ಬ್ರೇಕಿಂಗ್ ನ್ಯೂಸ್
24-09-22 03:01 pm HK News Desk ಕರ್ನಾಟಕ
ಶಿವಮೊಗ್ಗ, ಸೆ.24 : ಐಸಿಸ್ ಉಗ್ರವಾದಿ ಸಂಘಟನೆ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳು ಬಾಂಬ್ ಸಿದ್ಧಪಡಿಸುತ್ತಿದ್ದರು. ತುಂಗಾ ನದಿ ದಂಡೆಯಲ್ಲಿ ಬಾಂಬ್ ಸ್ಫೋಟದ ಪ್ರಯೋಗ ನಡೆಸುತ್ತಿದ್ದರು. ಕಳೆದ ಆಗಸ್ಟ್ ತಿಂಗಳಲ್ಲಿ ಕೊನೆಯ ಬಾರಿಗೆ ಇಲ್ಲಿನ ಕೆಮ್ಮಣ್ಣುಗುಂಡಿ ಬಳಿ ಬಾಂಬ್ ಸ್ಫೋಟದ ರಿಹರ್ಸಲ್ ನಡೆಸಿದ್ದರು ಎಂದು ಶಿವಮೊಗ್ಗ ಎಸ್ಪಿ ಲಕ್ಷೀಪ್ರಸಾದ್ ಹೇಳಿದ್ದಾರೆ.
ದೇಶದ ತ್ರಿವರ್ಣ ಧ್ವಜವನ್ನು ಸುಟ್ಟು ಅದನ್ನು ಮೊಬೈಲಿನಲ್ಲಿ ವಿಡಿಯೊ ರೆಕಾರ್ಡ್ ಮಾಡಿಕೊಂಡಿದ್ದರು. ಸ್ಥಳ ಮಹಜರು ನಡೆಸಿದ ವೇಳೆ ವಿಧಿ ವಿಜ್ಞಾನ ತಜ್ಞರು ಸ್ಫೋಟಕ್ಕೆ ಸಂಬಂಧಿಸಿದ ಅವಶೇಷಗಳನ್ನು ಹಾಗೂ ಅರೆಬರೆ ಸುಟ್ಟ ತ್ರಿವರ್ಣ ಧ್ವಜವನ್ನು ಸಂಗ್ರಹಿಸಿದ್ದಾರೆ. ಆರೋಪಿಗಳ ಬಳಿಯಲ್ಲಿದ್ದ ವಿಡಿಯೋವನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಆರೋಪಿಗಳು ಟೆಲಿಗ್ರಾಂ ಆ್ಯಪ್ ಮೂಲಕ ಐಸಿಸ್ ಸಂಘಟನೆಯ ಅಧಿಕೃತ ಮಾಧ್ಯಮ ಅಲ್-ಹಯಾತ್ ಗ್ರೂಪ್ ಸದಸ್ಯರಾಗಿದ್ದರು. ಸಂಘಟನೆಯ ಪ್ರಚಾರಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಅಲ್ಲಿಂದಲೇ ಸ್ವೀಕರಿಸುತ್ತಿದ್ದರು. ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿರುವ ಸೈಯದ್ ಯಾಸೀನ್ ಬಾಂಬ್ ತಯಾರಿಕೆಯ ಬಗ್ಗೆ ಐಸಿಸ್ ಕಡೆಯಿಂದಲೇ ಮಾಹಿತಿ ಸಂಗ್ರಹಿಸಿದ್ದ. ಟೈಮರ್ ರಿಲೇ ಸರ್ಕ್ಯೂಟ್‌ಗಳನ್ನು ಅಮೇಜಾನ್ ಮೂಲಕ ತರಿಸಿಕೊಂಡಿದ್ದರು. 9 ವೋಲ್ಟ್ ಬ್ಯಾಟರಿ, ಸ್ವಿಚ್, ವೈರ್, ಮ್ಯಾಚ್ ಬಾಕ್ಸ್ ಸೇರಿದಂತೆ ಉಳಿದ ವಸ್ತುಗಳನ್ನು ಖರೀದಿಸಿದ್ದರು.
