ಬ್ರೇಕಿಂಗ್ ನ್ಯೂಸ್
13-09-22 03:44 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.13: ಬೆಂಗಳೂರಿನ ಇಬ್ಬರು ಯುವಕರು ಶಿಕ್ಷಣ ಮತ್ತು ಪರಿಸರದ ಕುರಿತ ಜಾಗೃತಿಗಾಗಿ 20 ರಾಜ್ಯಗಳನ್ನು ಸುತ್ತಿ 24,000 ಕಿಮೀ ಸೈಕಲ್ ಜಾಥಾ ನಡೆಸಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ.
ಬೆಂಗಳೂರಿನ ಧನುಷ್ ಮಂಜುನಾಥ್ ಮತ್ತು ಹೇಮಂತ್ ಈ ಸಾಧನೆ ಮಾಡಿದ ಯುವಕರು. ಏನಾದರು ಸಾಧನೆ ಮಾಡಬೇಕು, ಸಮಾಜಕ್ಕೆ ಸಂದೇಶ ನೀಡಬೇಕು ಎನ್ನುವ ಉದ್ದೇಶದಿಂದ ಮೊದಲಿಗೆ 15,000 ಕಿಮೀ ಸೈಕಲ್ ಜಾಥಾ ಮಾಡಲು ಯೋಜನೆ ಹಾಕಿದ್ದರು. ಇದೇ ವೇಳೆ, 19,400 ಕಿಮೀ ಸೈಕಲ್ ಜಾಥಾ ನಡೆಸಿದರೆ, ಗಿನ್ನೆಸ್ ರೆಕಾರ್ಡ್ ಮಾಡುವ ಬಗ್ಗೆ ಮಾಹಿತಿ ತಿಳಿದ ಯುವಕರು ಹೊಸ ದಾಖಲೆಗೆ ಮುಂದಾಗಿದ್ದರು.
ಜುಲೈ 11, 2021 ರಂದು ಬೆಂಗಳೂರಿನಿಂದ ಶಿಕ್ಷಣ ಮತ್ತು ಪರಿಸರ ಜಾಗೃತಿ ಹೆಸರಲ್ಲಿ ಆರಂಭಿಸಿದ್ದ ಸೈಕಲ್ ಜಾಥಾ ಆಂಧ್ರಪ್ರದೇಶ, ತೆಲಂಗಾಣ , ಗುಜರಾತ್, ಮಧ್ಯಪ್ರದೇಶ , ಉತ್ತರಾಖಂಡ್, ಹಿಮಾಚಲ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಲ, ಉತ್ತರ ಪ್ರದೇಶ, ಹರಿಯಾಣ, ಒರಿಸ್ಸಾ, ಜಾರ್ಖಂಡ್, ರಾಜಸ್ಥಾನ, ಮಣಿಪುರ, ನಾಗಲ್ಯಾಂಡ್, ದೆಹಲಿ, ಪಂಜಾಬ್, ಮಹಾರಾಷ್ಟ್ರ, ಗೋವಾ, ತಮಿಳುನಾಡು ರಾಜ್ಯ ಗಳಿಗೆ ಭೇಟಿ ನೀಡಿ ಮಾರ್ಚ್ 12, 2022 ಕ್ಕೆ ಸುದೀರ್ಘ 8 ತಿಂಗಳ 2400 ಕಿ.ಮೀ ಪ್ರಯಾಣ ಮುಗಿಸಿದ್ದಾರೆ.
ಜಾಥಾ ಸಂದರ್ಭದಲ್ಲಿ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದಾರೆ. ಉತ್ತರಾಖಂಡ್, ಮಧ್ಯಪ್ರದೇಶ, ಗುಜರಾತ್ , ಗೋವಾದ ಮುಖ್ಯಮಂತ್ರಿಗಳು ಹಾಗು ಹಿಮಾಚಲ ಪ್ರದೇಶದ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ. ಜಾಥಾದಲ್ಲಿ ಭೇಟಿ ನೀಡಿದ ಪ್ರದೇಶದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಧನುಷ್, ನಾವು ಪ್ರತಿದಿನ ಬೆಳಗ್ಗೆ 6.30ರಿಂದ ಸಂಜೆ 6.30ರ ತನಕ ಸೈಕ್ಲಿಂಗ್ ಮಾಡುತ್ತಿದ್ದೆವು. ಒಂದು ದಿನಕ್ಕೆ 100-120 ಕಿಮೀ ದೂರ ಕ್ರಮಿಸುತ್ತಿದ್ದೆವು. ನಾವು ಹೋದಲೆಲ್ಲಾ ರೋಟರಿ ಕ್ಲಬ್ ನಮಗೆ ತುಂಬಾ ಸಹಕಾರ ನೀಡಿದೆ. ಸಾಮಾನ್ಯ ಜನರು 2ರಿಂದ 5 ಕಿಮೀ ವ್ಯಾಪ್ತಿಗೆ ಸೈಕಲ್ ಬಳಸಿದರೆ ಒಂದಷ್ಟು ಮಾಲಿನ್ಯ ತಪ್ಪಿಸಬಹುದು ಎಂದಿದ್ದಾರೆ.
ಪ್ರತಿ ದಿನದ ಜಾಥಾಕ್ಕೆ ದಾಖಲೆ ಪತ್ರ
ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯಿಂದ ಒಪ್ಪಿಗೆ ದೊರೆತ ನಂತರ ಜಾಥಾ ಆರಂಭಿಸಿದ್ದರು. ಪ್ರತಿ ದಿನ ಜಾಥಾ ಸಂದರ್ಭದಲ್ಲಿ ನಾಲ್ಕು ಜನರ ದಾಖಲೆ ಪತ್ರ, ಇಬ್ಬರು ಸರಕಾರಿ ಉದ್ಯೋಗಿಗಳ ಸಾಕ್ಷಿ ಹಾಗೂ ಪ್ರತಿ ಗಂಟೆಗೆ ವಿಡಿಯೋ ಮಾಡಬೇಕು ಎಂಬ ಸವಾಲು ಇತ್ತು. ಹಾಗಾಗಿ ತಮ್ಮ ಜಾಥಾಕ್ಕೆ ಜನರನ್ನೇ ಸಾಕ್ಷಿ ಮಾಡಬೇಕಾಗಿತ್ತು.
Bangalore 24 thousand km cycle raid, 20 states travelled in eight months by two youths, Guinness World record
05-02-25 06:39 pm
HK News Desk
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
04-02-25 10:49 pm
HK News Desk
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
NHAI fined toll tax: ಅಂಗವಿಕಲ ಮಹಿಳೆಗೆ 40 ರೂ. ಟ...
01-02-25 09:51 pm
05-02-25 10:51 pm
Mangalore Correspondent
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
Mangalore gun misfire, congress, chittaranjan...
04-02-25 07:47 pm
06-02-25 12:00 pm
HK News Desk
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm
Ullal Police Station, Mangalore, Crime: ಪಿಎಸ್...
03-02-25 05:46 pm
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm