ಬ್ರೇಕಿಂಗ್ ನ್ಯೂಸ್
14-09-22 11:21 am HK News Desk ಕರ್ನಾಟಕ
ಹಾಸನ, ಸೆ.14 : ಒಂದು ರಾಷ್ಟ್ರೀಯ ಪಕ್ಷವಾಗಿ ಬಿಜೆಪಿಯವರು ಜನಸ್ಪಂದನ ಕಾರ್ಯಕ್ರಮದ ವೇದಿಕೆಯಲ್ಲಿ ಬಳಸಿರುವ ಪದಗಳು ಅವರ ಸಂಸ್ಕೃತಿ ಹೇಳುತ್ತದೆ. ಮುಖ್ಯಮಂತ್ರಿ, ವಿರೋಧ ಪಕ್ಷಗಳಿಗೆ ಧಮ್ ಇದ್ರೆ, ತಾಕತ್ತಿದ್ರೆ ಎಂದು ಪದ ಬಳಸಿದ್ದಾರೆ. ಇದು ಕುಸ್ತಿಯ ಮಲ್ಲ ಯುದ್ಧವಲ್ಲ. ಇದು ರಾಜಕೀಯ, ರಾಜ್ಯದ ಜನರ ಕೆಲಸ ಆಗಬೇಕು. ಇಲ್ಲಿ ಯಾವುದರ ಬಗ್ಗೆ ಧಮ್, ತಾಕತ್ತು ತೋರಿಸಬೇಕು. ಜನರ ಕೆಲಸದಲ್ಲಿ ಧಮ್ ತೋರಿಸಲಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಜನಸ್ಪಂದನ ಮಾಡಿ, ವಿಕೃತವಾದ ರೀತಿ ನಡೆಸಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಮಂತ್ರಿಗಳು ನೃತ್ಯ ಮಾಡುತ್ತಿದ್ದಾರೆ. ಒಂದು ಕಡೆ ಜನ ಬೀದಿಯಲ್ಲಿದ್ದಾರೆ, ಬೆಳೆ ಕಳೆದುಕೊಂಡು ರೈತರು ಚಿಂತೆಯಲ್ಲಿದ್ದಾರೆ. ವಿರೋಧ ಪಕ್ಷದ ನಾಯಕರೂ ಮಾತನಾಡುವುದನ್ನು ಗಮನಿಸಿದ್ದೇನೆ. ನನ್ನ ಬಗ್ಗೆಯೂ ಯಾರೋ ಒಬ್ಬ ಮಂತ್ರಿ, ಪಲಾಯನ ಮಾಡುತ್ತಾರೆ ಎಂದು ಹೇಳಿದ್ದಾರೆ. ಈ ಸದನದಲ್ಲಿ ನೋಡೋಣ, ಫಲಾಯನ ಮಾಡುತ್ತೇನೋ ಏನು ಅಂತ. ಈ ಸದನದಲ್ಲಿ ಒಂದು ದಾಖಲೆ ಇಡುತ್ತೇನೆ. ನಂತರ ನೋಡೋಣ ಗಾಳಿಯಲ್ಲಿ ಗುಂಡು ಹಾರಿಸುತ್ತಾನೋ ಬುಲೆಟ್ ಇಡುತ್ತಾನೋ ಎಂದು. ಒಬ್ಬ ಮಂತ್ರಿ ಇಲಾಖೆಗೆ ಸಂಬಂಧಪಟ್ಟ ಫೈಲನ್ನ ಮಂತ್ರಿ ಮನೆಯಲ್ಲಿ ಇಟ್ಟುಕೊಂಡಿರೋದು ಗೊತ್ತು. 2008 ರಲ್ಲಿ ಕುಪ್ಪಳ್ಳಿಯಲ್ಲಿ ಅಪ್ಪ ಮಕ್ಕಳನ್ನ ಮುಗಿಸೋದೆ ನಮ್ಮ ಗುರಿ ಎಂದಿದ್ದರು. ನಂತರ ದಾಖಲೆ ಸಮೇತ ಜನತೆ ಮುಂದೆ ಇಟ್ಟೆವು. ಸರ್ಕಾರದ ನಿಜವಾದ ಲೋಪಗಳಿದ್ದರೂ ತನಿಖೆ ಆಗಲೇ ಇಲ್ಲ. ವಿಧಾನಸಭೆಯಲ್ಲಿ ಈ ಎಲ್ಲ ವಿಚಾರವಾಗಿ ಚರ್ಚೆ ಮಾಡುತ್ತೇನೆ ಎಂದರು.
ತೆಲಂಗಾಣ ಸಿಎಂ ಕೆಸಿಆರ್ ಭೇಟಿ ಬಗ್ಗೆ ಕೇಳಿದ ಪ್ರಶ್ನೆಗೆ, ನನಗೆ ರಾಷ್ಟ್ರ ರಾಜಕೀಯಕ್ಕೆ ಹೋಗುವ ಅನಿವಾರ್ಯ ಇಲ್ಲ. ನಮ್ಮ ಕುಟುಂಬಕ್ಕೆ ಅದರ ಅನುಭವ ಇದೆ. ಸಮಾನ ಮನಸ್ಕರು ದೇಶದ ಹಿತ ದೃಷ್ಟಿಯಿಂದ ಒಗ್ಗೂಡಿದ್ದೇವೆ. ಮೊದಲು ನಮ್ಮ ಸಾಗುವಳಿ ಭೂಮಿಯಲ್ಲಿ ಉಳುಮೆ ಮಾಡಬೇಕು. ಅದನ್ನು ಬಿಟ್ಟು ಬಗರ್ ಹುಕುಂ ಜಾಗ ಹುಡುಕಲು ಯಾಕೆ ಹೋಗಬೇಕು. ನಾನು ಮೊದಲು ಕರ್ನಾಟಕವನ್ನ ಸರಿ ಮಾಡಿಕೊಳ್ಳಬೇಕು. ಜೊತೆಗೆ ದೇಶದ ಬಗ್ಗೆಯೂ ಗಮನ ಹರಿಸುತ್ತೇವೆ ಎಂದರು ಹೆಚ್ಡಿಕೆ.
ರಾಜ್ಯದಲ್ಲಿ ಸುಮಾರು 120 ಕ್ಷೇತ್ರದಲ್ಲಿ ಅಭ್ಯರ್ಥಿಗಳಿಗೆ ಕೆಲಸ ಮಾಡಲು ಸೂಚಿಸಿದ್ದೇನೆ. ಅದರಲ್ಲಿ ಇನ್ನೂ 20-30 ಕ್ಷೇತ್ರಗಳಲ್ಲಿ ಗೊಂದಲ ಇದೆ. ನಾವು ನೀಡಿದ ಟಾಸ್ಕ್ ಇನ್ನೂ ಕಂಪ್ಲೀಟ್ ಆಗಿಲ್ಲ. ಇನ್ನೆರೆಡು ದಿನಗಳಲ್ಲಿ ಸಭೆ ಕರೆದು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ನಾನು ಕೂಡ ಸರ್ವೆ ಮಾಡಿಸುತ್ತಿದ್ದು ಶೀಘ್ರ ನಿರ್ಧಾರ ಕೈಗೊಳ್ಳುತ್ತೇವೆ. ಇಂದಿನ ಸಭೆಯಿಂದ ನಿಮಗೂ ಹಾಸನ ಟಿಕೆಟ್ ಬಗ್ಗೆ ಗ್ರಹಿಕೆ ಆಗಿರಬಹುದು. ಕೇವಲ ನಮ್ಮ ಕುಟುಂಬ ಮಾತ್ರವಲ್ಲ ಪಕ್ಷದ ಕಾರ್ಯಕರ್ತರೆಲ್ಲರೂ ನಮ್ಮ ಕುಟುಂಬವೇ. ಮುಂದೆ ದೇವೇಗೌಡರು, ರೇವಣ್ಣ, ಇಬ್ರಾಹಿಂ ನಾನು ಕೂತು ತೀರ್ಮಾನ ಮಾಡ್ತಿವಿ ಎಂದು ಹೇಳಿದರು.
HD Kumaraswamy slams CM Bommi for using inaaporatire words during the rally held at chikkaballapura district.
05-02-25 06:39 pm
HK News Desk
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
04-02-25 10:49 pm
HK News Desk
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
NHAI fined toll tax: ಅಂಗವಿಕಲ ಮಹಿಳೆಗೆ 40 ರೂ. ಟ...
01-02-25 09:51 pm
05-02-25 10:51 pm
Mangalore Correspondent
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
Mangalore gun misfire, congress, chittaranjan...
04-02-25 07:47 pm
06-02-25 12:00 pm
HK News Desk
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm
Ullal Police Station, Mangalore, Crime: ಪಿಎಸ್...
03-02-25 05:46 pm
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm