ಬ್ರೇಕಿಂಗ್ ನ್ಯೂಸ್
25-09-22 07:17 pm Bangalore Correspondent ಕರ್ನಾಟಕ
ಬೆಂಗಳೂರು, ಸೆ,25: ಜಾಲಹಳ್ಳಿಯಲ್ಲಿರುವ ವಾಯುಪಡೆಗೆ ಸೇರಿದ ತಾಂತ್ರಿಕ ಕಾಲೇಜಿನ ಹಾಸ್ಟೆಲ್ ನಲ್ಲಿ ಕೇಡೆಟ್ ಒಬ್ಬ ನಿಗೂಢ ಸಾವು ಕಂಡಿದ್ದು, ಜೊತೆಗಿದ್ದ ವಾಯುಪಡೆ ಅಧಿಕಾರಿಗಳೇ ಸೇರಿ ಕೊಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಘಟನೆ ಹಿನ್ನೆಲೆಯಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಅದರಂತೆ ಆರು ಮಂದಿ ವಾಯುಪಡೆ ಅಧಿಕಾರಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಉತ್ತರ ಭಾರತ ಮೂಲದ ಅಂಕಿತ್ ಕುಮಾರ್ ಝಾ (27) ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಬುಧವಾರ ಶವ ಪತ್ತೆಯಾಗಿದ್ದು, ಕುಟುಂಬಸ್ಥರು ಬಂದು ನೋಡಿದಾಗ ಡೆತ್ ನೋಟ್ ಪತ್ತೆಯಾಗಿದೆ. ಅಲ್ಲದೆ, ಅದರಲ್ಲಿ ಏರ್ ಕಮಾಂಡರ್, ಗ್ರೂಪ್ ಕ್ಯಾಪ್ಟನ್ ಮತ್ತು ವಿಂಗ್ ಕಮಾಂಡರ್ ಸೇರಿದಂತೆ ಆರು ಮಂದಿಯ ಹೆಸರನ್ನು ಉಲ್ಲೇಖ ಮಾಡಲಾಗಿತ್ತು. ಅವರು ನೀಡಿದ್ದ ಕಿರುಕುಳದ ಬಗ್ಗೆಯೂ ಬರೆಯಲಾಗಿತ್ತು. ಅದರಂತೆ ಸ್ಥಳೀಯ ಪೊಲೀಸರು ವಾಯುಪಡೆ ಅಧಿಕಾರಿಗಳ ವಿರುದ್ಧ ಕೇಸು ದಾಖಲಿಸಿದ್ದಾರೆ.
ಕುಟುಂಬಸ್ಥರು ಹೇಳುವ ಪ್ರಕಾರ, ಅಂಕಿತ್ ಕುಮಾರನ್ನು ಕಳೆದ ಜುಲೈನಲ್ಲಿಯೇ ವಜಾ ಮಾಡಲಾಗಿತ್ತು. ಇಲಾಖಾ ತನಿಖೆ ನಡೆದು ತಪಿತಸ್ಥ ಎಂದು ನಿರ್ಧರಿಸಿ ವಜಾ ಮಾಡುವ ಬಗ್ಗೆ ನಿರ್ಧಾರ ಕೈಗೊಂಡಿದ್ದರು. ಈ ನಡುವೆ, ಫೋನ್ ಮಾಡಿದ್ದಾಗ ಕೆಲವು ದಾಖಲೆ ಪತ್ರಗಳಿಗೆ ಸಹಿ ಮಾಡುವಂತೆ ಅಧಿಕಾರಿಗಳು ಒತ್ತಡ ಹೇರುತ್ತಿರುವ ಬಗ್ಗೆ ಹೇಳಿಕೊಂಡಿದ್ದ. ಶಿಸ್ತು ಕ್ರಮದ ಕಾರಣದಿಂದ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂದಿದ್ದಾರೆ.
ಅಲ್ಲದೆ, ಅಂಕಿತ್ ಕುಮಾರ್ ಸಾವಿನ ಬಗ್ಗೆಯೂ ಕುಟುಂಬಕ್ಕೆ ತಿಳಿಸಿರಲಿಲ್ಲ. ಫೋನ್ ರಿಸೀವ್ ಮಾಡುತ್ತಿಲ್ಲ ಎಂದು ಪದೇ ಪದೇ ಕರೆ ಮಾಡಿದ್ದೆವು. ಬಳಿಕ ಶುಕ್ರವಾರ ಸಂಜೆ 7 ಗಂಟೆಗೆ ನಾವು ಇಲ್ಲಿಗೆ ತಲುಪಿದಾಗಲೇ ಸಾವಿನ ವಿಚಾರ ತಿಳಿದುಬಂದಿದೆ ಎಂದು ಆತನ ತಂಗಿ ಹೇಳಿದ್ದಾರೆ. ಈ ಬಗ್ಗೆ ಉತ್ತರ ವಿಭಾಗದ ಡಿಸಿಪಿ ವಿನಾಯಕ ಪಾಟೀಲ್ ಪ್ರತಿಕ್ರಿಯಿಸಿದ್ದು, ನಾವು ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರ ದೂರಿನಂತೆ ಕೊಲೆ ಪ್ರಕರಣ ದಾಖಲಿಸಿದ್ದೇವೆ. ಡೆತ್ ನೋಟ್ ಉಲ್ಲೇಖ ಆಗಿರುವಂತೆ ಆರು ಮಂದಿಯ ವಿರುದ್ಧವೂ ಕೇಸು ದಾಖಲಾಗಿದೆ. ತನಿಖೆ ನಡೆಸಿ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸುತ್ತೇವೆ ಎಂದಿದ್ದಾರೆ.
ಕೋರ್ಟ್ ಮಾರ್ಶಲ್ ಬಗ್ಗೆ ಮಾಹಿತಿ ಕೇಳಿದ್ದೇವೆ. ನಮಗೆ ಬಂದಿರುವ ಮಾಹಿತಿ ಪ್ರಕಾರ, ಆತನನ್ನು ಸೇವೆಯಿಂದ ವಜಾ ಮಾಡಲಾಗಿದೆ. ಆದರೆ ಕೋರ್ಟ್ ಮಾರ್ಶಲ್ ಬಗ್ಗೆಯೂ ನಿಶ್ಚಿತ ಮಾನದಂಡ ಇರುತ್ತದೆ. ಯಾವ ರೀತಿ ಮಾಡಿದ್ದಾರೆ ಎನ್ನುವ ಬಗ್ಗೆ ದಾಖಲೆ ಸಲ್ಲಿಸಲು ಕೇಳಿದ್ದೇವೆ. ಡೆತ್ ನೋಟ್ ನಲ್ಲಿ ತನಗೆ ಕಿರುಕುಳ ನೀಡುತ್ತಿರುವ ಬಗ್ಗೆ ಉಲ್ಲೇಖ ಇದೆ. ಪತ್ರವನ್ನು ಫಾರೆನ್ಸಿಕ್ ಪರೀಕ್ಷೆಗೆ ಕಳುಹಿಸಿದ್ದೇವೆ. ವಾಯುಪಡೆ ಅಧಿಕಾರಿಗಳು ತನಿಖೆಗೆ ಸಹಕರಿಸುತ್ತಿದ್ದಾರೆ. ಡೆತ್ ನೋಟ್ ಮತ್ತು ಆತನ ಎರಡು ಮೊಬೈಲನ್ನು ಪೊಲೀಸರಿಗೆ ನೀಡಿದ್ದಾರೆ. ಕೃತ್ಯದಲ್ಲಿ ಕೈಯಾಡಿಸಿದ್ದಾರೆ ಅಂತ ಅನಿಸುತ್ತಿಲ್ಲ. ಆದರೆ ಸಾವಿನ ಬಗ್ಗೆ ಪ್ರಾಥಮಿಕ ಮಾಹಿತಿ ತಿಳಿಯಲು ಎಫ್ಎಸ್ ಎಲ್ ವರದಿ ಬರಬೇಕು. ವಾಯುಪಡೆ ಅಧಿಕಾರಿಗಳಿಗೆ ಕರೆದಾಗ ಬಂದು ಹೇಳಿಕೆ ನೀಡುವಂತೆ ಸೂಚಿಸಿದ್ದೇವೆ ಎಂದು ಡಿಸಿಪಿ ವಿನಾಯಕ ಪಾಟೀಲ್ ತಿಳಿಸಿದ್ದಾರೆ.
Police have booked six air force officials for murder days after a 27-year-old student was found dead in the hostel of Air Force Technical College (AFTC) in Bengaluru’s Jalahalli. Police said so far, they haven't made any arrests. Among those booked are officers of the ranks of air commodore, group captain and wing commander, said a senior police officer.
05-02-25 06:39 pm
HK News Desk
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
06-02-25 02:21 pm
HK News Desk
Kerala Suicide, Ragging: ಕೇರಳದಲ್ಲಿ 15ರ ಬಾಲಕ ಮ...
04-02-25 10:49 pm
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
05-02-25 10:51 pm
Mangalore Correspondent
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
Mangalore gun misfire, congress, chittaranjan...
04-02-25 07:47 pm
06-02-25 04:35 pm
HK News Desk
Raichur Rape, Crime: ರಾಯಚೂರಿನಲ್ಲಿ ಎರಡನೇ ಕ್ಲಾಸ...
06-02-25 12:00 pm
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm
Ullal Police Station, Mangalore, Crime: ಪಿಎಸ್...
03-02-25 05:46 pm
Bangalore honeytrap case, Crime: ಮದುವೆಗೆ ವಧು...
02-02-25 09:00 pm