ಬ್ರೇಕಿಂಗ್ ನ್ಯೂಸ್
07-09-22 11:10 am Bangalore Correspondent ಕರ್ನಾಟಕ
ಬೆಂಗಳೂರು, ಸೆ.7: ಎರಡು ದಿನಗಳಲ್ಲಿ ಸುರಿದ ಮಳೆ ಮತ್ತು ಅದು ಸೃಷ್ಟಿಸಿದ ಅವಾಂತರ ಜಗತ್ತಿನ ಐಟಿ ರಾಜಧಾನಿಯೆಂದೇ ಗುರುತಿಸಲ್ಪಟ್ಟಿರುವ ಬೆಂಗಳೂರು ನಗರದ ಮಾನ ಹರಾಜು ಹಾಕಿದೆ. ಬಿರು ಮಳೆಯ ಕಾರಣದಿಂದಾಗಿ ರಸ್ತೆಯೇ ಹೊಳೆಯಂತಾಗಿದ್ದು ಇಲೆಕ್ಟ್ರಾನಿಕ್ ಸಿಟಿಯಲ್ಲಿ ಹತ್ತು ವರ್ಷಗಳಿಂದ ಗೂಡು ಕಟ್ಟಿದ್ದ ಐಟಿ ಪಾರ್ಕುಗಳಿಗೆ ನೀರು ನುಗ್ಗಿದ್ದು ಆಡಳಿತಾರೂಢ ಕರ್ನಾಟಕ ಸರಕಾರದ ಪಾಲಿಗೆ ದೊಡ್ಡ ಮೈನಸ್ ಆದಂತಾಗಿದೆ. ವಾರದ ಹಿಂದೆ ಮೂಲ ಸೌಕರ್ಯ ಕೊರತೆಯ ಕಾರಣಕ್ಕೆ 40ಕ್ಕೂ ಹೆಚ್ಚು ಐಟಿ ಕಂಪನಿಗಳು ಬೆಂಗಳೂರು ತೊರೆಯುವ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದವು. ಇದೀಗ ಮಳೆಯಿಂದಾದ ಅವಾಂತರ ಕಾಕತಾಳೀಯ ಆಗಿದ್ದರೂ, ಆಡಳಿತ ನಡೆಸುತ್ತಿರುವ ಸರಕಾರದ ಪಾಲಿಗೆ ವೈಫಲ್ಯ ಎಂದೇ ಬಿಂಬಿತವಾಗುತ್ತಿದೆ.
ಈ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದ್ದರಿಂದ ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಬೊಮ್ಮಾಯಿ, ಶತಮಾನದ ಮಳೆಯಿಂದಾಗಿ ಇಂಥ ಸ್ಥಿತಿ ಎದುರಾಗಿದೆ. ಈ ರೀತಿಯ ಮಳೆ ಇತ್ತೀಚಿನ ವರ್ಷಗಳಲ್ಲಿ ಆಗಿದ್ದಿಲ್ಲ. ಹಾಗಿದ್ದರೂ, ಬೆಂಗಳೂರಿನ ದುರಂತದ ಸ್ಥಿತಿಗೆ ಹಿಂದಿನ ಸರಕಾರದ ದುರಾಡಳಿತವೇ ಕಾರಣ. ಕೆರೆ, ರಾಜಕಾಲುವೆ ಒತ್ತುವರಿ ಮಾಡುವುದಕ್ಕೆ ಅವಕಾಶ ಕೊಟ್ಟಿದ್ದರಿಂದಲೇ ನೆರೆ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ಕೊನೆಯ ಬಾರಿಗೆ 1992ರಲ್ಲಿ ಬೆಂಗಳೂರಿನಲ್ಲಿ ಈ ಪರಿ ಮಳೆಯಾಗಿತ್ತು. ಬೆಂಗಳೂರಿನಲ್ಲಿದ್ದ 164 ಕೆರೆಗಳೂ ತುಂಬಿಕೊಂಡು ಕೋಡಿ ಹರಿದಿದ್ದವು. ಈಗ ಅಂಥದ್ದೇ ಸ್ಥಿತಿ ಎದುರಾಗಿದೆ. ಆದರೆ ಒಟ್ಟು ಬೆಂಗಳೂರಿನಲ್ಲಿ ದುರಂತ ಎದುರಾಗಿಲ್ಲ. ಮಹದೇವಪುರ ವ್ಯಾಪ್ತಿಯಲ್ಲಿ ಹೆಚ್ಚು ಪೀಡಿತವಾಗಿದ್ದು, ಅರ್ಧ ಬೆಂಗಳೂರಿನ ಜನ ತೊಂದರೆಗೆ ಒಳಗಾಗಿದ್ದಾರೆ ಎಂದು ಹೇಳಿದ್ದಾರೆ.
1988ರ ಬಳಿಕದ ಮಳೆ ಅಂಕಿ ಅಂಶಗಳ ಪ್ರಕಾರ, ಮೂರನೇ ಅತಿಹೆಚ್ಚು ಮಳೆ ಈ ಬಾರಿ ಆಗಿದೆ. 1988ರ ಸೆ.12 ರಂದು 177.6 ಸೆಂಟಿ ಮೀಟರ್ ಮಳೆ ಒಂದೇ ದಿನ ಆಗಿತ್ತು. ಇದು ಈವರೆಗಿನ ಬೆಂಗಳೂರಿನಲ್ಲಿ ಅತಿ ಹೆಚ್ಚು ಮಳೆಯಾದ ಕುರಿತ ದಾಖಲೆ. ಆನಂತರ 2014ರಲ್ಲಿ ಸೆ.26ರಂದು 132.3 ಸೆಂಟಿ ಮೀಟರ್ ಮಳೆಯಾಗಿತ್ತು. ಈ ಬಾರಿ ಅದಕ್ಕಿಂತಲೂ ಕಡಿಮೆ ಮಳೆ ದಾಖಲಾಗಿದ್ದು, ಅದರಿಂದ ಎದುರಾದ ಅವಾಂತರ ಮಾತ್ರ ಗರಿಷ್ಠವಾಗಿದೆ. ಪ್ರವಾಹ ಸ್ಥಿತಿ ಎದುರಿಸಲು ರಾಜ್ಯ ಸರಕಾರ ತುರ್ತಾಗಿ 300 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.
ದಿಢೀರ್ ಪ್ರವಾಹ ಎದುರಾಗಲು ಕಾರಣವಾಗಿದ್ದೇನು ?
ಬೆಂಗಳೂರಿನಲ್ಲಿ 160ಕ್ಕೂ ಹೆಚ್ಚು ಕೆರೆಗಳಿದ್ದು, ಒತ್ತುವರಿಯ ಕಾರಣ ಒಂದಕ್ಕೊಂದು ಸಂಪರ್ಕ ಕಡಿತವಾಗಿದೆ. ತ್ಯಾಜ್ಯ ಸುರಿದು ಮತ್ತು ಕೆಲವು ಕಡೆ ಕಾಲುವೆಗಳನ್ನು ಒತ್ತುವರಿ ಮಾಡಿದ್ದರಿಂದ ನೀರು ಹರಿಯಲು ಸಾಧ್ಯವಾಗದೆ ಕೃತಕ ನೆರೆ ಎದುರಾಗಿದೆ.
ಕೆರೆ, ಕಾಲುವೆ ಇದ್ದ ಪ್ರದೇಶಗಳನ್ನು ಡಿ ನೋಟಿಫಿಕೇಶನ್ ಮಾಡಿರುವುದು, ಕಾಲುವೆ ಇದ್ದ ಜಾಗದಲ್ಲಿ ಕಟ್ಟಡ ಕಟ್ಟಿರುವುದು, ನೀರು ಹರಿಯಲಿದ್ದ ಜಾಗವನ್ನು ಮಿತಿಗೊಳಿಸಿರುವುದು.
ನಗರಕೀರಣದ ಪರಿಣಾಮ ಕೃಷಿ ಪ್ರದೇಶ, ಬಯಲು ಪ್ರದೇಶ ಕಡಿತವಾಗಿರುವುದು. ನೀರು ನಿಲ್ಲುವುದಕ್ಕೆ, ಭೂಮಿಗೆ ಇಂಗುವುದಕ್ಕೆ ಜಾಗ ಇಲ್ಲದೆ ನೀರು ಹರಿಯುವುದು ನೆರೆಯ ಸ್ಥಿತಿಗೆ ಕಾರಣ.
ಅತ್ಯಂತ ವೇಗವಾಗಿ ನಗರೀಕರಣ ಆಗುತ್ತಿರುವುದು ಮತ್ತು ಅದರಿಂದಾಗಿ ಸಹಜ ಪರಿಸರಕ್ಕೆ ಧಕ್ಕೆಯಾಗಿರುವುದು. 1973ರಲ್ಲಿ 68 ಶೇಕಡಾ ಕೃಷಿ ಪ್ರದೇಶ ಇದ್ದುದು 2020ರ ವೇಳೆಗೆ ಕೇವಲ ಮೂರು ಶೇಕಡಾಕ್ಕೆ ಇಳಿದಿರುವುದು. ಇದರಿಂದಾಗಿ ನೆರೆಯ ಸ್ಥಿತಿ ಉಂಟಾಗಿದೆ ಎನ್ನುವ ಅಂದಾಜನ್ನು ಮಾಡಲಾಗುತ್ತಿದೆ.
Parts of IT capital Bengaluru continued to remain submerged even Tuesday. Water has not receded from several residential premises in Yemalur-Bellandur region. The government has pressed fire and rescue personnel into service to evacuate stranded residents.Reacting to reports of flooding in Bengaluru, Karnataka Chief Minister Basavaraj Bommai Tuesday said: “Karnataka, especially Bengaluru has received unprecedented heavy rainfall compared to the last 90 years. All the tanks are full and overflowing and some have been breached.
10-08-25 09:12 pm
HK News Desk
ಗುಜರಾತ್, ಮಹಾರಾಷ್ಟ್ರದಂತೆ ನಮಗೂ ಆದ್ಯತೆ ಕೊಡಿ, ಮೆಟ...
10-08-25 06:27 pm
PM Modi, Operation Sindhoor: ಆಪರೇಶನ್ ಸಿಂಧೂರಕ್...
10-08-25 06:06 pm
ಚಾಲಕ ರಹಿತ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ...
10-08-25 01:57 pm
ಗಿಟಾರಿಗೆ ಹೊದಿಕೆ ಹೊದಿಸಿ ಏಳನೇ ಕ್ಲಾಸ್ ಹುಡುಗನ ಸಾವ...
09-08-25 10:12 pm
09-08-25 11:09 pm
HK News Desk
ಯಾರ ಮುಂದೆಯೂ ಭಾರತ ತಲೆ ಬಾಗದು ; ಸಾವಿರ ಬಾರಿ ಯತ್ನಿ...
09-08-25 07:38 pm
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
10-08-25 04:32 pm
Udupi Correspondent
Six Arrested, Dharmasthala Incident, Kudla Ra...
10-08-25 02:26 pm
Dharmasthala, Janardhan Poojary, SIT Probe: ದ...
10-08-25 01:01 pm
Mangalore Dharmasthala Case: ಧರ್ಮಸ್ಥಳ ಕೇಸ್ ;...
10-08-25 12:37 pm
No Evidence, Bahubali Hill in Dharmasthala: ಬ...
09-08-25 10:53 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm