ರಾಜ್ಯಾದ್ಯಂತ 108 ಆಂಬುಲೆನ್ಸ್ ಸೇವೆ ಸ್ಥಗಿತ ; ಆರೋಗ್ಯ ಇಲಾಖೆಯ ಮಹಾ ಎಡವಟ್ಟು,  ಜನರ ಪರದಾಟ ! 

25-09-22 04:04 pm       Bangalore Correspondent   ಕರ್ನಾಟಕ

ಜನಸಾಮಾನ್ಯರ ಪಾಲಿಗೆ ತುರ್ತು ಸಂದರ್ಭದಲ್ಲಿ ಆಪದ್ಬಾಂಧವ ಎನಿಸಿಕೊಂಡಿರುವ 108 ಆ್ಯಂಬುಲೆನ್ಸ್​ ಸೇವೆ ರಾಜ್ಯಾದ್ಯಂತ ಶನಿವಾರ ರಾತ್ರಿಯಿಂದಲೇ ಸ್ಥಗಿತಗೊಂಡಿದೆ.

ಬೆಂಗಳೂರು, ಸೆ.25 : ಜನಸಾಮಾನ್ಯರ ಪಾಲಿಗೆ ತುರ್ತು ಸಂದರ್ಭದಲ್ಲಿ ಆಪದ್ಬಾಂಧವ ಎನಿಸಿಕೊಂಡಿರುವ 108 ಆ್ಯಂಬುಲೆನ್ಸ್​ ಸೇವೆ ರಾಜ್ಯಾದ್ಯಂತ ಶನಿವಾರ ರಾತ್ರಿಯಿಂದಲೇ ಸ್ಥಗಿತಗೊಂಡಿದೆ. ಆರೋಗ್ಯ ಇಲಾಖೆಯ ಮಹಾ ಎಡವಟ್ಟಿನಿಂದಾಗಿ ಜನರು ಪರದಾಟ ನಡೆಸುವಂತಾಗಿದೆ.‌ 

ಸಹಾಯವಾಣಿ ನಂಬರ್​ 108ಕ್ಕೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ರಿಂಗ್​ ಆಗುತ್ತದೆಯೇ ಹೊರತು ಉತ್ತರ ಬರುತ್ತಿಲ್ಲ. ತುರ್ತು ಸಮಯದಲ್ಲಿ ಆಂಬುಲೆನ್ಸ್​ ಸಿಗದೆ ಜನರು ಪರದಾಡುತ್ತಿದ್ದಾರೆ.

ರಾಜ್ಯದಲ್ಲಿ ಜಿವಿಕೆ ಏಜೆನ್ಸಿ 108 ಸರಕಾರಿ ಆಂಬುಲೆನ್ಸ್ ಸೇವೆಯನ್ನು ನೀಡುತ್ತಿದೆ. ತಾಂತ್ರಿಕ ದೋಷದಿಂದ ತುರ್ತು ಸೇವೆ ಬಂದ್ ಆಗಿದೆ ಎನ್ನಲಾಗುತ್ತಿದೆ. ರಾಜ್ಯದಾದ್ಯಂತ ತುರ್ತು ಆರೋಗ್ಯ ಸೇವೆ ವ್ಯತ್ಯಯ ಆಗಿದ್ದರೂ ಸರ್ಕಾರ ಮಾತ್ರ ನಿರ್ಲಕ್ಷ್ಯ ತೋರಿದೆ. ರಾಜ್ಯಾದ್ಯಂತ ಆಂಬುಲೆನ್ಸ್ ಸೇವೆ ಬಂದ್ ಆಗಿದ್ದರೂ ಬಗೆಹರಿಸಲು ಸರ್ಕಾರ ಮುಂದಾಗಿಲ್ಲ. 108ಕ್ಕೆ ನಿತ್ಯವೂ ಸುಮಾರು 20 ಸಾವಿರ ಕರೆ ಬರುತ್ತದೆ ಎನ್ನುವ ಲೆಕ್ಕಾಚಾರ ಇದೆ. ಗಂಟೆಗೆ ಅಂದಾಜು 500 ಕರೆಗಳು ಬರುತ್ತವೆ. ಆದರೆ, ಈಗ ಕರೆ ಬರುತ್ತಿದ್ದರೂ, 108 ಆಂಬ್ಯುಲೆನ್ಸ್ ಸಿಬ್ಬಂದಿ ಸ್ವೀಕರಿಸುತ್ತಿಲ್ಲ. ಮೇಲ್ನೋಟಕ್ಕೆ ತಾಂತ್ರಿಕ ದೋಷ ಎನ್ನಲಾಗುತ್ತಿದ್ದರೂ, ಅದನ್ನು ತುರ್ತು ಸರಿಪಡಿಸಬೇಕಾದವರು ನಿರ್ಲಕ್ಷ್ಯ ತೋರಿದ್ದಾರೆ. 

ಭಾನುವಾರ ರಜೆ ದಿನವಾದ್ದರಿಂದ ತಾಂತ್ರಿಕ ಸಿಬ್ಬಂದಿ ದೂರ ಉಳಿದಿದ್ದಾರೆ. ಸರಕಾರಿ ತುರ್ತು ಸೇವೆಯ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದರ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸೆ.24ರ ಶನಿವಾರ ರಾತ್ರಿಯಿಂದ ಬಂದಿರುವ ಒಟ್ಟು 8000 ಕರೆಗಳಲ್ಲಿ 2000 ಸಾವಿರ ಕರೆಗಳು ಗಂಭೀರ ಕರೆಗಳಾಗಿರುವ ಸಾಧ್ಯತೆಯಿದೆ. 

Karnataka CM Bommai leaves for Davos to participate in World Economic Forum  | Cities News,The Indian Express

ತಕ್ಷಣಕ್ಕೆ ಆರಂಭಕ್ಕೆ ಸೂಚನೆ 

ಆಂಬುಲೆನ್ಸ್ ಸೇವೆ ಸ್ಥಗಿತ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಆರೋಗ್ಯ ಇಲಾಖೆಯಲ್ಲಿ ಏನಾಗಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ. ಸೇವೆಯನ್ನು ತಕ್ಷಣ ಆರಂಭಿಸುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಕರ್ನಾಟಕದಲ್ಲಿ 108 ಆ್ಯಂಬುಲೆನ್ಸ್ ಸೇವೆ ಸ್ಥಗಿತ: ಕಾರಣ ಕೊಟ್ಟ ಜಿವಿಕೆ-EMRI ಮುಖ್ಯಸ್ಥ  | EMRI chief Hanumanthappa Gives Clarify to 108 ambulance service stopped  In Karnataka rbj | TV9 Kannada

ಸರ್ವರ್ ಸಮಸ್ಯೆ ಆಗಿದೆ 

ಜಿವಿಕೆ ರಾಜ್ಯ ಮುಖ್ಯಸ್ಥ ಹನುಮಂತಪ್ಪ ಆರ್. ಜಿ. ಮಾತನಾಡಿ, ಸರ್ವರ್​ ವಿಭಾಗದ ಸಾಫ್ಟ್ ವೇರ್, ಹಾರ್ಡ್​ವೇರ್ ನಲ್ಲಿ ತಾಂತ್ರಿಕ ದೋಷ ಉಂಟಾಗಿದೆ. ಹೀಗಾಗಿ ಸಾರ್ವಜನಿಕ ಕರೆಯನ್ನು ಮಾನಿಟರ್ ಮಾಡಲು ಸಾಧ್ಯವಾಗುತ್ತಿಲ್ಲ. ಕೇವಲ ಕರೆಯನ್ನು ಸ್ವೀಕಾರ ಮಾಡುತ್ತಿದ್ದೇವೆ. ಚೆನ್ನೈನಿಂದ ಸರ್ವರ್ ಹಾರ್ಡ್​ವೇರ್​ಗೆ ಕಾಯುತ್ತಿದ್ದೇವೆ. ಬಂದ ಬಳಿಕ ಟೆಕ್ನಿಕಲ್ ಸಮಸ್ಯೆ ಪರಿಹಾರ ಆಗಲಿದೆ. ತುರ್ತು ಸಂದರ್ಭಕ್ಕಾಗಿ 112 ಕ್ಕೆ ಕರೆ ಮಾಡಬಹುದು ಎಂದಿದ್ದಾರೆ.

Karnataka 108 ambulance service no more, people in trouble.