ಬ್ರೇಕಿಂಗ್ ನ್ಯೂಸ್
01-10-22 01:59 pm Bangalore Correspondent ಕರ್ನಾಟಕ
ಬೆಂಗಳೂರು, ಅ.1: ದಸರಾ ಹಿನ್ನೆಲೆಯಲ್ಲಿ ಅ.1ರಿಂದ 5 ದಿನಗಳ ರಜೆ ಇರುವುದರಿಂದ ರಾಜಧಾನಿ ಬೆಂಗಳೂರಿನಿಂದ ರಾಜ್ಯದ ಇತರೇ ಉಪ ನಗರಗಳಿಗೆ ತೆರಳುವ ಖಾಸಗಿ ಬಸ್ಸುಗಳ ದರವನ್ನು ದಿಢೀರ್ ಹೆಚ್ಚಳ ಮಾಡಲಾಗಿದೆ. ರಜೆಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಕೆಲಸದಲ್ಲಿರುವ ಮಂದಿ ಊರಿಗೆ ತೆರಳುವುದರಿಂದ ಜನಸಾಮಾನ್ಯರನ್ನು ದರೋಡೆ ಮಾಡಲು ಖಾಸಗಿ ಬಸ್ ಮಾಲಕರು ಮುಂದಾಗಿದ್ದಾರೆ.
ಬೆಂಗಳೂರಿನಿಂದ ಮಂಗಳೂರು, ಕುಂದಾಪುರ, ಬೆಳಗಾವಿ, ಶಿವಮೊಗ್ಗ, ಹುಬ್ಬಳ್ಳಿ ಹೀಗೆ ರಾಜ್ಯದ ಹಲವೆಡೆ ತೆರಳುವ ಖಾಸಗಿ ಬಸ್ಸುಗಳ ದರವನ್ನು ಒಂದೇ ಬಾರಿಗೆ ಡಬಲ್ ಮಾಡಲಾಗಿದೆ. ಖಾಸಗಿ ಬಸ್ಸುಗಳ ಟಿಕೆಟ್ ಬುಕ್ಕಿಂಗ್ ಏಪ್ ಗಳಲ್ಲಿ ಅ.1ರಿಂದ 5ರ ವರೆಗಿನ ಬಸ್ ದರವನ್ನು ಎರಡು ಪಟ್ಟು, ಮೂರು ಪಟ್ಟು ಏರಿಸಿದ್ದು ಕಂಡುಬಂದಿದೆ.
ಸಾಮಾನ್ಯ ದಿನಗಳಲ್ಲಿ ಬೆಂಗಳೂರು- ಉಡುಪಿ ದರವು 700-750 ಇದ್ದರೆ, ಈ ದಿನಗಳಲ್ಲಿ ಅದನ್ನು 1400-1500 ರೂಪಾಯಿಗೆ ಏರಿಕೆ ಮಾಡಲಾಗಿದೆ. ಬೆಳಗಾವಿಗೆ ಇತರೇ ದಿನಗಳಲ್ಲಿ 800-900 ರೂ. ಇದ್ದರೆ, ಈಗ ಅದನ್ನು 1100ರಿಂದ 1500 ರೂ.ಗೆ ಏರಿಸಲಾಗಿದೆ. ಹುಬ್ಬಳ್ಳಿ ಬಸ್ ಗಳ ದರವೂ ಇದೇ ರೀತಿಯಾಗಿದ್ದು, ಸಾಮಾನ್ಯ ದಿನಗಳಲ್ಲಿ 800 ರೂ. ಇದ್ದುದ್ದನ್ನು 1200ರಿಂದ 1500ಕ್ಕೆ ಏರಿಸಲಾಗಿದೆ. ಕಲಬುರ್ಗಿಯ ಬಸ್ ದರವನ್ನೂ 900 ರೂ. ಇದ್ದುದನ್ನು 1500 ಮಾಡಲಾಗಿದೆ.
ಟಿಕೆಟ್ ದರವನ್ನು ದುಪ್ಪಟ್ಟು ಮಾಡಿದ್ದರೂ, ಹೆಚ್ಚಿನ ಟ್ರಾವೆಲ್ ಬಸ್ ಗಳಲ್ಲಿ ಟಿಕೆಟ್ ಭರ್ತಿಯಾಗಿವೆ. ಹೀಗಾಗಿ ಈ ದಿನಗಳಲ್ಲಿ ಹೆಚ್ಚುವರಿಯಾಗಿ ಬಸ್ ಓಡಿಸಲು ಬಸ್ ಮಾಲೀಕರು ಮುಂದಾಗಿದ್ದಾರೆ. ಹಬ್ಬದ ಸೀಸನ್ ಸಂದರ್ಭದಲ್ಲಿ ಪ್ರತಿ ಬಾರಿಯೂ ಖಾಸಗಿ ಮತ್ತು ಸರಕಾರಿ ಬಸ್ ಗಳ ದರವನ್ನು ಏರಿಸುವುದು ಮಾಮೂಲಿ ಆಗಿದೆ. ಆದರೆ ಈ ರೀತಿ ಜನರನ್ನು ಸುಲಿಯುವುದಕ್ಕೆ ಭಾರೀ ವಿರೋಧ ಬಂದಿದ್ದು ಸಾರಿಗೆ ಸಚಿವ ಶ್ರೀರಾಮುಲು ಖಾಸಗಿ ಬಸ್ ಗಳ ವಿರುದ್ಧ ದೂರು ನೀಡುವಂತೆ ಹೇಳಿದ್ದಾರೆ. ಸಾರಿಗೆ ಇಲಾಖೆಯಿಂದ ದೂರು ಪಡೆಯುವುದಕ್ಕಾಗಿಯೇ ಹೆಲ್ಪ್ ಲೈನ್ ನಂಬರ್ ಗಳನ್ನು ಕೊಡಲಾಗಿದ್ದು, 9449863249, 9449863426 ನಂಬರಿಗೆ ಕರೆ ಮಾಡಿ ದೂರು ನೀಡುವಂತೆ ಸಾರ್ವಜನಿಕರಲ್ಲಿ ಕೋರಿದೆ.
Private Bus fares zoom for festival season, public can lodge complaint if they are found looting.
14-08-25 03:51 pm
Bangalore Correspondent
DK Shivakumar, Dharmasthala, Virendra Heggade...
14-08-25 03:49 pm
IPS Alok Kumar, News: ಪೊಲೀಸ್ ಶಾಲೆಗಳಲ್ಲೇ ಲಂಚ,...
14-08-25 01:48 pm
Dharmasthala Case, Dinesh Gundu Rao: ಮತ್ತೆ ಗು...
13-08-25 07:03 pm
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
14-08-25 11:26 am
HK News Desk
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
'ದೇಶ ಸುರಕ್ಷಿತ ಕೈಯಲ್ಲಿದೆ' ; ನರೇಂದ್ರ ಮೋದಿ ಸರ್ಕ...
12-08-25 02:49 pm
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
14-08-25 01:12 pm
Mangaluru Staff
Bantwal Deputy Tahsildar, Lokayukta: 20 ಸಾವಿರ...
13-08-25 10:22 pm
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
ಹಠಾತ್ ಕುಸಿದು ಬಿದ್ದು ಕಾಲೇಜು ಬಸ್ ನಿರ್ವಾಹಕ ಸಾವು...
13-08-25 01:49 pm
14-08-25 11:51 am
HK Staff
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm