ಕಾಂಗ್ರೆಸ್, ಬಿಜೆಪಿ ಪೋಸ್ಟರ್ ಅಭಿಯಾನ ; ಎರಡೂ ಪಕ್ಷಗಳಿಗೆ ಠಕ್ಕರ್ ಕೊಡಲು ಜೆಡಿಎಸ್ ಸಿದ್ಧತೆ, ಕುಮಾರಸ್ವಾಮಿ ಆಡಳಿತದ ಬಗ್ಗೆ ಬರಲಿದೆ ಪಬ್ಲಿಕ್ ಪೋಸ್ಟರ್ ! 

27-09-22 05:25 pm       Bangalore Correspondent   ಕರ್ನಾಟಕ

ರಾಜ್ಯ ಸರ್ಕಾರದ ವಿರುದ್ಧ 'ಪೇಸಿಎಂ' ಪೋಸ್ಟರ್​ ಅಂಟಿಸಿ ಕಾಂಗ್ರೆಸ್ ಅಭಿಯಾನ ನಡೆಸುತ್ತಿದ್ದರೆ, ಅತ್ತ ಬಿಜೆಪಿಯಿಂದ ಸೋನಿಯಾ ಗಾಂಧಿ ಫೋಟೋ ಹಾಕಿ 'ಪೇ ಟು ಮೇಡಂ' ಪೋಸ್ಟರ್  ಪರಸ್ಪರ ಸಮರ ಆರಂಭಿಸಿವೆ.

ಬೆಂಗಳೂರು, ಸೆ.27 : ರಾಜ್ಯ ಸರ್ಕಾರದ ವಿರುದ್ಧ 'ಪೇಸಿಎಂ' ಪೋಸ್ಟರ್​ ಅಂಟಿಸಿ ಕಾಂಗ್ರೆಸ್ ಅಭಿಯಾನ ನಡೆಸುತ್ತಿದ್ದರೆ, ಅತ್ತ ಬಿಜೆಪಿಯಿಂದ ಸೋನಿಯಾ ಗಾಂಧಿ ಫೋಟೋ ಹಾಕಿ 'ಪೇ ಟು ಮೇಡಂ' ಪೋಸ್ಟರ್  ಪರಸ್ಪರ ಸಮರ ಆರಂಭಿಸಿವೆ. ಇವೆರಡೂ ರಾಷ್ಟ್ರೀಯ ಪಕ್ಷಗಳಿಗೆ ಕೌಂಟರ್​ ಕೊಡಲು ರೆಡಿಯಾಗಿರುವ ಜೆಡಿಎಸ್​, ಹೊಸ ಮಾದರಿಯ ಕ್ಯಾಂಪೇನ್ ಶುರು ಮಾಡಲು ಸಜ್ಜಾಗಿದೆ. 

ಜೆಡಿಎಸ್​ನಿಂದ 'ಪಬ್ಲಿಕ್' ಪೋಸ್ಟರ್  ಹೆಸರಲ್ಲಿ ಅಭಿಯಾನ ಆರಂಭಿಸಲು ಸಿದ್ಧತೆ ನಡೆಸುತ್ತಿದೆ. ಕ್ಯೂ ಆರ್ ಕೋಡ್ ಮಾದರಿಯಲ್ಲಿ ಪಬ್ಲಿಕ್ ಪೋಸ್ಟರ್ ಅಭಿವೃದ್ಧಿ ಪಡಿಸುವ ಕಾರ್ಯ ನಡೆದಿದೆ. ಈ ಕ್ಯೂ ಆರ್ ಕೋಡ್ ಸ್ಕ್ಯಾನ್​ ಮಾಡುತ್ತಿದ್ದಂತೆ ಎಚ್​.ಡಿ.ಕುಮಾರಸ್ವಾಮಿ ಅವರ ಆಡಳಿತ ಅವಧಿಯ ಸಾಧನೆಗಳು, ಮುಂಬರುವ ಚುನಾವಣಾ ಯೋಜನೆಗಳ ಮಾಹಿತಿ ಸಿಗಲಿದೆ. ರಾಷ್ಟ್ರೀಯ ಪಕ್ಷಗಳ ಹಗರಣಗಳ ಬಗ್ಗೆಯೂ ಇದರಲ್ಲಿ ಮಾಹಿತಿ ಇರಲಿದೆ. ಸೆ.30ರಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಅಧಿಕೃತ ಪೋಸ್ಟರ್​ನ ಕ್ಯೂ ಆರ್ ಕೋಡ್ ಬಿಡುಗಡೆ ಮಾಡಲಿದ್ದಾರೆ. ರಾಯಚೂರಿನಿಂದ ಈ ಹೊಸ ಅಭಿಯಾನ ಆರಂಭವಾಗಲಿದೆ.

PayCM' Posters at BJP's Office near Bengaluru: 'Evil Design,' Says  Karnataka CM; Congress Leaders Detained

ಕಳೆದ ವಾರ ರಾತ್ರೋರಾತ್ರಿ ಬೆಂಗಳೂರಲ್ಲಿ ಪೇಸಿಎಂ ಪೋಸ್ಟರ್​ ಅಂಟಿಸಿ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್​ ಅಭಿಯಾನ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಪೇಟಿಎಂ ಕ್ಯೂ ಆರ್ ಕೋಡ್ ಮಾದರಿಯಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಅವರ ಫೋಟೋ ಹಾಕಿ 'ರಾಜ್ಯವನ್ನ ಲೂಟಿ ಮಾಡಿ ಹಾಳು ಮಾಡಿರುವ ಭ್ರಷ್ಟ ಜೋಡಿಯನ್ನ ರಾಜ್ಯದಿಂದ ಕಿತ್ತೆಸೆಯಲು ಇದನ್ನ ಸ್ಕ್ಯಾನ್ ಮಾಡಿ ಎಂದು ಬಿಜೆಪಿ ಕಡೆಯಿಂದ ಪೋಸ್ಟ್ ಹಾಕಲಾಗಿತ್ತು. 'ಸ್ಕ್ಯಾಮ್ ರಾಮಯ್ಯ' ಹೆಸರಿನಲ್ಲಿ ಪುಸ್ತಕವನ್ನೂ ಬಿಡುಗಡೆ ಮಾಡಿ ಆಕ್ರೋಶ ಹೊರ ಹಾಕಿತ್ತು. ಅಲ್ಲದೆ, ಸೋನಿಯಾ ಗಾಂಧಿ ಫೋಟೋ ಸಹಿತ 'ಪೇ ಟು ಮೇಡಂ' ಪೋಸ್ಟರನ್ನೂ ಬಿಡುಗಡೆ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್​ ಅಧಿವೇಶನದಲ್ಲಿ 40% ಕಮಿಷನ್​ ಎಂದು ಬರೆದಿದ್ದ ಪ್ಲೆಕಾರ್ಡ್​ ಹಿಡಿದು ಧರಣಿ ನಡೆಸಿತ್ತು. ಈ ನಡುವೆ ರೈತ ಸಂಘದ ಸದಸ್ಯರು, 'PAY FARMER' ಎಂಬ ಅಭಿಯಾನ ಶುರು ಮಾಡಿದ್ದು ಹೊಸ ವಿದ್ಯಮಾನ‌ ಆಗಿತ್ತು.‌ ಇದರ ನಡುವೆ ಜೆಡಿಎಸ್, ಇವೆರಡೂ ರಾಷ್ಟ್ರೀಯ ಪಕ್ಷಗಳಿಗೆ ಠಕ್ಕರ್ ಕೊಡಲು ಹೊಸ ಪೋಸ್ಟರ್ ಗೆ ಸಿದ್ಧತೆ ನಡೆಸಿದೆ.

Congress, BJP poster campaign, JDS set to give counter to both the parties