ಶಿವಮೊಗ್ಗ ಪ್ರೇಮ್ ಸಿಂಗ್ ಚೂರಿ ಇರಿತ ಪ್ರಕರಣ ; ಆರೋಪಿ ಜಬೀವುಲ್ಲಾಗೆ ಉಗ್ರರ ಲಿಂಕ್, ಎನ್ಐಎಗೆ ವಹಿಸ್ತೇವೆಂದ ಗೃಹ ಸಚಿವ 

03-09-22 06:08 pm       HK News Desk   ಕರ್ನಾಟಕ

ಇತ್ತೀಚೆಗೆ ಸಾವರ್ಕರ್ ಬ್ಯಾನರ್ ವಿವಾದ ಸಂದರ್ಭದಲ್ಲಿ ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚೂರಿ ಇರಿತ ನಡೆದಿತ್ತು. ಪ್ರಕರಣದಲ್ಲಿ ಪ್ರಮುಖ ಆರೋಪಿ ಜಬೀವುಲ್ಲಾ ಎಂಬಾತನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದರು‌.

ಶಿವಮೊಗ್ಗ, ಸೆ.3 : ಇತ್ತೀಚೆಗೆ ಸಾವರ್ಕರ್ ಬ್ಯಾನರ್ ವಿವಾದ ಸಂದರ್ಭದಲ್ಲಿ ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚೂರಿ ಇರಿತ ನಡೆದಿತ್ತು. ಪ್ರಕರಣದಲ್ಲಿ ಪ್ರಮುಖ ಆರೋಪಿ ಜಬೀವುಲ್ಲಾ ಎಂಬಾತನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದರು‌. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಜಬೀವುಲ್ಲಾನಿಗೆ ಉಗ್ರರ ಜತೆ ಸಂಬಂಧ ಇರುವುದು ತಿಳಿದುಬರುತ್ತಿದೆ. ಸದ್ಯದಲ್ಲೇ ಈ ಪ್ರಕರಣವನ್ನು ಎನ್ಐಎ ಗೆ ಹಸ್ತಾಂತರ ಮಾಡುತ್ತೇವೆ ಎಂದು ಹೇಳಿದ್ದಾರೆ. 

ಮುರುಘಾ ಶ್ರೀಗಳ ಬಂಧನ‌ ಕುರಿತ ಪ್ರಶ್ನೆಗೆ, ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಇದರಲ್ಲಿ ಸರಕಾರ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ. ತನಿಖೆ ದೃಷ್ಟಿಯಿಂದ ಹೆಚ್ಚಿಗೆ ಏನನ್ನೂ ಹೇಳುವುದಿಲ್ಲ. ಮುರುಘಾ ಮಠಕ್ಕೆ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿದ್ದು, 7 ಕೆಎಸ್ ಆರ್ ಪಿ ತುಕಡಿ ನಿಯೋಜಿಸಲಾಗಿದೆ ಎಂದರು.

PM Modi's visit to infuse enthusiasm in party's rank and file | Deccan  Herald

ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯದ ಬಗ್ಗೆ ಮೋದಿಯವರಿಗೆ ವಿಶೇಷ ಆಸಕ್ತಿ ಇದೆ. ತಿಂಗಳಿಗೊಮ್ಮೆ ಭೇಟಿ ನೀಡುವುದಾಗಿ‌ ಹೇಳಿದ್ದಾರೆ. ಚುನಾವಣೆಗೆ ನಾವು ಸಿದ್ಧರಾಗಿದ್ದೇವೆ. ಸೆ.8 ರಂದು ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದರು. 

Dissent in JD(S): Party loyalists openly lash out against ex CM Kumaraswamy  | The News Minute

ಮೋದಿ ಮಳೆಹಾನಿಯಾದ ವೇಳೆ ಭೇಟಿ ನೀಡಿಲ್ಲ ಎಂಬ ಹೆಚ್ ಡಿಕೆ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಒಬ್ಬ ಪ್ರಧಾನಿಯಾಗಿ ಏನು ಕೆಲಸ ಮಾಡಬೇಕೋ ಅದನ್ನು ಮೋದಿ ಮಾಡುತ್ತಾರೆ. ಮಾಜಿ ಸಿಎಂ ಆಗಿ ಅವರ ಹೇಳಿಕೆ ಸರಿಯಲ್ಲ. ಮಳೆ ಹಾನಿಗೆ ಸರಕಾರ ಏನೇನು ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಂಡಿದೆ ಎಂದರು.

The Karnataka government has decided to hand over the investigation of the stabbing case following the row over installation of Veer Savarkar's flex in Shivamogga to the National Investigation Agency (NIA).Home Minister Araga Jnanendra on Saturday stated that, "the incident of stabbing to Prem Singh in connection with Veer Savarkar flex removal will be handed over to the NIA soon."