಾ? ವೋಟಿಗಾಗಿ ಸಿದ್ರಾಮಯ್ಯ, ಯಡಿಯೂರಪ್ಪ, ಬೊಮ್ಮಾಯಿ, ಕುಮಾರಸ್ವಾಮಿ ಸುಮ್ಮನಾದ್ರಾ ಅಂತ ಪ್ರಶ್ನಿಸಿದ್ದಾರೆ. ಈ ಪ್ರಕರಣದಲ್ಲಿ ನ್ಯಾಯ ಸಿಗಲೇಬೇಕು. ಹಾಗಾದ್ರೆ ಸರ್ಕಾರ ಪೋಕ್ಸೋ ಕಾಯ್ದೆಯನ್ನ ನಾವು ಒಪ್ಪಲ್ಲ ಎಂದು ಹೇಳಿಬಿಡಲಿ ಅಂತ ಅವರು ಖಾರವಾಗಿ ನುಡಿದಿದ್ದಾರೆ.

Mysuru vishwanath demands clear investigation in muruga math sexual assault case