ಪಂಚಮಸಾಲಿ ಭಾವನೆಗಳ ಮೇಲೆ ಚೆಲ್ಲಾಟ ಆಡ್ತಿದಾರೆ ; ಸೆ.20ರಂದು ಸಿಎಂ ನಿವಾಸದ ಮುಂದೆ ಬೃಹತ್ ಹೋರಾಟ - ಸ್ವಾಮೀಜಿ

18-09-22 04:24 pm       HK News Desk   ಕರ್ನಾಟಕ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಂಚಮಸಾಲಿ ಸಮಾಜದ ಭಾವನೆಗಳ ಜೊತೆ ಚೆಲ್ಲಾಟ ಆಡ್ತಿದ್ದಾರೆ. ಸಿಎಂ ಬೊಮ್ಮಾಯಿ ಮಾತು ತಪ್ಪಿದ್ದಾರೆ. ನಾವು ಸೆಪ್ಟೆಂಬರ್ 20 ರಂದು ಮುಖ್ಯಮಂತ್ರಿಗಳ ಶಿಗ್ಗಾವಿ ನಿವಾಸದ ಮುಂದೆ ಬೃಹತ್ ಹೋರಾಟ ಮಾಡಲಿದ್ದೇವೆ.

ಹಾವೇರಿ, ಸೆ.18 : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಂಚಮಸಾಲಿ ಸಮಾಜದ ಭಾವನೆಗಳ ಜೊತೆ ಚೆಲ್ಲಾಟ ಆಡ್ತಿದ್ದಾರೆ. ಸಿಎಂ ಬೊಮ್ಮಾಯಿ ಮಾತು ತಪ್ಪಿದ್ದಾರೆ. ನಾವು ಸೆಪ್ಟೆಂಬರ್ 20 ರಂದು ಮುಖ್ಯಮಂತ್ರಿಗಳ ಶಿಗ್ಗಾವಿ ನಿವಾಸದ ಮುಂದೆ ಬೃಹತ್ ಹೋರಾಟ ಮಾಡಲಿದ್ದೇವೆ. ಅಂದಿನ ನಮ್ಮ ಹೋರಾಟವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. 

ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡುವ ವಿಚಾರದಲ್ಲಿ ಸಿಹಿ ಸುದ್ದಿ ಕೊಡೋದಾಗಿ ಮುಖ್ಯಮಂತ್ರಿ ಹೇಳಿದ್ದರು. ಆದರೆ ಇರುವರೆಗೂ ಮೀಸಲಾತಿ ಘೋಷಣೆ ಮಾಡಲಿಲ್ಲ.‌ ನಮ್ಮ ಪಂಚಮಸಾಲಿ ಸಮಾಜದ ಎಲ್ಲಾ ಮುಖಂಡರು ಹೋರಾಟದಲ್ಲಿ ಭಾಗಿಯಾಗ್ತಾರೆ. ಸೋಮವಾರ ಸದನದ ಒಳಗೆ ನಮ್ಮ ಪಂಚಮಸಾಲಿ ಸಮಾಜದ ಶಾಸಕರು ದನಿ ಎತ್ತಲಿದ್ದಾರೆ. ಇತ್ತ ಮಾರನೇ ದಿನ ಮಂಗಳವಾರ ನಾವು ಶಿಗ್ಗಾವಿಯಲ್ಲಿ ದನಿ ಎತ್ತಲಿದ್ದೇವೆ. ಸದನದ ಹೊರಗೂ ಹೋರಾಟ, ಸದನದ ಒಳಗೂ ಹೋರಾಟ ಮಾಡುತ್ತೇವೆ ಎಂದು ಹೇಳಿದರು. 

Karnataka CM Basavaraj Bommai finally allocates cabinet portfolios - The  Economic Times

ಸರ್ಕಾರ ಸ್ಪಂದಿಸದಿದ್ದರೆ ಅಕ್ಟೋಬರ್ ಕೊನೆ ವಾರ ಅಥವಾ ನವೆಂಬರ್ ಮೊದಲನೇ ವಾರ ಮತ್ತೆ ಬೃಹತ್ ಹೋರಾಟ ನಡೆಸಲಾಗುವುದು‌. ಬೆಂಗಳೂರಿನಲ್ಲಿ 25 ಲಕ್ಷ ಪಂಚಮಸಾಲಿಗಳನ್ನು ಸೇರಿಸಿ ಹೋರಾಟ ಮಾಡುತ್ತೇವೆ. ಪಂಚಮಸಾಲಿ ಸಮಾಜಕ್ಕೆ ಬೇಕು ಅಂತಾನೇ ಮೀಸಲಾತಿ ವಿಳಂಬ ಮಾಡಿಸ್ತಿದ್ದಾರೆ. ಇದಕ್ಕೆ ಕಾರಣವಾದವರ ಹೆಸರನ್ನು ಕೂಡಾ ಸದ್ಯದಲ್ಲೇ ಬಹಿರಂಗ ಮಾಡ್ತೀವಿ ಎಂದು ಗುಡುಗಿದ್ದಾರೆ. 

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪಂಚಮಸಾಲಿ ಸಮಾಜದ ಭಾವನೆಗಳ ಜೊತೆ ಚೆಲ್ಲಾಟ ಆಡ್ತಿದ್ದಾರೆ  - ಜಯ ಮೃತ್ಯುಂಜಯ ಸ್ವಾಮೀಜಿ - Raj News Kannada

ಮೀಸಲಾತಿ ಕುರಿತು ಮಾಜಿ ಸಚಿವ ಈಶ್ವರಪ್ಪ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ಅವರು ಹಾಗೆ ಮಾತನಾಡಿದ್ದು ತಪ್ಪು. ನಮ್ಮ ಸಮಾಜದ ಬಗ್ಗೆ ಮಾತಾಡಿದ್ದರೆ ಏನೋ ದೊಡ್ಡ ಸಾಹುಕಾರರಿದ್ದಾರೆ ಅಂತ ಸುಮ್ಮನಾಗುತ್ತಿದ್ದೆವು. ಆದರೆ ತಮಗೆ ಜನ್ಮ ನೀಡಿದ ಹಾಲುಮತ ಸಮಾಜಕ್ಕೆ ಮೀಸಲಾತಿ ಬೇಡ ಅಂತ ಹೇಳಿದರೆ ತಪ್ಪು, ಆ ತರ ಮಾತನಾಡಬಾರದು ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

Follow us on Twitter

Jaya Mrityunjaya Swamiji of Kudala Sangam Panchamasali Peeth held a press conference in Haveri regarding the issue of reservation of 2 A for Panchamasali Samaj . Chief Minister Basavaraj Bommai is playing with the sentiments of Panchmasali society.CM Basavaraj Bommai has made a mistake. Panchamasali said that he would give good news to the society regarding reservation. But reservation was not announced till now. We are going to hold a massive protest in front of the Chief Minister's Shiggavi residence on September 20.