'ಮಗಳು ಜಾನಕಿ'ಯ ಚಂದು ಭಾರ್ಗಿ ಇನ್ನಿಲ್ಲ ! ಪ್ರಸಿದ್ಧ ಕಿರುತೆರೆ ನಟ ಮಂಡ್ಯ ರವಿ ನಿಧನ 

14-09-22 10:35 pm       HK News Desk   ಕರ್ನಾಟಕ

ಬಹು ಅಂಗಾಗ್ಯ ವೈಫಲ್ಯದಿಂದ ಬಳಲುತ್ತಿದ್ದ ಕಿರುತೆರೆಯ ಪ್ರಸಿದ್ಧ ನಟ, 'ಮಗಳು ಜಾನಕಿ' ಧಾರಾವಾಹಿಯ ಚಂದು ಭಾರ್ಗಿ ಖ್ಯಾತಿಯ ರವಿಪ್ರಸಾದ್‌ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಬೆಂಗಳೂರು, ಸೆ.14: ಬಹು ಅಂಗಾಗ್ಯ ವೈಫಲ್ಯದಿಂದ ಬಳಲುತ್ತಿದ್ದ ಕಿರುತೆರೆಯ ಪ್ರಸಿದ್ಧ ನಟ, 'ಮಗಳು ಜಾನಕಿ' ಧಾರಾವಾಹಿಯ ಚಂದು ಭಾರ್ಗಿ ಖ್ಯಾತಿಯ ರವಿಪ್ರಸಾದ್‌ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರವಿ ಬೆಂಗಳೂರಿನ ಅಪೊಲೋ ಬಿಜಿಎಸ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. 

ಮೂಲತಃ ಮಂಡ್ಯದವರಾದ ರವಿ ಪ್ರಸಾದ್‌ ಮಂಡ್ಯ ರವಿ ಎಂದೇ ಫೇಮಸ್ ಆಗಿದ್ದರು.‌ ಟಿ.ಎನ್.‌ ಸೀತಾರಾಮ್‌ ನಿರ್ದೇಶನದ 'ಮಗಳು ಜಾನಕಿ' ಧಾರಾವಾಹಿಯಲ್ಲಿ ರವಿ, ಚಂದು ಭಾರ್ಗಿ ಪಾತ್ರದಲ್ಲಿ ನಟಿಸಿ ಖ್ಯಾತಿ ಗಳಿಸಿದ್ದರು. ರವಿ ನಿಧನದ ಸುದ್ದಿ ತಿಳಿದ ನಿರ್ದೇಶಕ ಟಿ. ಎನ್‌. ಸೀತಾರಾಮ್‌ ಆಸ್ಪತ್ರೆಗೆ ಭೇಟಿ ನೀಡಿ ರವಿ ಅವರ ಅಂತಿಮ ದರ್ಶನ ಪಡೆದಿದ್ದಾರೆ. ರವಿ, ಟಿವಿ ಸೀರಿಯಲ್ಗಳಲ್ಲಿ ನೆಗೆಟಿವ್‌ ಪಾತ್ರಗಳಿಗೆ ಹೆಚ್ಚು ಫೇಮಸ್‌ ಆಗಿದ್ದರು. 

ರವಿ ಅವರ ನಿಧನಕ್ಕೆ ಕಿರುತೆರೆ, ಸಿನಿಮಾ ಕಲಾವಿದರು ಸಂತಾಪ ವ್ಯಕ್ತಪಡಿಸಿದ್ದಾರೆ. ಬಾಲ್ಯದಿಂದಲೇ ನಟನೆಯಲ್ಲಿ ಆಸಕ್ತಿ ಹೊಂದಿದ್ದ ರವಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಎಲ್‌ಎಲ್‌ಬಿ ಹಾಗೂ ಇಂಗ್ಲೀಷ್‌ನಲ್ಲಿ ಎಂಎ ಪದವಿ ಪಡೆದಿದ್ದರೂ, ಶಿಕ್ಷಣ ಕ್ಷೇತ್ರದಲ್ಲಿ ಅವಕಾಶ ಬಿಟ್ಟು ನಟನೆ ಮೇಲಿನ ಆಸೆಯಿಂದ ಬೆಂಗಳೂರಿನತ್ತ ತೆರಳಿದ್ದರು. ಜನದನಿ ಹವ್ಯಾಸಿ ನಾಟಕ ತಂಡದ ಮೂಲಕ ಮೊದಲಿಗೆ ಬಣ್ಣ ಹಚ್ಚಿದ್ದರು. ಮಹಾಮಾಯಿ ಧಾರಾವಾಹಿಯಿಂದ ಕಿರುತೆರೆಯ ಬಣ್ಣದ ಪಯಣ ಆರಂಭ. ನಂತರ ಮಿಂಚು, ಮುಕ್ತ ಮುಕ್ತ, ಚಿತ್ರಲೇಖ, ಯಶೋಧೆ, ವರಲಕ್ಷ್ಮಿ ಸ್ಟೋರ್ಸ್‌ ಸೇರಿ ಅನೇಕ ಧಾರಾವಾಹಿಗಳಲ್ಲಿ ರವಿ ನಟಿಸಿದ್ದಾರೆ. ರವಿಪ್ರಸಾದ್‌ ಸಿನಿಮಾಗಳಲ್ಲೂ ನಟಿಸಿದ್ದಾರೆ. ಕಾಫಿತೋಟ, ಪೆಪೆ ಸೇರಿ ಕೆಲವೊಂದು ಸಿನಿಮಾಗಳಲ್ಲಿ ರವಿ ಅಭಿನಯಿಸಿದ್ದಾರೆ.

Actor Mandya Ravi, who is also known as Ravi Prasad, passes away. The actor who hails from Mandya district breathed his last at a private hospital. His friends, family members and television actors have mourned his untimely death.The news of actor’s death has been confirmed by his father Dr Mudde Gowda. Mortal remains of Ravi will be kept for public viewing his native Mandya and last rites is likely to be performed on Thursday. Producer and actor Jayashree has expressed shock over the death of Ravi. Kannada Television Association president Shivakumar too has mourned the death of a Ravi He had acted in serials like Magalu Janaki, Varalakshmi stories and Nammane Yuarani.