ಪಿಎಫ್ಐ ಬ್ಯಾನ್ ಚುನಾವಣೆ ಗಿಮಿಕ್ ಅಷ್ಟೇ, ಸಮಾಜದಲ್ಲಿ ಒಡಕು ಮೂಡಿಸುವ ಕೆಲಸ ; ಪ್ರಜ್ವಲ್ ರೇವಣ್ಣ ಟೀಕೆ 

30-09-22 08:57 pm       HK News Desk   ಕರ್ನಾಟಕ

ಪಿಎಫ್ ಐ ರೀತಿಯ ಸಂಘಟನೆಗಳು ಬಹಳಷ್ಟು ಇವೆ. ಪಿಎಫ್ ಐ ಒಂದೇ ಅಲ್ಲ, ಎಸ್ ಡಿ ಪಿಐ ಒಂದೇ ಅಲ್ಲ, ಆರೆಸ್ಸೆಸ್ ಒಂದೇ ಅಲ್ಲ, ಬಜರಂಗದಳ ಒಂದೇ ಅಲ್ಲ. ಬ್ಯಾನ್ ಮಾಡೋದಾದೇ ಎಲ್ಲವನ್ನು ಟೋಟಲಿ ಬ್ಯಾನ್ ಮಾಡಿ.

ಹಾಸನ, ಸೆ.30 : ಪಿಎಫ್ ಐ ರೀತಿಯ ಸಂಘಟನೆಗಳು ಬಹಳಷ್ಟು ಇವೆ. ಪಿಎಫ್ ಐ ಒಂದೇ ಅಲ್ಲ, ಎಸ್ ಡಿ ಪಿಐ ಒಂದೇ ಅಲ್ಲ, ಆರೆಸ್ಸೆಸ್ ಒಂದೇ ಅಲ್ಲ, ಬಜರಂಗದಳ ಒಂದೇ ಅಲ್ಲ. ಬ್ಯಾನ್ ಮಾಡೋದಾದೇ ಎಲ್ಲವನ್ನು ಟೋಟಲಿ ಬ್ಯಾನ್ ಮಾಡಿ. ಇಲ್ಲವಾದರೆ ಅವರ ನಂಬಿಕೆ, ಅವರ ಮನಸ್ಸಿನಲ್ಲಿ ಏನಿರುತ್ತೆ ಅದನ್ನ ಮಾಡೋಕೆ ಸ್ವಾತಂತ್ರ್ಯ ಕೊಡಿ. ಒಂದೆರಡು ಬ್ಯಾನ್ ಮಾಡೋದು ಇನ್ನು ಕೆಲವು ಹಾಗೆ ಬಿಡೋದು ಸಮಾಜದಲ್ಲಿ ಗೊಂದಲ ಸೃಷ್ಟಿಗೆ ಕಾರಣವಾಗುತ್ತೆ. ಮತ್ತೆ ನೀವೇ ಬೆಂಕಿ ಹಚ್ಚುವ ಕೆಲಸ ಮಾಡಿದಂತೆ ಆಗುತ್ತೆ ಎಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ. ‌

ಬರೇ ಪಿಎಫ್ಐ, ಎಸ್ ಡಿ ಪಿಐ ಬ್ಯಾನ್ ಮಾಡಿದ್ರೆ ಅವರು ಸುಮ್ಮನೆ ಇರ್ತಾರಾ, ಬೇರೆಯವರನ್ನು ಬ್ಯಾನ್ ಮಾಡಿ ಅಂತಾರೆ. ಹಾಗಾಗಿ ಸರ್ಕಾರ ಈ ಬಗ್ಗೆ ಸರಿಯಾದ ನಿರ್ಧಾರ ಮಾಡಬೇಕು. ಬ್ಯಾನ್ ಗೂ ಮೊದಲು ಸರ್ವಪಕ್ಷ ಸಭೆ ಮಾಡಬೇಕಿತ್ತು. ಎಲ್ಲ ಹಿರಿಯರ ಮುಂದೆ ಇಂತಿಂಥ ಸಮಸ್ಯೆ ಇದೆ ಎಂದು ಹೇಳಬೇಕಿತ್ತು. ಅವರಿಂದ ಆಗಿರೋ ತಪ್ಪು ಏನೆಂದು ಹೇಳಬೇಕಿತ್ತು. ಕೆಲವು ಸಚಿವರು ಶಾಸಕರು ಹೇಳ್ತಾರೆ, ಭಯೋತ್ಪಾದನಾ ಕೃತ್ಯಕ್ಕೆ ಬೆಂಬಲ ನೀಡುತ್ತಿದ್ದರು ಅಂತ. ಅದಕ್ಕೆ ದಾಖಲೆ ಎಲ್ಲಿದೆ. ಸೂಕ್ತ ದಾಖಲೆ ಜನರ ಮುಂದಿಟ್ಟು ಯಾರನ್ನಾದರೂ ಬ್ಯಾನ್ ಮಾಡಿ, ಬೇಡ ಅನ್ನಲ್ಲ. ನಾಳೆ ಆರ್ ಎಸ್ ಎಸ್ ಬ್ಯಾನ್ ಮಾಡ್ತೀರೊ, ಪಿಎಫ್ಐ ಬ್ಯಾನ್ ಮಾಡ್ತೀರೊ, ಎಸ್ ಡಿ ಪಿಐ ಬ್ಯಾನ್ ಮಾಡ್ತೀರೊ ಅದು ಸರ್ಕಾರದ ನಿರ್ಧಾರ. ಆದರೆ ಜನ ಕೇಳ್ತಿದ್ದಾರೆ, ಬ್ಯಾನ್ ಮಾಡಲು ಕಾರಣ ಏನು ಹೇಳಿಯಂತ. ಬ್ಯಾನ್ ಮಾಡಲು ನೈಜ ಕಾರಣ ಏನು ಹೇಳಿ. 

SDPI terms ban on PFI 'direct blow to democracy' – Mysuru Today

ನಾನು ತಪ್ಪು ಮಾಡಿದ್ದರೆ ಶಿಕ್ಷೆ ಆಗಬೇಕು ಅಲ್ಲವೇ, ತಪ್ಪೇ ಮಾಡದೆ ಶಿಕ್ಷೆ ಆದರೆ ಹೇಗೆ. ಹಾಗಾಗಿ ಸೂಕ್ತ ದಾಖಲೆ ನೀಡಿ ಜನರಿಗೆ ಅರ್ಥ ಮಾಡಿಸಿ. ಸರ್ವ ಪಕ್ಷಗಳ ಸಭೆ ಮುಂದೆ ಎಲ್ಲವನ್ನೂ ಹೇಳಿ. ನನಗನಿಸುತ್ತೆ ಖಂಡಿತ ಇದು ದುಡುಕಿನ ನಿರ್ಧಾರ, ಮಾತ್ರವಲ್ಲ ರಾಜಕೀಯ ಲಾಭಕ್ಕಾಗಿ ಮಾಡಿರೋ ನಿರ್ಧಾರ ಅಂತ. ಚುನಾವಣೆ ಹತ್ತಿರ ಬರುತ್ತಿರುವುದಕ್ಕೆ ಮಾಡಿರುವ ನಿರ್ಧಾರ ಎಂದು ಟೀಕೆ ಮಾಡಿದ್ದಾರೆ. ಇವರು ಬ್ಯಾನ್ ಮಾಡೋದೇ ಆಗಿದ್ದರೆ, ಪಿಎಫ್ ಐ, ಎಸ್ ಡಿ ಪಿಐ ನಿನ್ನೆ ಮೊನ್ನೆ ಹುಟ್ಟಿಕೊಂಡಿದೆಯಾ? ಹಲವು ವರ್ಷಗಳಿಂದ ಇದೆ ಅಲ್ಲವಾ. ಇವರು ಮೂರು ವರ್ಷಗಳ ಹಿಂದೆಯೇ ಬ್ಯಾನ್ ಮಾಡಬಹುದಿತ್ತಲ್ಲವೇ ? ಇದು ಚುನಾವಣೆ ಗಿಮಿಕ್ ಅಷ್ಟೇ, ಚುನಾವಣೆಗಾಗಿ ಟ್ರಿಕ್ಸ್ ಮಾಡುತ್ತಿದ್ದಾರೆ. ಇದು ಶಾಶ್ವತ ಅಲ್ಲ, ಹೀಗೆ ಮಾಡಿದ್ರೆ ನಾವೇ ಸಮಾಜದಲ್ಲಿ ಒಡಕು ಮೂಡಿಸಿದಂತೆ ಆಗುತ್ತೆ. ಈಗಾಗಲೇ ಸಮಾಜದಲ್ಲಿ ಒಡಕು ಮೂಡಿದೆ. ಎಲ್ಲ ಸಮಾಜವನ್ನು ಒಟ್ಟುಗೂಡಿಸಿ ದೇಶವನ್ನು ಬೆಳೆಸಬೇಕು. ಈ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲನೆ ಮಾಡಲಿ. ಎಲ್ಲಾ ಸಿಎಂಗಳು ತಮ್ಮ ರಾಜ್ಯದಿಂದ ಕೇಂದ್ರಕ್ಕೆ ಮನವಿ ಮಾಡಲಿ. ಸದನದಲ್ಲಿ ನಾನು ಕೂಡ ಈ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ. ‌

Prajwal Revanna slams BJP, says PFI ban is just a political game of party.