ಬೆಂಗಳೂರಿನಲ್ಲಿ ಎಸ್‌ಡಿಎಂ ನ್ಯಾಚುರೋಪತಿ ಕ್ಯಾಂಪಸ್ ಉದ್ಘಾಟಿಸಿದ ಯೋಗಿ ಆದಿತ್ಯನಾಥ್ ; ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು ಧಾರ್ಮಿಕ ಕ್ಷೇತ್ರದ ದಿಗ್ಗಜ್ಜರು ! 

01-09-22 07:31 pm       Bangalore Correspondent   ಕರ್ನಾಟಕ

ಬೆಂಗಳೂರಿನ ನೆಲಮಂಗಲದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಎಸ್‌ಡಿಎಂ ಇನ್‌ಸ್ಟಿಟ್ಯೂಟ್‌ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸಸ್ ಕ್ಯಾಂಪಸ್ ಅನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗುರುವಾರ ಉದ್ಘಾಟಿಸಿದರು.

Photo credits : Social News XYZ

ಬೆಂಗಳೂರು,ಸೆ.1: ಬೆಂಗಳೂರಿನ ನೆಲಮಂಗಲದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಎಸ್‌ಡಿಎಂ ಇನ್‌ಸ್ಟಿಟ್ಯೂಟ್‌ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸಸ್ ಕ್ಯಾಂಪಸ್ ಅನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗುರುವಾರ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ಕ್ಷೇಮವನ ಎಂಬ ಹೆಸರಿನಲ್ಲೇ ನೆಮ್ಮದಿ ಇದೆ. ಮೊದಲೆಲ್ಲ ಪೊಸ್ಟ್ ಕಾರ್ಡ್ ನಲ್ಲಿ ಕ್ಷೇಮಾ ಎಂದು ಬರೆಯುತ್ತಿದ್ದರು. ಕ್ಷೇಮಾ ಬಿಟ್ಟು ಎಲ್ಲಾ ರೂಡಿಸಿಕೊಂಡಿದ್ದೇವೆ ನಾವು. ಆತ್ಮ ಮತ್ತು ದೇಹವನ್ನ ನೈಸರ್ಗಿಕ ಶುದ್ದೀಕರಣವಾಗಿದೇ ಈ ಕ್ಷೇಮವನ. ಈ ವನದಲ್ಲಿ ಧರ್ಮವೂ ಸೇರಿಕೊಂಡಿದೆ ಎಂದು ಹೇಳಿದರು.

UP CM Adityanath inaugurates wellness centre in Bengaluru

ಯೋಗಿ ಬಂದಿದ್ದು ಹೆಮ್ಮೆ ಮತ್ತು ಬಹಳಷ್ಟು ಸಂತೋಷವಾಗಿದೆ. ಕರ್ನಾಟಕಕ್ಕೂ ಅವರಿಗೂ ಸಂಬಂಧವಿದೆ. Spirituality and administration ಎರಡು ಮಾಡಬಹುದು ಎಂದು ಯೋಗಿ ತೋರಿಸಿಕೊಟ್ಟಿದ್ದಾರೆ. ನಮ್ಮ ಸಮಾಜದಲ್ಲಿ ಗುರುಗಳಿಗೆ ಉನ್ನತ ಸ್ಥಾನವಿದೆ. ಇವರು ನಡೆದಂತೆ ನಡೆದಿದ್ದಾರೆ. ಒಬ್ಬರು ಸ್ವಾಮೀಜಿ ದಕ್ಷ ಆಡಳಿತಗಾರ ಎಂದು ತೋರಿಸಿದ್ದಾರೆ ಎಂದರು.

Nelamangala: UP CM Yogi Adityanath during the inauguration of 'Kshema Vana' Naturopathy Center #Gallery

ದೇಶದ ದೊಡ್ಡ ರಾಜ್ಯದ ಮುಖ್ಯಮಂತ್ರಿಯಾದ ಯೋಗಿ ಆದಿತ್ಯನಾಥ್ ಅವರು ದಕ್ಷ ಪ್ರಮಾಣಿಕ ಹಾಗೂ ಯಶಸ್ವಿ ಸಿಎಂ. ಯೋಗಿ ಬಂದಿದ್ದು ಹೆಮ್ಮೆ ಮತ್ತು ಬಹಳಷ್ಟು ಸಂತೋಷವಾಗಿದೆ ಎಂದು ಹೇಳಿದರು.

Nelamangala: UP CM Yogi Adityanath during the inauguration of 'Kshema Vana' Naturopathy Center #Gallery

ಬಳಿಕ ಮಾತನಾಡಿದ ಯೋಗಿ, ಕರ್ನಾಟಕದಲ್ಲಿ  ಮಂಜುನಾಥ ಎನ್ನುವುದು ನಾಥ ಪರಂಪರೆಯನ್ನೇ ಮುಂದುವರಿಸುತ್ತದೆ. ಇದರೊಂದಿಗೆ ಆಧ್ಯಾತ್ಮಿಕ ಭಾವನದಿಂದ ಉತ್ತರ ಪ್ರದೇಶ ಹಾಗೂ ಕರ್ನಾಟಕವನ್ನು ಹೊಂದಾಗಿಸುತ್ತದೆ ಎಂದು ಹೇಳಿದರು.

ವಿರೇಂದ್ರ ಹೆಗಡೆಯವರು ಹಿಂದಿನಿಂದಲೂ ಯೋಗ ಹಾಗೂ ನ್ಯಾಚುರೋಪಥಿಯನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಬೆಂಗಳೂರಿನಲ್ಲಿ ಇವತ್ತು ಈ ಕೇಂದ್ರ ಸ್ಥಾಪನೆಯಾಗಿರುವುದು ಕರ್ನಾಟಕಕ್ಕೆ ಮಾತ್ರವಲ್ಲದೇ ದೇಶಕ್ಕೆ ಉಪಯೋಗವಾಗಲಿದೆ. ಕರ್ನಾಟಕದ ಮಂತ್ರಿಮಂತ್ರಿ ಒಬ್ಬ ಯೋಗಿಯ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಭಾರತದ ಆರ್ಥಿಕತೆಯನ್ನು ಐದು ಲಕ್ಷ ಕೋಟಿ ಡಾಲರ್‌ಗೆ ಹೆಚ್ಚಿಸುವ ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಗೆ ಕೇವಲ ಸರ್ಕಾರ ಮಾತ್ರವಲ್ಲ, ಸಮಾಜ ಎಲ್ಲರೂ ಪ್ರಯತ್ನಿಸಬೇಕು. ಇದಕ್ಕಾಗಿ ನಮ್ಮ ಕಾರ್ಯದಲ್ಲಿ ವೃತ್ತಿಪರತೆಯನ್ನು ಮೂಡಿಸಿಕೊಳ್ಳಬೇಕಿದೆ ಎಂದು ಕರೆ ನೀಡಿದರು.

Nelamangala: UP CM Yogi Adityanath during the inauguration of 'Kshema Vana' Naturopathy Center #Gallery

ಕರ್ನಾಟಕವನ್ನು ಎಂದಿಗೂ ಸಂಕಟದಲ್ಲಿನ ಸ್ನೇಹಿತ ಎಂದು ಕರೆಯಲಾಗುತ್ತದೆ. ಇದೇ ಕರ್ನಾಟಕದಲ್ಲಿ ಶ್ರೀರಾಮನ ಸಹಾಯಕ್ಕೆ ಹನುಮಂತ ಬಂದಿದ್ದ. ಹನುಮಂತನ ಸಹಾಯದಿಂದಲೇ ಸೇತುಬಂಧ ನಿರ್ಮಾಣವಾಗಿ ಭಾರತದಲ್ಲಿ ರಾಮರಾಜ್ಯ ಸ್ಥಾಪನೆಯ ಆಧಾರವಾಯಿತು ಎಂದು ಹೇಳಿದರು.

ಈ ಹಿಂದೆ ಯೋಗದ ಕುರಿತು ವಿವಿಧ ಮಾತುಗಳಿದ್ದವು. ಆದ್ರೆ, ಇಂದು ಭಾರತದಲ್ಲಿ ಮಾತ್ರವಲ್ಲ ಪ್ರಪಂಚದ ನೂರಾರು ದೇಶಗಳು ಯೋಗ ಪರಂಪರೆಯೊಂದಿಗೆ ಕೈಜೋಡಿಸಿದ್ದಾರೆ. ಈ ದೇಹದ ಮೂಲಕವೇ ನಮ್ಮ ಎಲ್ಲಾ ಕಾರ್ಯಕ್ರಮವನ್ನು  ನಡೆಸಬೇಕು ಎನ್ನುವುದು ಯೋಗ ತಿಳಿಸಿದೆ. ಕೊರೋನಾ ಸಂದರ್ಭದಲ್ಲೂ ಯೋಗದ ಕುರಿತು ಜನರಿಗೆ ಅರಿವಾಗಿದೆ. ದೇಹದ ರೋಗನಿರೋಧಕತೆಯನ್ನು ಹೆಚ್ಚಿಸಿಕೊಳ್ಳಲು ಆಯುರ್ವೇದ, ಯೋಗ ಮುಖ್ಯವಾಗಿದೆ ಎಂದು ತಿಳಿಸಿದರು.

ಬೊಮ್ಮಾಯಿಯನ್ನು ಹಾಡಿಹೊಗಳಿದ ಯೋಗಿ ನಾನು ಒಬ್ಬ ಯೋಗಿ, ನಿರ್ಮಲಾನಂದ ಸ್ವಾಮೀಜಿ ಸಹ ಯೋಗಿಯಾಗಿದ್ದಾರೆ. ನಮ್ಮ ಜತೆಗೆ ಜನಪ್ರಿಯ ಮುಖ್ಯಮಂತ್ರಿಯಾಗಿರುವ ಬೊಮ್ಮಾಯಿ ಅವರು ಸಹ ಒಬ್ಬ ಯೋಗಿಯಂತೆಯೇ ರಾಜ್ಯವನ್ನ ಮುನ್ನಡೆಸುತ್ತಿದ್ದಾರೆ. ಕರ್ನಾಟಕದ ಅಭಿವೃದ್ಧಿಗೆ ಅವರು ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಅವರನ್ನು ಹಾಡಿಹೊಗಳಿದರು.

ಕರ್ನಾಟಕವನ್ನು ಅಭಿವೃದ್ಧಿಪಥದಲ್ಲಿ ಬೊಮ್ಮಾಯಿ ಅವರು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಬೊಮ್ಮಾಯಿ ನೇತೃತ್ವದಲ್ಲಿ ದೇಶದ ಅತಿ ದೊಡ್ಡ ಆರ್ಥಿಕ ವ್ಯವಸ್ಥೆಯಾಗಿ ಕರ್ನಾಟಕ ರೂಪುಗೊಳ್ಳಲಿದೆ.ಈ ಕಾರ್ಯದಲ್ಲಿ ನಮ್ಮ ಸಂಪೂರ್ಣ ಸಹಕಾರ ಇರಲಿದೆ ಎಂದು ಭರವಸೆ ನೀಡಿದರು

ಕಾರ್ಯಕ್ರಮದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮುಂತಾದವರು ಭಾಗಿಯಾಗಿದ್ದರು.

Uttar Pradesh Chief Minister Yogi Adityanath on Thursday inaugurated a wellness centre 'Kshemavana' of the Sri Dharmasthala Manjunatheshwara Institute of Naturopathy and Yogic Sciences (SDMINYS) at Nelamangala on the outskirts of the city on Thursday.