ಮದ್ವೆ ಗಂಡು ಆಗಲು ಸಿದ್ಧ, ಮದ್ವೆ ಯಾವಾಗ ಮಾಡ್ತಾರೆ ಅಂತ ಅವ್ರನ್ನೇ ಕೇಳ್ಬೇಕು.. ಸಚಿವ ಸ್ಥಾನ ಸಿಗದ್ದಕ್ಕೆ ಈಶ್ವರಪ್ಪ ಟಾಂಗ್ 

17-09-22 08:00 pm       HK News Desk   ಕರ್ನಾಟಕ

ಮದುವೆ ಗಂಡು ಆಗೋಕೆ ನಾನು ರೆಡಿ ಇದ್ದೇನೆ, ಮದ್ವೆ ಯಾವಾಗ ಮಾಡ್ತಾರೆ ಅನ್ನೋದನ್ನ ನೀವೇ ಅವರನ್ನು ಕೇಳಬೇಕು.. ಹೀಗೆಂದು ಮಾಜಿ ಸಚಿವ ಕೆ.ಎಸ್​. ಈಶ್ವರಪ್ಪ ತನ್ನನ್ನು ಸಚಿವ ಸ್ಥಾನಕ್ಕೇರಿಸದ ಬಗ್ಗೆ ಅಸಮಾಧಾನ ಹೇಳಿಕೊಂಡಿದ್ದಾರೆ. 

ಶಿವಮೊಗ್ಗ, ಸೆ.17 : ಮದುವೆ ಗಂಡು ಆಗೋಕೆ ನಾನು ರೆಡಿ ಇದ್ದೇನೆ, ಮದ್ವೆ ಯಾವಾಗ ಮಾಡ್ತಾರೆ ಅನ್ನೋದನ್ನ ನೀವೇ ಅವರನ್ನು ಕೇಳಬೇಕು.. ಹೀಗೆಂದು ಮಾಜಿ ಸಚಿವ ಕೆ.ಎಸ್​. ಈಶ್ವರಪ್ಪ ತನ್ನನ್ನು ಸಚಿವ ಸ್ಥಾನಕ್ಕೇರಿಸದ ಬಗ್ಗೆ ಅಸಮಾಧಾನ ಹೇಳಿಕೊಂಡಿದ್ದಾರೆ. 

ಗುತ್ತಿಗೆದಾರ ಸಂತೋಷ್​ ಪಾಟೀಲ್​ ಆತ್ಮಹತ್ಯೆ ಪ್ರಕರಣದಲ್ಲಿ ತನ್ನ ಹೆಸರು ಕೇಳಿಬಂದ ಬಳಿಕ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರರು. ಪ್ರಕರಣದಲ್ಲಿ ನಿದೋರ್ಷಿಯೆಂದು ಬಂದಿದ್ದರೂ ಕೆ.ಎಸ್​. ಈಶ್ವರಪ್ಪ ಮತ್ತೆ ಮಂತ್ರಿಗಿರಿಗಾಗಿ ಕಸರತ್ತು ನಡೆಸುತ್ತಿದ್ದಾರೆ. 

Karnataka CM Basavaraj Bommai finally allocates cabinet portfolios - The  Economic Times

ಈ ಕುರಿತು ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಈಶ್ವರಪ್ಪ, ಮದುವೆ ಗಂಡು ಆಗೋಕೆ ನಾನು ಸಿದ್ಧ, ಮದ್ವೆ ಯಾವಾಗ ಮಾಡ್ತಾರೆ ಅನ್ನೋದನ್ನ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳಿನ್​ಕುಮಾರ್​ ಕಟೀಲ್​ ಅವರನ್ನು ನೀವೇ ಕೇಳ್ಬೇಕು ಎಂದರು.

Karnataka CM B S Yediyurappa tests positive for Covid second time in eight  months

Not even one MLA is unhappy with B S Yediyurappa: Nalin Kumar Kateel |  Deccan Herald

ಆರೋಪ ಮುಕ್ತರಾದ ಬಳಿಕ ಮತ್ತೆ ಸಚಿವ ಸ್ಥಾನ ನೀಡುವುದಾಗಿ ಬಸವರಾಜ ಬೊಮ್ಮಾಯಿ, ನಳಿನ್​ಕುಮಾರ್​ ಕಟೀಲ್​, ಯಡಿಯೂರಪ್ಪ ಅವರು ನನಗೆ ಭರವಸೆ ನೀಡಿದ್ದರು. ಆರೋಪದಿಂದ ಮುಕ್ತನಾಗಿದ್ದೇನೆ. ಹಾಗಾಗಿ ಯಾವಾಗ ಮಂತ್ರಿ ಮಾಡ್ತೀರಿ ಎಂದು ನೀವೆ ಅವರನ್ನೇ ಕೇಳಿ, ನನ್ನನ್ನು ಯಾಕೆ ಕೇಳ್ತೀರಾ? ಎಂದು ಸುದ್ದಿಗಾರಿಗೆ ಹೇಳಿದರು.

ಬೇರೆಯವರ ಪ್ರಕರಣಕ್ಕೂ ನನ್ನ ಪ್ರಕರಣಕ್ಕೂ ವ್ಯತ್ಯಾಸ ಇದೆ. ಬೇರೆಯವರೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲ. ನನಗೆ ಸಚಿವ ಸ್ಥಾನ ನೀಡಲಿಲ್ಲವೆಂದು ಅಸಮಾಧಾನ ಇದೆ, ಹಾಗಂತ ಪಕ್ಷ ಸಂಘಟನೆಗೆ ತೊಂದರೆ ನೀಡುವುದಿಲ್ಲ. ಸಂಘಟನೆ ವಿಷಯದಲ್ಲಿ ನಾನೊಬ್ಬನೇ ಎಲ್ಲವನ್ನೂ ಮಾಡಲೂ ಸಾಧ್ಯವಿಲ್ಲ ಎಂದು ಈಶ್ವರಪ್ಪ ಪ್ರತಿಕ್ರಿಯಿಸಿದರು.

A discontented Shivamogga City MLA K S Eshwarappa hit out at the state BJP leadership for not including him in the state cabinet headed by Chief Minister Basavaraj Bommai even after getting a clean chit in the suicide case of contractor Santosh.