ಬ್ರೇಕಿಂಗ್ ನ್ಯೂಸ್
26-09-22 02:05 pm HK News Desk ಕರ್ನಾಟಕ
ಮೈಸೂರು, ಸೆ.26: ಇದೇ ಮೊದಲ ಬಾರಿಗೆ ಕರ್ನಾಟಕದ ನಾಡಹಬ್ಬ ಎಂದೇ ಖ್ಯಾತಿ ಪಡೆದಿರುವ ಮೈಸೂರು ದಸರಾ ಉತ್ಸವವನ್ನು ರಾಷ್ಟ್ರಪತಿ ಉದ್ಘಾಟಿಸಿದ್ದಾರೆ. ರಾಷ್ಟ್ರಪತಿಯಾಗಿ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ ದ್ರೌಪದಿ ಮುರ್ಮು ಚಾಮುಂಡಿಬೆಟ್ಟದಲ್ಲಿ ದೇವಿಯ ದರ್ಶನ ಪಡೆದು ಬಳಿಕ ಉತ್ಸವಕ್ಕೆ ಚಾಲನೆ ನೀಡಿದ್ದಾರೆ.
ಬೆಳ್ಳಿ ಪಲ್ಲಕ್ಕಿಯಲ್ಲಿ ಕುಳಿತ ನಾಡದೇವಿ ಚಾಮುಂಡೇಶ್ವರಿಗೆ ದೀಪ, ಆರತಿ ಬೆಳಗಿ ಪುಷ್ಪಾರ್ಚನೆ ಮಾಡಿ ವಿಧ್ಯುಕ್ತವಾಗಿ ಉತ್ಸವಕ್ಕೆ ಚಾಲನೆ ನೀಡಿದರು. ಇದೇ ವೇಳೆ, ವೇದಿಕೆಯ ಸಮಾರಂಭದಲ್ಲಿ ಮಾತನಾಡಿದ ದ್ರೌಪದಿ ಮುರ್ಮು, ಭಕ್ತಿ ಸಾಧನೆಗೆ, ಮಹಿಳಾ ಸಮಾನತೆಗೆ ಕರ್ನಾಟಕ ರಾಜ್ಯ ಮಾದರಿ. ಆದರ್ಶ ರಾಜ್ಯವಾಗಿದೆ ಎಂದು ಹೇಳಿದರು.
12ನೇ ಶತಮಾನದಲ್ಲಿ ಬಸವಣ್ಣ, ಅಲ್ಲಮ ಪ್ರಭು, ಅಕ್ಕ ಮಹಾದೇವಿ ಆಧ್ಮಾತ್ಮಿಕ ಸಾಧನೆಗಾಗಿ ದುಡಿದರು. ಬಸವಣ್ಣ ಸಮಾನತೆಯ ಸಮಾಜಕ್ಕಾಗಿ ಅನುಭವ ಮಂಟಪ ಕಟ್ಟಿದರು. ಶಂಕರಾಚಾರ್ಯರು ಮಠಗಳನ್ನು ಕಟ್ಟಿ ಆಧ್ಯಾತ್ಮಿಕ ಸಾಧನೆ ಮಾಡಿದರು. ರಾಣಿ ಅಬ್ಬಕ್ಕ, ರಾಣಿ ಚೆನ್ನಮ್ಮ, ಒನಕೆ ಓಬಮ್ಮ ಮಹಿಳಾ ಸಾಧಕಿಯರಾಗಿ ಆದರ್ಶರಾಗಿದ್ದಾರೆ. ಮಹಿಷಾಸುರನನ್ನು ಕೊಂದ ದೇವಿಯ ಹೆಸರಲ್ಲಿ ನಡೆಯುವ ಉತ್ಸವವನ್ನು ಉದ್ಘಾಟಿಸುವ ಭಾಗ್ಯ ಸಿಕ್ಕಿದ್ದು ಜೀವನದಲ್ಲಿ ಅವಿಸ್ಮರಣೀಯ ಕ್ಷಣ ಎಂದು ಹೇಳಿದರು. ಭಾಷಣದ ಮೊದಲಿಗೆ ಕನ್ನಡದಲ್ಲಿಯೇ ಮಾತನಾಡಿದ ಮುರ್ಮು, ದೇವಿ ಚಾಮುಂಡೇಶ್ವರಿಗೆ, ನೆರೆದ ಎಲ್ಲ ಸಭಿಕರಿಗೂ ನನ್ನ ಹೃದಯಪೂರ್ವಕ ನಮನಗಳು ಎಂದು ಹೇಳುವ ಮೂಲಕ ಸೇರಿದ್ದ ಜನರ ಚಪ್ಪಾಳೆ ಗಿಟ್ಟಿಸಿದರು.
