ಬ್ರೇಕಿಂಗ್ ನ್ಯೂಸ್
30-08-22 07:12 pm Bangalore Correspondent ಕರ್ನಾಟಕ
ಬೆಂಗಳೂರು, ಆಗಸ್ಟ್ 30: ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ನಿರಾಕರಿಸಿ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಗಣೇಶೋತ್ಸವ ನಡೆಸಲು ಒಂದು ದಿನ ಇರುವಾಗ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು ರಾಜ್ಯ ಸರಕಾರಕ್ಕೆ ಹಿನ್ನಡೆಯಾಗಿದೆ.
ಇದಲ್ಲದೆ, ಈ ಬಗ್ಗೆ ಹೈಕೋರ್ಟ್ನಲ್ಲಿ ಮರು ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ವಕ್ಛ್ ಬೋರ್ಡ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರೆ, ಕರ್ನಾಟಕ ಸರಕಾರದ ಪರವಾಗಿ ಮುಕುಲ್ ರೋಹಟಗಿ ವಾದ ಮಂಡಿಸಿದರು. ಜಟಿಲ ವಾದ ಮಂಡನೆಯ ಬಳಿಕ ಮೂವರು ನ್ಯಾಯಾಧೀಶರನ್ನು ಒಳಗೊಂಡಿದ್ದ ಪೀಠ ರಚನೆ ಮಾಡಿ ಸುಪ್ರೀಂಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳಲು ತಿಳಿಸಿದೆ.
ಕಂದಾಯ ಮತ್ತು ಬಿಬಿಎಂಪಿ ದಾಖಲೆಗಳಲ್ಲಿ ಜಮೀನು ಆಟದ ಮೈದಾನ ಎಂದು ನಮೂದಿಸಲಾಗಿದೆ. 200 ವರ್ಷಗಳಿಂದ ಮಕ್ಕಳ ಆಟದ ಮೈದಾನ ಎಂದೇ ಇದೆ. ಇದು ಸರ್ಕಾರಿ ಭೂಮಿ ಎಂದು ಗುರುತಿಸಲಾಗಿದೆ. ಹೀಗಾಗಿ ರಾಜ್ಯ ಸರಕಾರದ ಆಸ್ತಿಯೆಂದು ಘೋಷಣೆ ಮಾಡಲಾಗಿತ್ತು ಎಂದು ಕರ್ನಾಟಕ ಸರಕಾರದ ಪರವಾಗಿ ರೋಹಟಗಿ ವಾದ ಮಂಡಿಸಿದರು. ಈ ಹಿಂದೆ ಯಾವಾಗಲಾದರೂ ಗಣೇಶ ಉತ್ಸವ ಆಚರಣೆಗೆ ಸರಕಾರ ಆದೇಶ ನೀಡಿದ್ದು ಇದೆಯೇ ಎಂದು ಕೋರ್ಟ್ ಪ್ರಶ್ನೆ ಮಾಡಿದ್ದಕ್ಕೆ, ಈ ಹಿಂದೆ ಯಾವುದೇ ಸರಕಾರವಾಗಲಿ, ಬಿಬಿಎಂಪಿಯಾಗಲೀ ಇಂತಹ ಆದೇಶ ನೀಡಿರಲಿಲ್ಲ ಎಂದು ಮುಕುಲ್ ಹೇಳಿದರು.
ವಕ್ಛ್ ಬೋರ್ಡ್ ಪರ ಕಪಿಲ್ ಸಿಬಲ್ ವಾದ ಮಂಡಿಸಿದ್ದರು. ಬಿಬಿಎಂಪಿ ಈದ್ಗಾ ಮೈದಾನದ ಮಾಲೀಕತ್ವ ಸಾಬೀತು ಪಡಿಸಲು ವಿಫಲವಾಗಿದೆ. 200 ವರ್ಷಗಳಿಂದಲೂ ಮೈದಾನ ವಕ್ಛ್ ಆಸ್ತಿಯೆಂದೇ ಇದೆ. ಹೀಗಾಗಿ ಅಲ್ಲಿ ಮುಸ್ಲಿಮರ ನಮಾಜ್ ಹೊರತುಪಡಿಸಿ ಬೇರೆ ಯಾವುದೇ ಆಚರಣೆಗೂ ಅವಕಾಶ ನೀಡಬಾರದು. ಅಲ್ಲದೆ, ಕರ್ನಾಟಕ ಹೈಕೋರ್ಟ್ ಏಕಸದಸ್ಯ ನೀಡಿದ್ದ ಆದೇಶಕ್ಕೆ ತಡೆ ಕೋರಬೇಕು ಎಂದು ಹೇಳಿದರು. ಚಾಮರಾಜಪೇಟೆ ಮೈದಾನ 200 ವರ್ಷಗಳಿಂದ ವಕ್ಫ್ ಆಸ್ತಿಯಾಗಿದೆ. 1954ರಲ್ಲಿ ವಕ್ಫ್ ಬೋರ್ಡ್ ಆಸ್ತಿ ಎಂದು ಘೊಷಣೆ ಮಾಡಲಾಗಿದೆ. ಆದರೆ 2022ರಲ್ಲಿ ಈದ್ಗಾ ಮೈದಾನದ ಬಗ್ಗೆ ಪ್ರಶ್ನೆ ಮಾಡಲಾಗುತ್ತಿದೆ. ವಕ್ಫ್ ಬೋರ್ಡ್ ಆಸ್ತಿ ಎಂದು ನೋಟಿಫೀಕೇಷನ್ ಕೂಡ ಆಗಿದೆ ಎಂದು ವಾದಿಸಿದರು ಕಪಿಲ್ ಸಿಬಲ್.
ಮುಸ್ಲಿಂ ಸಮುದಾಯ ಈ ಮೈದಾನವನ್ನು ಪ್ರಾರ್ಥನೆಗೆ ಬಳಸುತ್ತಿದೆ. ವರ್ಷದಲ್ಲಿ ಎರಡು ಹಬ್ಬಗಳನ್ನು ಮೈದಾನದಲ್ಲಿ ಆಚರಿಸಲಾಗುತ್ತದೆ. ಓಪನ್ ಲ್ಯಾಂಡ್ ಅಂತ ಇದನ್ನು ಬಳಸಲು ಸಾಧ್ಯವಿಲ್ಲ. ವಕ್ಫ್ ಬೋರ್ಡ್ಗೆ ಸೇರಿದ ಆಸ್ತಿ ಎಂಬುದಕ್ಕೆ ಎಲ್ಲಾ ದಾಖಲೆಗಳು ಇವೆ. ಮೈದಾನದಲ್ಲಿ ಎಲ್ಲಾ ಸಮುದಾಯದ ಮಕ್ಕಳು ಆಟವಾಡ್ತಾರೆ. ಹಿಂದೂ ಪರ ಸಂಘಟನೆಗಳು ಈದ್ಗಾ ಗೋಡೆ ಕೆಡವಿ ಹಾಕ್ತಿವಿ ಎಂದು ಬೆದರಿಸುತ್ತಾರೆ. ಬಾಬರಿ ಮಸೀದಿ ರೀತಿಯಲ್ಲಿ ಒಡೆಯುವ ಬೆದರಿಕೆ ಹಾಕಿದ್ದಾರೆ ಎಂದು ಕಪಿಲ್ ಸಿಬಲ್ ಕೋರ್ಟ್ ಗಮನಕ್ಕೆ ತಂದರು.
ಗಣೇಶೋತ್ಸವ ನಿರಾಕರಿಸಿದ್ದ ಏಕಸದಸ್ಯ ಪೀಠ
ಮೈದಾನ ಕಂದಾಯ ಇಲಾಖೆಗೆ ಸೇರಿದ್ದು ಎಂಬ ಸರಕಾರದ ಆದೇಶವನ್ನು ಪ್ರಶ್ನಿಸಿ ವಕ್ಫ್ ಇಲಾಖೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ಬೆಂಗಳೂರು ಜಿಲ್ಲೆಯ ವಕ್ಫ್ ಸಲಹಾ ಸಮಿತಿ ಹೈಕೋರ್ಟ್ ಮೊರೆ ಹೋಗಿತ್ತು. ಆಗಸ್ಟ್ 25 ರಂದು ನ್ಯಾಯಾಧೀಶ ಹೇಮಂತ್ ಚಂದನ್ ಗೌಡರ ಅವರಿದ್ದ ಏಕಸದಸ್ಯ ಪೀಠವು, ಈದ್ಗಾ ಮೈದಾನದಲ್ಲಿ ವರ್ಷದಲ್ಲಿ ಎರಡು ದಿನ ಬಕ್ರೀದ್ ಮತ್ತು ಮೊಹರಂ ದಿನಕ್ಕೆ ಮಾತ್ರ ನಮಾಜ್ ಮಾಡಬಹುದು. ಬಿಬಿಎಂಪಿ ಅಥವಾ ಸರಕಾರ ಸ್ವಾತಂತ್ರ್ಯ ಮತ್ತು ಗಣರಾಜ್ಯ ದಿನಗಳಿಗೆ ಧ್ವಜಾರೋಹಣಕ್ಕೆ ಬಳಕೆ ಮಾಡಬಹುದು. ಉಳಿದಂತೆ ಆಟದ ಮೈದಾನವಾಗಿಯೇ ಉಳಿಸಿಕೊಳ್ಳಬೇಕು. ಯಾವುದೇ ಆಚರಣೆಗೂ ಅವಕಾಶ ನೀಡಬಾರದು ಎಂದು ಮಧ್ಯಂತರ ಆದೇಶ ನೀಡಿತ್ತು.
ಆದರೆ ಏಕಸದಸ್ಯ ಪೀಠದ ಆದೇಶವನ್ನು ಕಂದಾಯ ಇಲಾಖೆ ಪ್ರಶ್ನಿಸಿದ್ದು ಹಂಗಾಮಿ ಮುಖ್ಯ ನ್ಯಾಯಾಧೀಶ ಅಲೋಕ್ ಅರಾಧೆ ಮತ್ತು ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ಅರ್ಜಿ ವಿಚಾರಣೆ ನಡೆಸಿತ್ತು. ಏಕಸದಸ್ಯ ಪೀಠ ನೀಡಿರುವ ಆದೇಶದಲ್ಲಿ ಬದಲಾವಣೆ ಇಲ್ಲ. ಆದರೂ ಜಿಲ್ಲಾಧಿಕಾರಿಗೆ ಬಂದಿರುವ ಅರ್ಜಿಗಳನ್ನು ಪರಿಗಣಿಸಿ ಸೀಮಿತ ಅವಧಿಗೆ ಧಾರ್ಮಿಕ ಆಚರಣೆಗೆ ಅವಕಾಶ ಕೊಡಬಹುದು ಎಂದು ತೀರ್ಪು ನೀಡಿದ್ದರು. ಇದರಿಂದ ಹಿಂದು ಸಂಘಟನೆಗಳು ಖುಷ್ ಆಗಿದ್ದವು. ಆದರೆ ಹೈಕೋರ್ಟ್ ಆದೇಶ ಪ್ರಶ್ನಿಸಿ ವಕ್ಫ್ ಮಂಡಳಿಯವರು ಸುಪ್ರೀಂ ಕೋರ್ಟ್ ಹೋಗಿದ್ದು ತಡೆಯಾಜ್ಞೆ ತಂದಿದ್ದಾರೆ.
No Ganesh Chaturthi celebrations will be held at Bengaluru's Idgah Maidan, after an order of "status quo" by the Supreme Court today on a petition by the Karnataka Waqf Board. This ended a deadlock just in time — the Hindu festival is tomorrow and day after — as the state government was insisting on giving permissions to set up pandals.
16-07-25 11:47 am
HK News Desk
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
16-07-25 01:01 pm
Mangalore Correspondent
Dharmasthala Missing case, Ananya Bhat, Compl...
15-07-25 10:40 pm
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
Karkala Parashurama Theme Park: ಕಾರ್ಕಳ ಪರಶುರಾ...
15-07-25 02:28 pm
16-07-25 11:42 am
Mangalore Correspondent
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm
Lawrence Bishnoi, Bangalore, Crime: ಡಾನ್ ಲಾರೆ...
15-07-25 06:52 pm
Mangalore, Moodbidri college, Rape, Blackmail...
15-07-25 06:07 pm
ಹಿಂದು ಯುವತಿಯರನ್ನು ಮತಾಂತರ ಮಾಡುತ್ತಿದ್ದಾನೆಂದು ಸು...
15-07-25 05:21 pm