ಭೀಕರ ರಸ್ತೆ ಅಪಘಾತ ; ಬಾಣಂತಿ ಸಹಿತ ಒಂದೇ ಕುಟುಂಬದ ಮೂವರು ಸಾವು 

01-09-22 02:41 pm       HK News Desk   ಕರ್ನಾಟಕ

ಸರಕಾರಿ ಬಸ್ ಮತ್ತು ಎರಡು ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ  ಮೂರು ತಿಂಗಳ ಹಸುಳೆ, ಬಾಣಂತಿ ಸೇರಿದಂತೆ ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ಕೊಲ್ಹಾರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 218ರ  ಕುಪಕಡ್ಡಿ ಕ್ರಾಸ್ ಬಳಿ ನಡೆದಿದೆ.

ವಿಜಯಪುರ, ಸೆ.1: ಸರಕಾರಿ ಬಸ್ ಮತ್ತು ಎರಡು ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ  ಮೂರು ತಿಂಗಳ ಹಸುಳೆ, ಬಾಣಂತಿ ಸೇರಿದಂತೆ ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ಕೊಲ್ಹಾರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 218ರ  ಕುಪಕಡ್ಡಿ ಕ್ರಾಸ್ ಬಳಿ ನಡೆದಿದೆ. ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಲಬುರಗಿ ಮೂಲದ ಸುನಂದಾ ಮಲ್ಲಿಕಾರ್ಜುನ ಕಲಶೆಟ್ಟಿ( 25), ಮಗು ಸುಮನ್ (3 ತಿಂಗಳು) ಮತ್ತು ಶರಣಮ್ಮ ಬಸವರಾಜ್ ಕಲಶೆಟ್ಟಿ (55) ಮೃತಪಟ್ಟವರಾಗಿದ್ದಾರೆ. ಉಮೇಶ ಕಲಶೆಟ್ಟಿ, ಅವರ ಪತ್ನಿ ಸುರೇಖಾ ಹಾಗೂ ಮಕ್ಕಳಾದ ಸುಹಾನ್ (8 ತಿಂಗಳು) ಮತ್ತು ಸಾನ್ವಿ (2) ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾರೊಂದು ಸರಕಾರಿ ಬಸ್ಸನ್ನು ಓವರ್ ಟೇಕ್ ಮಾಡುವ ಭರದಲ್ಲಿ ಬಸ್ ಮತ್ತು ಕಾರಿಗೆ ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.ಈ ಬಗ್ಗೆ ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ghastly accident at vijayapura 3 Including pregnant women Killed.