ಬಳಿಕ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ರಾಜ ಪ್ರಭುತ್ವ ಅಳಿದು ಪ್ರಜಾಪ್ರಭುತ್ವ ಆಡಳಿತಕ್ಕೆ ಬಂದರೂ, ಹಿಂದಿನ ಸಂಪ್ರದಾಯಕ್ಕೆ ಚ್ಯುತಿ ಬರದಂತೆ ಸರಕಾರದಿಂದಲೇ ನಾಡಹಬ್ಬ ಆಚರಣೆ ಮಾಡುತ್ತಿದ್ದೇವೆ. ಕಳೆದೆರಡು ವರ್ಷಗಳಲ್ಲಿ ಕೊರೊನಾ ಕಾರಣದಿಂದ ಅದ್ದೂರಿಯಾಗಿ ಉತ್ಸವ ನಡೆದಿರಲಿಲ್ಲ. ಈ ಬಾರಿ ವೈಭವ, ಅದ್ದೂರಿತನಕ್ಕೆ ಕೊರತೆಯಾಗದಂತೆ ಉತ್ಸವ ನಡೆಸಲಾಗುವುದು. ಮಹಿಷಾಸುರನನ್ನು ಕೊಂದ ದೇವಿಯನ್ನು ಆರಾಧಿಸುವುದು ನವರಾತ್ರಿ ಹಬ್ಬ. ಈಗ ಮಹಿಷಾಸುರರು ಇಲ್ಲ. ಆದರೆ ನಮ್ಮೊಳಗಿನ ಮಹಿಷಾಸುರನ ಗುಣಗಳನ್ನು ತ್ಯಜಿಸಲು ನವರಾತ್ರಿಯಲ್ಲಿ ಸಂಕಲ್ಪ ಮಾಡಬೇಕು ಎಂದು ಹೇಳಿದರು.
ಉದ್ಘಾಟನೆ ಬಳಿಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅವರು ರಾಷ್ಟ್ರಪತಿಗೆ ಪೇಟ ತೊಡಿಸಿ, ಚಾಮುಂಡೇಶ್ವರಿಯ ಬೆಳ್ಳಿ ಮೂರ್ತಿಯನ್ನು ಕೊಟ್ಟು ಸನ್ಮಾನಿಸಿದರು. ರಾಷ್ಟ್ರಪತಿಯವರು ವೇದಿಕೆಯಲ್ಲಿ ಹುಣಸೂರು, ಎಚ್.ಡಿ ಕೋಟೆ, ಪಿರಿಯಾಪಟ್ಟಣದ 200 ಆದಿವಾಸಿಗಳ ಜೊತೆ ಕಲೆತು ಫೋಟೋ ತೆಗೆಸಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ವೇದಿಕೆಯಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ, ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಇಂಧನ ಸಚಿವ ಸುನಿಲ್ ಕುಮಾರ್ ಇದ್ದರು. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿಟಿ ದೇವೇಗೌಡ ಅಧ್ಯಕ್ಷತೆ ವಹಿಸಿ ರಾಷ್ಟ್ರಪತಿ ಜೊತೆಗೆ ವೇದಿಕೆ ಹಂಚಿಕೊಳ್ಳಬೇಕಿತ್ತು. ಮೈಸೂರು ಮೇಯರ್ ಗೂ ಅವಕಾಶ ನೀಡಬೇಕಿತ್ತು. ಆದರೆ ರಾಷ್ಟ್ರಪತಿ ಕಚೇರಿಯ ಸೂಚನೆಯೆಂದು ಹೇಳಿ ಅವರಿಬ್ಬರಿಗೂ ವೇದಿಕೆಯೇರಲು ಅವಕಾಶ ನೀಡಿರಲಿಲ್ಲ.
ವಿಶ್ವ ವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಲು ಮೈಸೂರಿಗೆ ಆಗಮಿಸಿದ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಮಾನ್ಯ ರಾಜ್ಯಪಾಲರಾದ ಶ್ರೀ @TCGEHLOT ಹಾಗೂ ಮುಖ್ಯಮಂತ್ರಿ @BSBommai ಅವರು ಆತ್ಮೀಯವಾಗಿ ಬರ ಮಾಡಿಕೊಂಡರು. pic.twitter.com/nDgg5NMw2F
— CM of Karnataka (@CMofKarnataka) September 26, 2022
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ-2022 ಕ್ಕೆ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರಿಂದ ಚಾಲನೆ. #MysuruDasara #Dasara2022 https://t.co/eN98pgJZUy
— CM of Karnataka (@CMofKarnataka) September 26, 2022
President Droupadi Murmu inaugurated the popular Mysuru Dasara festival at the Chamundi Hills on Monday in her first visit to the state as the president of India. Karnataka chief minister Basavaraj Bommai welcomed president Murmu at the Mysuru airport and felicitated her.CM Bommai wrote on Twitter, “Honorable President Mrs. Draupadi Murmu, who arrived in Mysore to inaugurate the world famous Mysore Dussehra, was given a warm welcome.
09-02-25 07:58 pm
Bangalore Correspondent
Renukacharya, Yatnal: ನೀನು ಜೆಡಿಎಸ್ ಸೇರಿ ಬಿರಿಯ...
09-02-25 06:58 pm
ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ತಿರಸ್ಕಾರ ; ರಾಜ್ಯ...
09-02-25 05:28 pm
Somanna, Viyayendra, BJP President; ರೆಬಲ್ ನಾಯ...
07-02-25 11:00 pm
ಮುಡಾ ಹಗರಣ ; ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್ ರಿಲೀಫ...
07-02-25 08:09 pm
09-02-25 09:32 pm
HK News Desk
Delhi Election Results 2025, BJP Win; ದೆಹಲಿಯಲ...
08-02-25 02:23 pm
BJP Delhi, AAP, Live result, Election: 27 ವರ್...
08-02-25 12:14 pm
Mahakumbh accident, Jaipur: ಜೈಪುರದಲ್ಲಿ ಭೀಕರ ರ...
07-02-25 05:27 pm
Zamfara school fire accident: SHOCKING; ತರಗತ...
07-02-25 05:23 pm
09-02-25 11:03 pm
Mangalore Correspondent
ಸುಳ್ಯದಲ್ಲಿ ಬೈಕ್ ಅಪಘಾತ ; ತೀವ್ರ ಗಾಯಗೊಂಡಿದ್ದ ಕಂಕ...
09-02-25 10:31 pm
Mangalore, Derlakatte, Drowning: ಕಪ್ಪೆ ಚಿಪ್ಪು...
09-02-25 07:40 pm
Job News, Yaticorp, Mangalore, AI; ಎಐ ಕ್ಷೇತ್...
08-02-25 10:46 pm
Mines, Krishnaveni Mangalore, Dinesh gundrao;...
08-02-25 01:08 pm
09-02-25 07:35 pm
Mangalore Correspondent
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm
Mangalore Mayor raid, slaughterhouse Kudroli:...
08-02-25 04:36 pm
Bidar murder crime: ಬೀದರ್ ; ಮನೆಮಂದಿ ನೋಡಿದ ಹುಡ...
08-02-25 01:00 pm