ಪ್ರಯೋಗದ ವೇಳೆ ಬಾಂಬ್ ಸ್ಫೋಟ ಯಶಸ್ವಿಯಾಗಿದ್ದರಿಂದ ಮುಂದಿನ ದಿನಗಳಲ್ಲಿ ಬೇರೆ ಬೇರೆ ಕಡೆ ಬಾಂಬ್ ಸ್ಫೋಟಕ್ಕೆ ಸಿದ್ಧತೆ ನಡೆಸಿದ್ದರು. ಆದರೆ ವಿವಿಧ ಕಡೆ ಬಾಂಬ್ ಸ್ಫೋಟಕ್ಕೆ ಸಿದ್ಧತೆ ನಡೆಸಿರುವಾಗಲೇ ಸಿಕ್ಕಿಬಿದ್ದಿದ್ದಾರೆ. ಬಾಂಬ್ ತಯಾರಿಗೆ ಕಚ್ಚಾ ವಸ್ತುಗಳನ್ನು ಪಡೆಯಲು ಹಣವನ್ನು ಶಾರೀಕ್ ಆನ್‌ಲೈನ್ ಮೂಲಕ ಯಾಸೀನ್‌ಗೆ ಕಳುಹಿಸುತ್ತಿದ್ದ. ಆರೋಪಿಗಳು ಸಂವಹನ, ಸಂಪರ್ಕಕ್ಕೆ ಟೆಲಿಗ್ರಾಂ, ಇನ್ಸಾಗ್ರಾಂ, ವೈರ್, ಎಲಿಮೆಂಟ್, ವಿಕ್ಕರ್ ರೀತಿಯ ಏಪ್ ಗಳನ್ನು ಬಳಸುತ್ತಿದ್ದರು ಎಂದವರು ತಿಳಿಸಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಬಂದಿರುವುದು ಬ್ರಿಟಿಷ್ ಆಡಳಿತದಿಂದ. ಆದರೆ, ನಮಗೆ ನಿಜವಾದ ಸ್ವಾತಂತ್ರ್ಯ ಸಿಗಬೇಕಾದರೆ ಈಗಿರುವ ವ್ಯವಸ್ಥೆಯ ವಿರುದ್ಧ ಯುದ್ಧ ಸಾರಬೇಕಿದೆ. ದೇಶದಲ್ಲಿ ಖಿಲಾಫತ್ ಆಡಳಿತ ಸ್ಥಾಪಿಸಬೇಕಿದೆ. ಷರಿಯಾ ಕಾನೂನು ಜಾರಿಗೆ ತರಬೇಕಿದೆ. ಇವೆಲ್ಲ ತಮ್ಮ ಆಶಯಕ್ಕೆ ಅನುಗುಣವಾಗಿ ಐಸಿಸ್ ಕಾರ್ಯ ನಿರ್ವಹಿಸುತ್ತಿದೆ. ಇಸ್ಲಾಂ ಉನ್ನತಿಗೇರಿಸಲು ಜಿಹಾದ್ ಮೂಲಕ ಕಾಫಿರ್‌ಗಳ ವಿರುದ್ಧ ಯುದ್ಧ ನಡೆಸಬೇಕಿದೆ ಎಂಬ ವಿಚಾರವನ್ನು ಆರೋಪಿಗಳು ಹೊಂದಿದ್ದರು. ಅದಕ್ಕೋಸ್ಕರ ವಿವಿಧ ಕಡೆಗಳಲ್ಲಿ ಸ್ಫೋಟ ನಡೆಸಿ ಸಾವು ನೋವಿಗೆ ತಯಾರಿ ನಡೆಸಿದ್ದರು ಎಂದು ಲಕ್ಷ್ಮೀಪ್ರಸಾದ್ ವಿವರಿಸಿದರು.
The youths arrested on the charge of links with ISIS, a banned organisation, had executed a trial blast on the bank of Tunga river in Shivamogga, said Shivamogga Superintendent of Police B.M. Laxmi Prasad.The youths arrested on the charge of links with ISIS, a banned organisation, had executed a trial blast on the bank of Tunga river in Shivamogga, said Shivamogga Superintendent of Police B.M. Laxmi Prasad.
05-02-25 06:39 pm
HK News Desk
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
06-02-25 02:21 pm
HK News Desk
Kerala Suicide, Ragging: ಕೇರಳದಲ್ಲಿ 15ರ ಬಾಲಕ ಮ...
04-02-25 10:49 pm
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
05-02-25 10:51 pm
Mangalore Correspondent
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
Mangalore gun misfire, congress, chittaranjan...
04-02-25 07:47 pm
06-02-25 04:35 pm
HK News Desk
Raichur Rape, Crime: ರಾಯಚೂರಿನಲ್ಲಿ ಎರಡನೇ ಕ್ಲಾಸ...
06-02-25 12:00 pm
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm
Ullal Police Station, Mangalore, Crime: ಪಿಎಸ್...
03-02-25 05:46 pm
Bangalore honeytrap case, Crime: ಮದುವೆಗೆ ವಧು...
02-02-25 09:00 pm