ಬ್ರೇಕಿಂಗ್ ನ್ಯೂಸ್
30-09-22 01:17 pm HK News Desk ಕರ್ನಾಟಕ
ಚಾಮರಾಜನಗರ, ಸೆ.30: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಕರ್ನಾಟಕ ಪ್ರವೇಶ ಮಾಡಿದೆ. ಕೇರಳದಲ್ಲಿ 530 ಕಿಮೀ ಉದ್ದಕ್ಕೆ ಪಾದಯಾತ್ರೆ ಮುಗಿಸಿ ತಮಿಳುನಾಡು ಗಡಿಭಾಗ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಕ್ಕೇನಹಳ್ಳಿಯಲ್ಲಿ ಕರ್ನಾಟಕ ರಾಜ್ಯ ಪ್ರವೇಶಿಸಿದ್ದು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಿದ್ದಾರೆ.
ಗುಂಡ್ಲುಪೇಟೆ ಅಂಬೇಡ್ಕರ್ ಭವನದ ಮುಂಭಾಗದ ಮೈದಾನದಲ್ಲಿ ವೇದಿಕೆ ನಿರ್ಮಿಸಿ, ಕಾರ್ಯಕ್ರಮ ನಡೆಸಲಾಗಿದೆ. ವೇದಿಕೆ ಮುಂಭಾಗ ಸ್ಥಳೀಯ ಸೋಲಿಗ ಜನಾಂಗದ ಸಾಂಪ್ರದಾಯಿಕ ನೃತ್ಯದ ಮೂಲಕ ಸ್ವಾಗತ ಕೋರಲಾಯಿತು. ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಮುಖಂಡರಾದ ಜೈರಾಮ್ ರಮೇಶ್, ದಿನೇಶ್ ಗುಂಡೂರಾವ್, ಬಿ.ಕೆ.ಹರಿಪ್ರಸಾದ್, ಡಾ.ಜಿ.ಪರಮೇಶ್ವರ್, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಸಂಸದ ಡಿ.ಕೆ.ಸುರೇಶ್, ಆಂಜನೇಯ, ಪ್ರಿಯಾಂಕ್ ಖರ್ಗೆ ಸೇರಿದಂತೆ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದರು.
ರಾಜ್ಯದಲ್ಲಿ 21 ದಿನ, 510 ಕಿಮೀ ಪಾದಯಾತ್ರೆ
ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಹುಲ್ ಗಾಂಧಿ ಈಗಾಗಲೇ ಕೇರಳ, ತಮಿಳುನಾಡಿನಲ್ಲಿ ಪಾದಯಾತ್ರೆ ಮಾಡಿದ್ದಾರೆ. ಇವತ್ತು ಗುಂಡ್ಲುಪೇಟೆಯಿಂದ ಕರ್ನಾಟಕದಲ್ಲಿ ಪಾದಯಾತ್ರೆ ಮಾಡಲಿದ್ದಾರೆ. 8 ಜಿಲ್ಲೆಗಳಲ್ಲಿ 510 ಕಿ.ಮೀ. ಉದ್ದಕ್ಕೆ ರಾಜ್ಯದಲ್ಲಿ ಪಾದಯಾತ್ರೆ ನಡೆಯಲಿದೆ. ದೇಶದಲ್ಲಿ ಒಟ್ಟು 3570 ಕಿ.ಮೀ. ಪಾದಯಾತ್ರೆ ಮಾಡುತ್ತಾರೆ. ಸ್ವಾತಂತ್ರ್ಯಾ ನಂತ್ರ ಇಷ್ಟೊಂದು ದೂರದ ಪಾದಯಾತ್ರೆಯನ್ನ ಯಾವ ಪಕ್ಷ, ಯಾವುದೇ ನಾಯಕ ಮಾಡಿಲ್ಲ. ರಾಹುಲ್ ಗಾಂಧಿ ದೇಶದಲ್ಲಿ ಬಿಜೆಪಿಯ ಕೋಮುವಾದ ರಾಜಕಾರಣದಿಂದ ಬೇಸತ್ತಿದ್ದಾರೆ. ಮೋದಿ ಪ್ರಧಾನಿ ಆದಮೇಲೆ ದೇಶದಲ್ಲಿ ಧರ್ಮ, ಕೋಮು, ದ್ವೇಷದ ರಾಜಕಾರಣವನ್ನು ಮಾಡ್ತಿದ್ದಾರೆ. ರೈತರು, ಮಹಿಳೆಯರು ಆತಂಕದಿಂದ ಬದುಕುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಬಿಜೆಪಿ ಪ್ರಜಾಪ್ರಭುತ್ವ, ಸಂವಿಧಾನದ ಬಗ್ಗೆ ನಂಬಿಕೆ ಇಟ್ಟುಕೊಂಡಿಲ್ಲ. ಒಬ್ಬ ವ್ಯಕ್ತಿ ಒಬ್ಬನ ಐಡಿಯಾಲಜಿಯಲ್ಲಿ ನಂಬಿಕೆ ಇಟ್ಟುಕೊಂಡಿದ್ದಾರೆ. ಬೇರೆ ಸಂವಿಧಾನದ ತರುತ್ತೇವೆ, ಈ ಸಂವಿಧಾನದ ಬೇಡ ಎಂದು ಹೇಳುತ್ತಿದ್ದಾರೆ. ಇದೇನು ಮೇಲಿನವರಿಗೆ ಗೊತ್ತಿಲ್ಲ ಅನ್ನುವಂತಿಲ್ಲ ಎಂದರು ಸಿದ್ದರಾಮಯ್ಯ. ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ಮಾಡಲು ರಾಹುಲ್ ಗಾಂಧಿ ನೇತೃತ್ವ ವಹಿಸಿದ್ದಾರೆ. ಇದು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ. ನಮ್ಮ ಫ್ಲೆಕ್ಸ್ ಗಳನ್ನು ಹರಿದು, ಕಪ್ಪು ಮಸಿ ಬಳಿಯುತ್ತಿದ್ದಾರೆ. ನಾನು ಎಚ್ಚರಿಕೆ ಕೊಡ್ತೀನಿ, ಬಿಜೆಪಿ ನಾಯಕರನ್ನು ರಾಜ್ಯದಲ್ಲಿ ಎಲ್ಲಿಯೂ ತಿರುಗಾಡಲು ನಮ್ಮ ಕಾರ್ಯಕರ್ತರು ಬಿಡುವುದಿಲ್ಲ. ಆರು ತಿಂಗಳ ಬಳಿಕ ಮತ್ತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಎಲ್ಲಾ ಪೊಲೀಸ್ ನವರು ಕೆಟ್ಟವರಲ್ಲ. ಕೆಲವರು ಪೊಲೀಸರು ಶಾಮೀಲು ಆಗಿದ್ದಾರೆ. ಆದ್ರೆ ಅಂಥವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಕೋಮುವಾದ ತಡೆಯುವುದಷ್ಟೇ ಪಾದಯಾತ್ರೆ ಉದ್ದೇಶ
ರಾಹುಲ್ ಗಾಂಧಿ ಮಾತನಾಡಿ, ಈ ಯಾತ್ರೆ ಸಂವಿಧಾನದ ರಕ್ಷಣೆಗಾಗಿ. ಸಂವಿಧಾನ ಇಲ್ಲ ಅಂದ್ರೆ ನಮ್ಮ ತ್ರಿವರ್ಣ ಧ್ವಜ ಕೂಡ ಇರೋದಿಲ್ಲ. ದಿನವೂ ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ನಡೆಯುತ್ತಿದ್ದೇವೆ. ನಾನೊಬ್ಬನೇ ಪಾದಯಾತ್ರೆ ಮಾಡ್ತಿಲ್ಲ, ಲಕ್ಷಾಂತರ ಮಂದಿ ನಡೆಯುತ್ತಿದ್ದಾರೆ. ಈ ಯಾತ್ರೆಯಲ್ಲಿ ದ್ಷೇಷ ,ಹಿಂಸೆ ಎಲ್ಲೂ ಕಾಣುತ್ತಿಲ್ಲ. ಪಾದಯಾತ್ರೆಯಲ್ಲಿ ಕೆಳಗಡೆ ಬಿದ್ದವರನ್ನ ಮೇಲೆತ್ತಿ ಕರೆ ತರುತ್ತಿದ್ದೇವೆ. ಎಲ್ಲಾ ,ಜಾತಿ, ಭಾಷೆಯವರು ಭಾಗವಹಿಸುತ್ತಿದ್ದಾರೆ. ಈ ಪಾದಯಾತ್ರೆಯನ್ನ ಯಾರು ಕೂಡ ನಿಲ್ಲಿಸಲು ಸಾಧ್ಯವಿಲ್ಲ. ಪಾದಯಾತ್ರೆ ಮೂಲ ಉದ್ದೇಶ ದೇಶದಲ್ಲಿ ಆರ್ ಎಸ್ ಎಸ್, ಬಿಜೆಪಿ ಕೋಮುವಾದ ಬಿತ್ತರಿಸುವುದನ್ನ ತಡೆಯೋದು ಅಷ್ಟೇ. ಪಾದಯಾತ್ರೆಯಲ್ಲಿ ಬೆಲೆ ಏರಿಕೆ, ನಿರುದ್ಯೋಗ, ರೈತರ ದಬ್ಬಾಳಿಕೆ, ಸಾರ್ವಜನಿಕ ಉದ್ಯಮಗಳನ್ನು ಖಾಸಗಿಯವರಿಗೆ ಮಾರುತ್ತಿರೋದನ್ನ ಯಾತ್ರೆಯ ಉದ್ದಕ್ಕೂ ಹೇಳುತ್ತಿದ್ದಾರೆ. ಜನರ ಮಾತನ್ನು ಕೇಳುವುದಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದೇವೆ ಎಂದರು.
Congress leader Rahul Gandhi said on Friday that the corruption in the state BJP government will be among the key issues discussed during the Karnataka leg of his Bharat Jodo Yatra. Speaking at the launch of the Karnataka leg of the foot march at the border town of Gundlupet in Karnataka’s Chamarajanagar district, Rahul said the yatra was the “voice of the nation” and that “entire India was sharing its pain with the yatra”. People were sharing concerns about unemployment, inflation, harassment of farmers, privatisation of PSUs etc, Rahul added.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm