ಬ್ರೇಕಿಂಗ್ ನ್ಯೂಸ್
04-09-22 05:09 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.4: ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧನಕ್ಕೀಡಾಗಿರುವ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಹಲವಾರು ಮಕ್ಕಳನ್ನು ಮಾಡಿದ್ದಾರೆ. ಹಲವು ಕಡೆ ಮಕ್ಕಳನ್ನು ಹೊಂದಿದ್ದಾರೆ. ಆ ಮಕ್ಕಳನ್ನು ಮತ್ತು ಮುರುಘಾ ಸ್ವಾಮೀಜಿಯನ್ನು ಡಿಎನ್ಎ ಟೆಸ್ಟ್ ಮಾಡಿಸಿದರೆ ಸತ್ಯ ಹೊರಬರುತ್ತದೆ. 20 ವರ್ಷಗಳ ಹಿಂದೆಯೇ ಇವರದ್ದು ಹೊರಗೆ ಬರಬೇಕಿತ್ತು. ಈಗ ಹೊರಕ್ಕೆ ಬಂದಿದೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಮುರುಘಾ ಮಠದಲ್ಲಿ ಈ ಹಿಂದೆ ಸ್ವಾಮೀಜಿಯಾಗಿದ್ದ ಶರಣಾನಂದ ಅಲಿಯಾಸ್ ಮಂಜುನಾಥ್ ಎಂಬವರು ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿ ವಾಹಿನಿಯ ಸ್ಟುಡಿಯೋದಲ್ಲಿ ಕುಳಿತು ಶರಣಾನಂದ ಅವರು ಮಾತನಾಡಿದ್ದು, ಶಿವಮೂರ್ತಿ ಸ್ವಾಮೀಜಿಯ ಅನೈತಿಕ, ಅಕ್ರಮಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನಾನು ಮಾಡ್ತಿರೋ ಆರೋಪಕ್ಕೆಲ್ಲ ಸಾಕ್ಷಿಗಳಿವೆ. ಎಲ್ಲಿ ಬೇಕಾದ್ರೂ ಸಾಕ್ಷಿ ತೋರಿಸಲು ರೆಡಿ ಇದ್ದೇನೆ ಎಂದು ಶರಣಾನಂದ ಅವರು ಹೇಳಿದ್ದಾರೆ. ಮೂಲತಃ ಮಂಜುನಾಥ್ ಎಂಬ ಹೆಸರಿನವರಾಗಿದ್ದ ಇವರು ಶರಣಾನಂದ ಸ್ವಾಮೀಜಿಯಾಗಿ 2001ರಲ್ಲಿ ಮುರುಘಾ ಮಠಕ್ಕೆ ಸೇರಿದ್ದರು. ಇಂಗ್ಲಿಷ್, ಹಿಂದಿ ಸೇರಿದಂತೆ ಆರು ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದರಿಂದ ಮುರುಘಾ ಸ್ವಾಮೀಜಿಗೆ ಇಂಗ್ಲಿಷ್, ಹಿಂದಿಯನ್ನೂ ಕಲಿಸಿದ್ದರಂತೆ. ಅಲ್ಲದೆ, ಸ್ವಾಮೀಜಿ ಜೊತೆ ಆಪ್ತರಾಗಿಯೇ ಇದ್ದರಂತೆ.
ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹೀಗೆ ಹಲವು ದೇಶಗಳಿಗೆ ಜೊತೆಯಾಗಿಯೇ ಪ್ರವಾಸ ಹೋಗಿದ್ದರು. ಆದರೆ, ಸ್ವಾಮೀಜಿ ಮಾಡುತ್ತಿದ್ದ ಅನೈತಿಕ ಕೆಲಸಗಳನ್ನು ಪ್ರಶ್ನೆ ಮಾಡಿದ್ದಕ್ಕಾಗಿ 2008ರಲ್ಲಿ ಶರಣಾನಂದ ಅವರನ್ನು ಮಠದಿಂದ ಹೊರಕ್ಕೆ ಹಾಕಲಾಗಿತ್ತು. ಆನಂತರ, ಕಾವಿಯನ್ನು ತ್ಯಜಿಸಿದ್ದ ಶರಣಾನಂದ ಅವರು ಬಿಳಿ ಶರ್ಟ್ ಹಾಕ್ಕೊಂಡು ಸನ್ಯಾಸಿಯಾಗಿಯೇ ಉಳಿದುಕೊಂಡಿದ್ದಾರೆ. ಸ್ವಾಮೀಜಿ ಮಹಿಳೆಯರ ಸಂಗಕ್ಕೆ ಬಿದ್ದು ಹಲವು ಕಡೆ ಮಠಕ್ಕೆ ಸೇರಿದ್ದ ಆಸ್ತಿಯನ್ನು ಮಾರಿದ್ದಾರೆ. ಮಠಕ್ಕೆ ಸೇರಿದ ಆಸ್ತಿಗಳಿರುವಲ್ಲಿಯೇ ಸ್ವಾಮೀಜಿಗೆ ಹುಟ್ಟಿದ ಮಕ್ಕಳಿದ್ದಾರೆ. ಮಠದಲ್ಲಿರುವ ಬಸವಾದಿತ್ಯ ಎಂಬ ಯುವಕನೂ ಸ್ವಾಮೀಜಿಗೆ ಹುಟ್ಟಿದವನು ಎಂಬ ಶಂಕೆಯಿದೆ. ಉತ್ತರಾಧಿಕಾರಿಯಾಗಿ ಬಸವಾದಿತ್ಯನನ್ನು ಮಾಡುವ ಹುನ್ನಾರದಲ್ಲಿ ಸ್ವಾಮೀಜಿ ಇದ್ದಾರೆ ಎಂದು ಶರಣಾನಂದ ಹೇಳಿದ್ದಾರೆ.
ಮುರುಘಾ ಮಠಕ್ಕೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರದಲ್ಲಿ ಬಹಳಷ್ಟು ಆಸ್ತಿಗಳಿವೆ. ಬೆಂಗಳೂರಿನ ಗಾಂಧಿ ನಗರದಲ್ಲಿದ್ದ ಆಸ್ತಿಯನ್ನು ಮಾರಾಟ ಮಾಡಿದ್ದಾರೆ. ಅದೇ ರೀತಿ ಹಲವು ಕಡೆಗಳಲ್ಲಿದ್ದ ಆಸ್ತಿಯನ್ನು ಯಾರದ್ದೋ ಹೆಸರಿಗೆ ಬರೆದು ಕೊಟ್ಟಿದ್ದಾರೆ. ತನಗೆ ಇಷ್ಟ ಬಂದಂತೆ, ವೈಯಕ್ತಿಕ ಅಪೇಕ್ಷೆಗಳನ್ನು ಈಡೇರಿಸಿದ್ದಕ್ಕಾಗಿ ಆಸ್ತಿ ಮಾರಿದ್ದು ಇದೆ. ಮಕ್ಕಳು ಎಲ್ಲೆಲ್ಲಿ ಇದ್ದಾರೆ ಎನ್ನುವುದನ್ನು ತೋರಿಸುತ್ತೇನೆ. ಡಿಎನ್ಎ ಟೆಸ್ಟ್ ಮಾಡಿದರೆ, ಇವೆಲ್ಲ ಸತ್ಯ ಹೊರಬರುತ್ತದೆ. ಈ ಸತ್ಯಗಳು ಈಗಲ್ಲ, 20 ವರ್ಷಗಳ ಹಿಂದೆಯೇ ಹೊರ ಬರಬೇಕಿತ್ತು. ಸ್ವಾಮೀಜಿ ಮಾಡಿರುವ ಭಾನಗಡಿಗಳು ಬಹಳಷ್ಟಿದೆ ಎನ್ನುವ ಮೂಲಕ ಸ್ಫೋಟಕ ಮಾಹಿತಿಗಳನ್ನು ಶರಣಾನಂದ ಅಲಿಯಾಸ್ ಮಂಜುನಾಥ್ ಹಂಚಿಕೊಂಡಿದ್ದಾರೆ.
DNA Test should be done of Murugha Mutt seer Shivamurthy, he has many children I will give their address says Swamiji Sharananada taking in a interview with a state channel. Chief pontiff of Murugha Math Shivamurthy Murugha Sharanaru, who is accused of sexually harassing minor girls, on Saturday underwent various medical tests at the Chitradurga district hospital. The police brought him to the district hospital under tight security from a Deputy Superintendent of Police's office where he is being questioned.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm