ರಣಚಂಡಿ ಮಳೆಗೆ ಬೆಂಗಳೂರು ಹೈರಾಣ ; ಸರ್ಜಾಪುರ, ಯಮಲೂರು, ಇಲೆಕ್ಟ್ರಾನಿಕ್ ಸಿಟಿಯ ಐಟಿ, ಟೆಕ್ ಪಾರ್ಕ್ ಗಳಿಗೆ ನುಗ್ಗಿದ ನೀರು ! ಜಲ ದಿಗ್ಬಂಧನಕ್ಕೆ ಸಾಕ್ಷಿಯಾದ ಐಟಿ ಸಿಟಿ 

06-09-22 01:52 pm       Bangalore Correspondent   ಕರ್ನಾಟಕ

ರಣಚಂಡಿಯಂತೆ ಬಿಟ್ಟೂ ಬಿಡದೆ ಕಾಡುತ್ತಿರುವ ಮಳೆಯಿಂದಾಗಿ ಐಟಿ ರಾಜಧಾನಿ ಬೆಂಗಳೂರು ಅಕ್ಷರಶಃ ನಲುಗಿ ಹೋಗಿದೆ. ಇತಿಹಾಸದಲ್ಲೇ ಕಂಡರಿಯದ ರೀತಿ ಮಳೆ ನೀರು ರಸ್ತೆಗೆ ನುಗ್ಗಿದ್ದು ಐಷಾರಾಮಿ ವಾಹನಗಳು ಓಡಾಡುತ್ತಿದ್ದ ರಸ್ತೆಯಲ್ಲಿ ಪ್ರವಾಹ ಉಂಟಾಗಿದೆ.

ಬೆಂಗಳೂರು, ಸೆ.6: ರಣಚಂಡಿಯಂತೆ ಬಿಟ್ಟೂ ಬಿಡದೆ ಕಾಡುತ್ತಿರುವ ಮಳೆಯಿಂದಾಗಿ ಐಟಿ ರಾಜಧಾನಿ ಬೆಂಗಳೂರು ಅಕ್ಷರಶಃ ನಲುಗಿ ಹೋಗಿದೆ. ಇತಿಹಾಸದಲ್ಲೇ ಕಂಡರಿಯದ ರೀತಿ ಮಳೆ ನೀರು ರಸ್ತೆಗೆ ನುಗ್ಗಿದ್ದು ಐಷಾರಾಮಿ ವಾಹನಗಳು ಓಡಾಡುತ್ತಿದ್ದ ರಸ್ತೆಯಲ್ಲಿ ಪ್ರವಾಹ ಉಂಟಾಗಿದೆ. ಐಟಿ ಕಂಪನಿಗಳು ಹೆಚ್ಚಿರುವ ಪ್ರದೇಶದಲ್ಲೇ ಹೆಚ್ಚು ಮಳೆಯಾಗಿದ್ದು ಮಳೆ ನೀರು ರಾಡಿ ಎಬ್ಬಿಸಿದೆ. 

ಮಾರತ್ ಹಳ್ಳಿ, ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ, ವರ್ತೂರು, ಇಂದಿರಾನಗರ ಸೇರಿದಂತೆ ಆಸುಪಾಸಿನ ಏರಿಯಾಗಳಲ್ಲಿ ಐಟಿ-ಬಿಟಿ ಕಂಪನಿಗಳೇ ಹೆಚ್ಚಿವೆ. ಇಲ್ಲಿನ ಉದ್ಯೋಗಿಗಳು ನಿತ್ಯ ಐಷಾರಾಮಿ ಕಾರಿನಲ್ಲೇ ಓಡಾಡ್ತಿದ್ದರು. ಆದರೆ, ಎರಡು ದಿನಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಅಪಾರ್ಟ್ಮೆಂಟ್, ರಸ್ತೆಗಳೆಲ್ಲ ಜಲಾವೃತವಾಗಿದ್ದು ಜನರು ಕಾರುಗಳನ್ನು ಬಿಟ್ಟು ಟ್ರ್ಯಾಕ್ಟರ್ ಗಳಲ್ಲಿ ಪ್ರಯಾಣಿಸುವ ಸ್ಥಿತಿ ಬಂದಿದೆ. ಹೀಗಾಗಿ ಕೆಲ ಐಟಿ ಕಂಪನಿಗಳು ರಜೆ ಘೋಷಿಸಿದ್ರೆ, ಇನ್ನು ಕೆಲವು ಕಂಪನಿಗಳು ವರ್ಕ್ ಫ್ರಮ್ ಹೋಂಗೆ ಸೂಚನೆ ನೀಡಿವೆ. 

LIVE Bengaluru Rains News: Inundated Streets, Waterlogged Roads Pose Challenge to Restore Normal Life

ಸರ್ಜಾಪುರದ ರೈನ್ ಬೋ ಡ್ರೈವರ್ ಲೇಔಟ್, ಸನ್ನಿ ಬ್ರೂಕ್ಸ್ ಲೇಔಟ್, ರಾಮಗೊಂಡನಹಳ್ಳಿಯ ಹಲವು ಏರಿಯಾ ಸೇರಿದಂತೆ ಅನೇಕ ಪ್ರತಿಷ್ಠಿತ ಬಡಾವಣೆಗಳು ನೀರಿನಲ್ಲಿ ಮುಳುಗಿವೆ. ಈ ಭಾಗದಲ್ಲಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಎಸ್ ಡಿಆರ್ ಎಫ್ ಸಿಬ್ಬಂದಿ ರಕ್ಷಣಾ ಕಾರ್ಯ ನಡೆಸ್ತಿದ್ದಾರೆ. 

ಯಮಲೂರಿನಲ್ಲಿ ಐಟಿ ಪಾರ್ಕ್ ನುಗ್ಗಿದ ನೀರು 

Video: Rain Checkmates Bengaluru, Dramatic Visuals Highlight Plight Of India's Tech Capital

WATCH | Bengaluru Turns into 'Venice' As Roads Flooded Following Heavy  Rain; Yellow Alert Sounded

Bengaluru rains: Intensity reduces, but flooding continues on ORR - The  Hindu

Bangalore Rain: Waterlogged roads force IT employees in Bengaluru to commute  via tractor to reach work | India News

Bengaluru Rains: IT Employees Forced To Use Tractors To Reach Their Office  As Heavy Downpour Leads to Waterlogging (Watch Video) | 📰 LatestLY

ಯಮಲೂರಿನಲ್ಲಿ ದಿವ್ಯಶ್ರೀ ಟೆಕ್ ಪಾರ್ಕ್ ಜಲಬಂಧನಕ್ಕೆ ಒಳಗಾಗಿದ್ದು ಬೇಸ್ಮೆಂಟ್ ಎರಡು ಮಹಡಿಗಳಿಗೂ ನೀರು ನುಗ್ಗಿದೆ.‌ ಯಮಲೂರು ಕೆರೆ, ನಕ್ಕುಂದಿ ಕೆರೆ, ರಾಜಕಾಲುವೆ ತುಂಬಿ ಹರಿದ ಕಾರಣ ಇಡೀ ಯಮಲೂರು ಐಟಿ ಟೆಕ್ ಪಾರ್ಕ್ ಗೆ ನೀರು ನುಗ್ಗಿದೆ. ಐಟಿ ಪಾರ್ಕ್ ಕಟ್ಟಡದ ಬೇಸ್ಮೆಂಟ್ ನಲ್ಲಿ ನಿಲ್ಲಿಸಿದ್ದ ವಾಹನಗಳೆಲ್ಲ ನೀರಲ್ಲಿ ಮುಳುಗಡೆಯಾಗಿವೆ. ಇನ್ನು ಬೆಳ್ಳಂದೂರು-ಸರ್ಜಾಪುರ ರಸ್ತೆ ಪೂರ್ತಿ ಜಲಾವೃತ ಆಗಿದೆ.‌ ಈ ಭಾಗದ ಹಲವು ಲೇಔಟ್ ಗಳಲ್ಲಿ ನಿವಾಸಿಗಳಿಗೆ ಜಲದಿಗ್ಬಂಧನ ಉಂಟಾಗಿದೆ. ಸರ್ಜಾಪುರ ರಸ್ತೆಯ ದೊಡ್ಡಕನ್ನಹಳ್ಳಿಯ ರೈನ್ ಬೋ ಲೇಔಟ್, ಕಂಟ್ರಿ ಸೈಟ್ ಸೇರಿದಂತೆ ಹಲವು ಲೇಔಟ್ ಗಳು ಮುಳುಗಡೆಯಾಗಿವೆ.‌ ಇಲ್ಲಿನ ನಿವಾಸಿಗಳು ಅನ್ನ- ನೀರಿಗೂ ಸಹ ಪರದಾಟ ನಡೆಸುತ್ತಿದ್ದಾರೆ. ಹೈಫೈ ಏರಿಯಾ, ಐಟಿ ಸಿಟಿಯಲ್ಲಿದ್ದರೂ ಕುಡಿಯಲು ಶುದ್ಧ ನೀರಿಲ್ಲದೆ ಜನ ಪರದಾಡಿದ್ದಾರೆ.‌ ಮನೆಗಳಲ್ಲಿ ಅವಶ್ಯಕ ಸಾಮಗ್ರಿ, ವಸ್ತುಗಳೆಲ್ಲ ನೀರುಪಾಲಾಗಿದ್ದು ಹೊರಗಿಂದ ತರುವುದಕ್ಕೂ ಅಂಗಡಿ, ವ್ಯಾಪಾರ ಸಂಕೀರ್ಣಗಳು ಬಂದ್ ಆಗಿವೆ. ರಸ್ತೆ ಮುಳುಗಡೆ ಆಗಿರೋದ್ರಿಂದ ಸಂಚಾರವೇ ಕಷ್ಟವಾಗಿದೆ.‌ ಈ ಭಾಗದ ಅಪಾರ್ಟ್ಮೆಂಟ್, ಲೇಔಟ್ ಗಳಲ್ಲಿ ಐದಾರು ಅಡಿಗಳಷ್ಟು ನೀರು ತುಂಬಿದ್ದು ಅವಾಂತರ ಸೃಷ್ಟಿಯಾಗಿದೆ. ಸರ್ಜಾಪುರದಲ್ಲಿ ವಿಪ್ರೋ ಕಂಪನಿಯ ಕಚೇರಿಗೆ ಭಾರೀ ಪ್ರಮಾಣದ ನೀರು ನುಗ್ಗಿದ್ದು ಅಪಾರ ನಷ್ಟವಾಗಿದೆ. 

Video: Rain Checkmates Bengaluru, Dramatic Visuals Highlight Plight Of India's  Tech Capital

Parts of Bengaluru still inundated after rains batter city | Deccan Herald

Bengaluru Rains: Startup CEO forced to take tractor to reach office amid  crumbling infra

ಸರ್ಜಾಪುರ ರಸ್ತೆಯ ದೊಡ್ಡಕನ್ನಹಳ್ಳಿ ಬಳಿ ನಾಲ್ಕೈದು ಕಿಲೋಮೀಟರ್ ರಸ್ತೆ ಜಲಾವೃತ ಆಗಿದ್ದು ಹೊಳೆಯಂತಾದ ರಸ್ತೆಯಲ್ಲಿ ಸಂಚರಿಸಲಾಗದೆ ವಾಹನ ಸವಾರರ ಪರದಾಡಿದ್ದಾರೆ. ಜಲಾವೃತಗೊಂಡ ರಸ್ತೆಯಲ್ಲಿ ಒಂದ್ಕಡೆ ಟ್ರಾಫಿಕ್ ಜಾಮ್ ನಡುವೆ ವಾಹನಗಳು ಕೆಟ್ಟು ನಿಲ್ಲುತ್ತಿವೆ. ಇದರಿಂದಾಗಿ ಈ ಭಾಗದಲ್ಲಿ ವಾಸ್ತವ ಸ್ಥಿತಿ ಬಿಗಡಾಯಿಸಿದೆ. 

ಕುಡಿಯುವ ನೀರಿಗೂ ಕಂಟಕ 

Video Rain Checkmates Bengaluru Dramatic Visuals Highlight Plight Of India  s Tech Capital

Bengaluru rain woes continue: Tractors, rafts on waterlogged streets, water  pumps at layouts a common sight

ಒಂದ್ಕಡೆ ಮಳೆಯಿಂದ ಅವಾಂತರ ಆಗಿದ್ರೆ ಮತ್ತೊಂದೆಡೆ ಬೆಂಗಳೂರಿಗೆ ಇಂದು ಮತ್ತು ನಾಳೆ ಕಾವೇರಿ ನೀರು ಸಿಗೋದಿಲ್ಲ ಅಂತಾ ಜಲಮಂಡಳಿ ಅಧಿಕಾರಿಗಳು ಹೇಳಿದ್ದಾರೆ. ಕಾವೇರಿ ನೀರು ಪೂರೈಸುವ ಪಂಪ್ ಹೌಸ್ ಕೆಟ್ಟು ಹೋಗಿದ್ದರಿಂದ 50 ಕ್ಕೂ ಹೆಚ್ಚು ಮಳೆ ಪೀಡಿತ ಪ್ರದೇಶಕ್ಕೆ ನೀರು ಪೂರೈಕೆ ಆಗಲ್ಲ. ಇದರಿಂದ ಬೆಂಗಳೂರಿನ ಜನರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

The situation in several parts of rain battered Bengaluru, by and large continued to remain the same on Tuesday, with streets waterlogged, houses and vehicles partially inundated, as torrential downpour lashed the capital city on September 5 night. Using boats and tractors to cross the streets submerged in water by office goers and school children was a common sight this morning in several parts of the city like Yemalur, Rainbow Drive layout, Sunny Brooks Layout, Marathahalli among several others.