ವಿರೋಧ ನಡುವೆಯೂ ಪರಿಷತ್ತಿನಲ್ಲಿ ಮತಾಂತರ ನಿಷೇಧ ಕಾಯ್ದೆಗೆ ಅಂಗೀಕಾರ ; ಮಸೂದೆ ಪ್ರತಿ ಹರಿದು ಹಾಕಿದ ವಿಪಕ್ಷ ಸದಸ್ಯರು ! 

15-09-22 09:31 pm       Bengalore Correspondent   ಕರ್ನಾಟಕ

ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಧ್ವನಿ ಮತದ ಮೂಲಕ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕವನ್ನು ವಿಧಾನ ಪರಿಷತ್ ನಲ್ಲಿ ಅಂಗೀಕಾರ ಮಾಡಲಾಗಿದೆ. 

ಬೆಂಗಳೂರು, ಸೆ.15: ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಧ್ವನಿ ಮತದ ಮೂಲಕ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕವನ್ನು ವಿಧಾನ ಪರಿಷತ್ ನಲ್ಲಿ ಅಂಗೀಕಾರ ಮಾಡಲಾಗಿದೆ. 

ಆದರೆ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಕಾಯ್ದೆಯ ಪ್ರತಿಗಳನ್ನು ಹರಿದು ಹಾಕುವ ಮೂಲಕ ಆಕ್ರೋಶ ತೋರಿದರಲ್ಲದೆ, ಅಧಿವೇಶನದಿಂದ ಸಭಾತ್ಯಾಗ ಮಾಡಿ ಹೊರನಡೆದರು. ಈ ವೇಳೆ ಬಿಜೆಪಿ ಸದಸ್ಯರು ಭಾರತ್ ಮಾತಾಕೀ ಜೈ, ಹಿಂದೂ ವಿರೋಧಿ, ದೇಶದ್ರೋಹಿ ಕಾಂಗ್ರೆಸ್ ಗೆ ಧಿಕ್ಕಾರ ಎಂದು ಕೂಗಿದರು. ಗದ್ದಲದ ಮಧ್ಯೆ ಕಲಾಪವನ್ನು ಸಭಾಪತಿ ನಾಳೆಗೆ ಮುಂದೂಡಿದರು. 

Book murder case against police officers for firing' | Deccan Herald

ಮಸೂದೆಯ ಬಿಲ್ ಪ್ರತಿಯನ್ನು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಜನವಿರೋಧಿ ಸರಕಾರ ಎಂದು ಹರಿಹಾಯ್ದಿದ್ದಾರೆ. 

ಮಸೂದೆ ಪ್ರಕಾರ, ಬಲವಂತ,  ಆಮಿಷ ಮತ್ತು ಮದುವೆಯಾಗುವ ಭರವಸೆ ನೀಡಿ ನಡೆಸುವ ಮತಾಂತರ ಕಾರ್ಯಕ್ಕೆ ನಿಷೇಧವಿದೆ. ಮತಾಂತರಗೊಂಡ ವ್ಯಕ್ತಿಯ ಮನೆಯವರು ಅಥವಾ ಆಪ್ತರು ಪೊಲೀಸ್ ದೂರು ನೀಡಿದರೆ ಎಫ್‌ಐಆರ್ ದಾಖಲಾಗುವುದು. ಬಲವಂತದ ಮತಾಂತರಕ್ಕೆ ಮೂರರಿಂದ ಐದು ವರ್ಷ ಜೈಲು ಶಿಕ್ಷೆ ಮತ್ತು 25,000 ರೂ. ವರೆಗೆ ದಂಡ ವಿಧಿಸಲಾಗುತ್ತದೆ. ಅಲ್ಲದೆ, ಕಾನೂನು ಪ್ರಕಾರ ಮತಾಂತರ ಆಗುವುದಿದ್ದರೂ ವ್ಯಕ್ತಿ ಎರಡು ತಿಂಗಳ ಮೊದಲೇ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗೆ ತಿಳಿಸಬೇಕು. ಈ ಮಾಹಿತಿಯನ್ನು ಜಿಲ್ಲಾಧಿಕಾರಿ, ತಹಶೀಲ್ದಾರ್ ಕಚೇರಿ ಸೂಚನಾ ಫಲಕದಲ್ಲಿ ಹಾಕಬೇಕು. 30 ದಿನಗಳ ಒಳಗೆ ಆಕ್ಷೇಪಣೆ ಬಂದರೆ ಕಂದಾಯ ಇಲಾಖೆಯಿಂದ ವಿಚಾರಣೆ ನಡೆಸಬೇಕು. ತಪ್ಪು ಕಂಡುಬಂದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಲು ಪೊಲೀಸರಿಗೆ ಅಧಿಕಾರ ನೀಡಲಾಗಿದೆ.

ಕಳೆದ ಬೆಳಗಾವಿ ಅಧಿವೇಶನದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲಾಗಿತ್ತು. ಆನಂತರ, ಸುಗ್ರೀವಾಜ್ಞೆ ಹೊರಡಿಸಿ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಆದರೆ ವಿಧಾನ ಪರಿಷತ್ ನಲ್ಲಿ ಅಂಗೀಕಾರ ಆಗಿರಲಿಲ್ಲ. ಇಂದು ವಿಪಕ್ಷಗಳ ವಿರೋಧ ನಡುವೆಯೂ ಧ್ವನಿಮತದಿಂದ ಅನುಮತಿಸಿ, ಮಸೂದೆಗೆ ಅಂಗೀಕಾರ ನೀಡಲಾಗಿದೆ.

The bill was tabled in the upper House earlier in the day by home minister Araga Jnanendra. The bill was earlier passed in the Assembly in December, last year, but was not presented in the council due to the lack of majority. Pending passage in the upper House, the Basavaraj Bommai-led BJP dispensation had subsequently promulgated an ordinance in May this year to give effect to the bill.