ಬೆಂಗಳೂರಿನ ರಸ್ತೆಗಳಲ್ಲಿ ಪ್ರವಾಹ ; 50ಕ್ಕೂ ಹೆಚ್ಚು ಪ್ರದೇಶ ಜಲಾವೃತ, ಐಟಿ ಕಂಪನಿಗಳಿಗೆ ರಜೆ, ನೀರು ಪೂರೈಕೆ ಕಡಿತ, ಆಡಳಿತಕ್ಕೆ ಜನರ ಹಿಡಿಶಾಪ  

05-09-22 08:55 pm       Bangalore Correspondent   ಕರ್ನಾಟಕ

ರಾಜಧಾನಿ ಬೆಂಗಳೂರಿನಲ್ಲಿ ಮಳೆ ಅವಾಂತರ ಸೃಷ್ಟಿಸಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡು ರಸ್ತೆಯಲ್ಲಿ ಹೊಳೆ ಸೃಷ್ಟಿಯಾಗಿದೆ. ವರ್ತೂರು, ಬೆಳಂದೂರು, ಸರ್ಜಾಪುರ, ವೈಟ್ ಫೀಲ್ಡ್, ರಿಂಗ್ ರೋಡ್ ಆಸುಪಾಸು, ಬಿಇಎಂ ಲೇಔಟ್ ಸೇರಿದಂತೆ 50ಕ್ಕೂ ಹೆಚ್ಚಿನ ಪ್ರದೇಶಗಳಲ್ಲಿ ಮಳೆ ನೀರು ನಿಂತು ಪ್ರವಾಹದ ಸ್ಥಿತಿ ಉಂಟಾಗಿದೆ.

ಬೆಂಗಳೂರು, ಸೆ.5: ರಾಜಧಾನಿ ಬೆಂಗಳೂರಿನಲ್ಲಿ ಮಳೆ ಅವಾಂತರ ಸೃಷ್ಟಿಸಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡು ರಸ್ತೆಯಲ್ಲಿ ಹೊಳೆ ಸೃಷ್ಟಿಯಾಗಿದೆ. ವರ್ತೂರು, ಬೆಳಂದೂರು, ಸರ್ಜಾಪುರ, ವೈಟ್ ಫೀಲ್ಡ್, ರಿಂಗ್ ರೋಡ್ ಆಸುಪಾಸು, ಬಿಇಎಂ ಲೇಔಟ್ ಸೇರಿದಂತೆ 50ಕ್ಕೂ ಹೆಚ್ಚಿನ ಪ್ರದೇಶಗಳಲ್ಲಿ ಮಳೆ ನೀರು ನಿಂತು ಪ್ರವಾಹದ ಸ್ಥಿತಿ ಉಂಟಾಗಿದೆ.

ಭಾನುವಾರ ರಾತ್ರಿ ಮತ್ತು ಸೋಮವಾರ ಬೆಳಗ್ಗೆ ಭಾರೀ ಮಳೆಯಾಗಿದ್ದು, ವರ್ತೂರು ಆಸುಪಾಸಿನ ತಗ್ಗಿನ ಪ್ರದೇಶಗಳಲ್ಲಿ ಅಪಾರ್ಟ್ಮೆಂಟ್ ಗಳಿಗೆ ನೀರು ನುಗ್ಗಿದ್ದು ಬೋಟ್ ಬಳಕೆ ಮಾಡಲಾಗಿದೆ. ನೂರಾರು ಮನೆಗಳಿಗೆ ನೀರು ನುಗ್ಗಿದ್ದು, ಸಿಕ್ಕಿಬಿದ್ದ ಜನರನ್ನು ರಕ್ಷಿಸಲು ಬೋಟ್ ಬಳಕೆ ಮಾಡಲಾಯ್ತು. ನೀರಿನಿಂದ ಆವೃತವಾಗಿರುವ ಹಲವು ಪ್ರದೇಶಗಳ ವಿಡಿಯೋ ವೈರಲ್ ಆಗಿದ್ದು, ಜನರು ಬೆಂಗಳೂರು ಬಿಬಿಎಂಪಿ ಮತ್ತು ರಾಜ್ಯ ಸರಕಾರಕ್ಕೆ ಹಿಡಿಶಾಪ ಹಾಕಿದ್ದಾರೆ. ರಸ್ತೆಯಲ್ಲಿ ಪ್ರವಾಹದ ಮಾದರಿಯಲ್ಲಿ ನೀರು ಹರಿದಿದ್ದು, ಜನರು ಸಿಕ್ಕಾಕ್ಕೊಂಡು ಪರದಾಟ ಅನುಭವಿಸಿದ್ದಾರೆ. ಭಾರೀ ಮಳೆಯಿಂದಾಗಿ ವೈಟ್ ಫೀಲ್ಡ್ ನಲ್ಲಿರುವ ಐಟಿ ಕಂಪನಿಗಳು ಉದ್ಯೋಗಿಗಳಿಗೆ ರಜೆ ನೀಡಿತ್ತು.

Rains in Bengaluru Continue To Wreak Havoc, Three Lakes Overflow Into Homes

Rains in Bengaluru Continue To Wreak Havoc, Three Lakes Overflow Into Homes

Rains in Bengaluru Continue To Wreak Havoc, Three Lakes Overflow Into Homes

Bengaluru rains live | Flooded roads and homes leave citizens adrift,  techies on ORR asked to work from home - The Hindu

Bengaluru rains live | Flooded roads and homes leave citizens adrift |

Bengaluru rains live | Flooded roads and homes leave citizens adrift,  techies on ORR asked to work from home - The Hindu

Bengaluru rains live | Flooded roads and homes leave citizens adrift,  techies on ORR asked to work from home - The Hindu

ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಮತ್ತು ಕರಾವಳಿ ಜಿಲ್ಲೆಗಳು ಸೇರಿ ದಕ್ಷಿಣ ಕರ್ನಾಟಕದಲ್ಲಿ 9ನೇ ತಾರೀಕು ವರೆಗೂ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಹೀಗಾಗಿ ಈ ಭಾಗದಲ್ಲಿ ಯೆಲ್ಲೋ ಎಲರ್ಟ್ ಮಾಡಲಾಗಿದೆ. ಭಾರೀ ಮಳೆಯಿಂದಾಗಿ ಬೆಂಗಳೂರಿಗೆ ಮಂಡ್ಯದಿಂದ ಪೂರೈಕೆಯಾಗುವ ಕಾವೇರಿ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಆಗಿದ್ದು, ಪಂಪ್ ನಲ್ಲಿ ಸಮಸ್ಯೆ ಉಂಟಾಗಿದೆ. ಇದರಿಂದಾಗಿ ಇನ್ನೆರಡು ದಿನ ಬೆಂಗಳೂರಿನ 50ಕ್ಕೂ ಹೆಚ್ಚು ಕಡೆಗಳಲ್ಲಿ ನೀರು ಪೂರೈಕೆ ಇರಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರಿನ 30 ಪ್ರದೇಶಗಳು ಭಾರೀ ಮಳೆಯಿಂದ ಪೀಡಿತವಾಗಿದ್ದು, ಎಸ್ ಡಿ ಆರ್ ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. 

Bengaluru floods: Severe water logging in parts of the city; residents use  tractors to commute

Bengaluru floods: Severe water logging in parts of the city; residents use  tractors to commute

Bengaluru rains live | Flooded roads and homes leave citizens adrift,  techies on ORR asked to work from home - The Hindu

Bengaluru rains live | Flooded roads and homes leave citizens adrift,  techies on ORR asked to work from home - The Hindu

Heavy rains continue to wreak havoc in Bengaluru |

Rains in Bengaluru Continue To Wreak Havoc, Three Lakes Overflow Into Homes

ಬೆಳ್ಳಂದೂರು ಕ್ರಾಸ್‌, ಸರ್ಜಾಪುರ ರಸ್ತೆಯ ರೈನ್ಬೋ ಲೇಔಟ್ ಮತ್ತೆ ಜಲಾವೃತಗೊಂಡಿದ್ದು ಅಲ್ಲಿನ ನಿವಾಸಿಗಳು ಜಲದಿಗ್ಬಂಧನದಲ್ಲಿದ್ದಾರೆ. ರೈನ್ ಬೋ ‌ಲೇಔಟ್ನ ಅಪಾರ್ಟ್ಮೆಂಟ್ ಬೇಸ್ಮೆಂಟ್ಗೆ ನೀರು ನುಗ್ಗಿದೆ.ಸರ್ಜಾಪುರ ರಸ್ತೆಯ ವಿಪ್ರೋ ಕಂಪನಿ ಸೇರಿ ಇಡೀ ಏರಿಯಾಗೆ ನೀರು ನುಗ್ಗಿದೆ. ಶಾಂತಿನಗರ, ಹೆಬ್ಬಾಳ ರಸ್ತೆಯಲ್ಲಿ ನೀರು ನಿಂತು ಪರಿಣಾಮ ವಾಹನ ಸವಾರರು ಪರದಾಟ ನಡೆಸುವಂತಾಗಿದೆ. ಬೆಂಗಳೂರಿನ ಮಾರತಹಳ್ಳಿ-ಸಿಲ್ಕ್ ಬೋರ್ಡ್ ಜಂಕ್ಷನ್ ರಸ್ತೆಯ ಬಳಿ ಜಲಾವೃತಗೊಂಡ ರಸ್ತೆಯಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಸ್ಥಳೀಯ ಭದ್ರತಾ ಸಿಬ್ಬಂದಿ ರಕ್ಷಿಸಿದ್ದಾರೆ. ಬೆಂಗಳೂರಿನಲ್ಲಿ ಮಳೆಗೆ ಸಿಲುಕಿ ಸಂಕಷ್ಟದಲ್ಲಿರುವವರಿಗೆ ಆಹಾರ ಒದಗಿಸಲು ಅಕ್ಷಯ ಪತ್ರ ಫೌಂಡೇಶನ್ ಮುಂದೆ ಬಂದಿದೆ.

Heavy rains continued to wreak havoc in Bengaluru on Monday, 5 September, submerging several areas in the city. The most affected areas include Bellandur, Sarjapur Road, Whitefield, Outer Ring Road (ORR), and BEML Layout.Several lakes overflowed and inundated the roads, and water entered residential areas surrounding the lakes. Bellandur lake, Hallenayakanahalli lake, and Varthur lake are some of them that have overflowed due to the rains that continued to pour overnight.