ಸೋನಿಯಾ ಕಾಲದಲ್ಲಿ ತುಷ್ಟೀಕರಣ ಪರಾಕಾಷ್ಠೆಗೆ ; ಪಿಎಫ್ಐ ವಿರೋಧ ಮಾಡಕ್ಕೂ ಆಗದೆ ಆರೆಸ್ಸೆಸ್ ಬಗ್ಗೆ ದೂರುತ್ತಾರೆ ! 

01-10-22 07:54 pm       HK News Desk   ಕರ್ನಾಟಕ

ಪಿಎಫ್ಐ ಮತ್ತು ಆರ್​ಎಸ್​ಎಸ್ ಒಂದೇ ನಾಣ್ಯದ ಎರಡು ಮುಖ ಎನ್ನುವ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹರಿಹಾಯ್ದಿದ್ದಾರೆ. ನೆಹರು ಕಾಲದಿಂದಲೂ ಕಾಂಗ್ರೆಸ್‌ಗೆ ತುಷ್ಟೀಕರಣ ರಾಜಕಾರಣ ರೂಢಿಯಾಗಿದೆ.

ಧಾರವಾಡ, ಅ.1 : ಪಿಎಫ್ಐ ಮತ್ತು ಆರ್​ಎಸ್​ಎಸ್ ಒಂದೇ ನಾಣ್ಯದ ಎರಡು ಮುಖ ಎನ್ನುವ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹರಿಹಾಯ್ದಿದ್ದಾರೆ. ನೆಹರು ಕಾಲದಿಂದಲೂ ಕಾಂಗ್ರೆಸ್‌ಗೆ ತುಷ್ಟೀಕರಣ ರಾಜಕಾರಣ ರೂಢಿಯಾಗಿದೆ. ಇಂದಿರಾ ಗಾಂಧಿ ಕಾಲದಲ್ಲಿ ಪರಾಕಾಷ್ಠೆಗೆ ತಲುಪಿದ್ದ ತುಷ್ಟೀಕರಣ ಸೋನಿಯಾ ಕಾಲದಲ್ಲಿ ಆಕಾಶ ದಾಟಿ ಮೇಲಕ್ಕೆ ಹೋಗಿದೆ. ಅದಕ್ಕಾಗಿ ಪಿಎಫ್ಐ ನಿಷೇಧವನ್ನು ವಿರೋಧ ಮಾಡಲಿಕ್ಕೂ ಆಗುತ್ತಿಲ್ಲ. ಹಾಗಾಗಿ ಆರೆಸ್ಸೆಸ್ ಹೆಸರು ತೆಗೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. 

ರಾಹುಲ್ ಗಾಂಧಿಯ ಅಮ್ಮನ ಸರ್ಕಾರದಲ್ಲಿ ಅಂದ್ರೆ ಮನಮೋಹನ್ ಸಿಂಗ್ ಸರ್ಕಾರದಲ್ಲಿ, ನಿಮ್ಮ ತಂದೆ ಸರ್ಕಾರದಲ್ಲಿ ಮತ್ತು ನೆಹರು ಸರ್ಕಾರದಲ್ಲಿ ಆರೆಸ್ಸೆಸ್ ಅನ್ನು ಏನಾದರೂ ಮಾಡಿ ತುಳಿಯಬೇಕು ಎಂದು ನೋಡಿದ್ದರು. ಆದರೆ ಅದರಲ್ಲಿ ವಿಫಲರಾಗಿದ್ದರು. ನಾವೆಲ್ಲ ಆರೆಸ್ಸೆಸ್ ನವರು ಇಂದು ದೇಶದ ಪ್ರಮುಖ ಹುದ್ದೆಯಲ್ಲಿದ್ದೇವೆ. ಕಾಂಗ್ರೆಸ್ ತುಷ್ಟೀಕರಣ ಮಾಡಿದ್ದರಿಂದ ಇವತ್ತು ವಿರೋಧ ಪಕ್ಷದಲ್ಲಿ ಕೂರಲು ಸ್ಥಿತಿಯಲ್ಲಿಲ್ಲ, ಯುಪಿಯಲ್ಲಿ ನಿಮಗೆ ಜೀರೋ ಸೀಟ್ ಬಂದಿವೆ. ಉತ್ತರಾಖಂಡದಲ್ಲಿ ನಿಮ್ಮ ಪಾರ್ಟಿ ಎಲ್ಲಿದೆ ಎಂದು ಹುಡುಕುವ ಸ್ಥಿತಿಗೆ ಬಂದಿದೆ.

RSS plans to present 'grand narrative' of India to counter misunderstanding  attempts; to expand base | India News – India TV

ಈಶಾನ್ಯದಲ್ಲಿ ನಿಮ್ಮ ಒಬ್ಬರೂ ಸಂಸದರು ಇಲ್ಲ. ಈ ಸ್ಥಿತಿಗೆ ತಲುಪಿದ ಮೇಲೂ ತುಷ್ಟೀಕರಣ ಬಿಟ್ಟಿಲ್ಲ. ಈಗ 40-50 ಜನ ಸಂಸದರಿದ್ದೀರಿ. ರಾಜ್ಯಸಭೆಯಲ್ಲಿ 30ಕ್ಕೆ ಇಳಿದ್ಧಿದ್ದೀರಿ. ದೇಶದ ಎರಡು ರಾಜ್ಯದಲ್ಲಿ ಬಿಟ್ಟರೆ ಎಲ್ಲೂ ಇಲ್ಲ. ಈ ಬಾರಿ ಆ ಎರಡು ರಾಜ್ಯವನ್ನು ಕೂಡ ಕಳೆದುಕೊಳ್ಳುತ್ತೀರಿ. ರಾಹುಲ್ ಗಾಂಧಿ ಯಾತ್ರೆಯಿಂದಾಗಿ ರಾಜಸ್ಥಾನ ಕಳೆದುಕೊಳ್ಳುವ ಸ್ಥಿತಿಗೆ ಬಂದಿದೆ. ಸ್ವಲ್ಪ ವಿವೇಚನೆ ಉಪಯೋಗ ಮಾಡಿಕೊಂಡರೆ ದೇವರು ಒಳ್ಳೆಯದು ಮಾಡುತ್ತಾನೆ. ಕಾಂಗ್ರೆಸ್ ಪಕ್ಷ ಸಂಪೂರ್ಣ ಸಾಯಬಾರದು ಎನ್ನುವ ಅಪೇಕ್ಷೆ ನಮಗೂ ಇದೆ ಎಂದು ವ್ಯಂಗ್ಯವಾಡಿದರು.

Rahul Gandhi officially resigns as Congress President; says 'thank you' in  open letter - BusinessToday

ರಾಹುಲ್ ಗಾಂಧಿ ಯಾತ್ರೆಯಿಂದ ಬಿಜೆಪಿಗೆ ನಡುಕ ಹುಟ್ಟಿದೆ ಎಂಬ ಪ್ರಿಯಾಂಕ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಖರ್ಗೆ ಹಾಗೂ ಕಾಂಗ್ರೆಸ್ ಮುಖಂಡರಿಗೆ ಕೈಮುಗಿದು ಕೇಳುತ್ತೇನೆ. ಎಲ್ಲೆಲ್ಲಿ ಚುನಾವಣೆ ಬರ್ತವೆ, ಅಲ್ಲಿಗೆಲ್ಲ ರಾಹುಲ್ ಗಾಂಧಿ ಅವರನ್ನು ಕಳುಹಿಸಿಕೊಡಿ. ಯಾಕೆಂದರೆ ಅವರು ಎಲ್ಲೆಲ್ಲಿ ಬರುತ್ತಾರೋ ಅಲ್ಲಿ ಕಾಂಗ್ರೆಸ್​ ಸೋಲುತ್ತೆ. ರಾಹುಲ್ ಗಾಂಧಿ ಎಷ್ಟು ಓಡಾಡುತ್ತಾರೋ ಅಷ್ಟು ಬಿಜೆಪಿಗೆ ಲಾಭ ಎಂದರು.

G-23 preparing to fight Congress president polls, likely to field Shashi  Tharoor | Deccan Herald

ಖರ್ಗೆ ಎಐಸಿಸಿ ಅಧ್ಯಕ್ಷರಾಗುತ್ತಾರೆ ಎಂಬ ಪ್ರಶ್ನೆಗೆ, ಮನಮೋಹನ ಸಿಂಗ್ ಪ್ರಧಾನಿ ಆದಾಗ ಏನಾದ್ರು ಬದಲಾವಣೆ ಆಯ್ತಾ? ರಿಮೋಟ್ ಕಂಟ್ರೋಲ್ ಅಧ್ಯಕ್ಷರು, ರಿಮೋಟ್ ಕಂಟ್ರೋಲ್ ಪ್ರಧಾನಿ. ಅವರು ಏನು ಮಾಡಬೇಕಾದರು ಮನೆಯಿಂದ ಒಂದು ಹೆಜ್ಜೆ ಹೊರಗಿಡಬೇಕಂದೆರೂ ಗಾಂಧಿ ಕುಟುಂಬವನ್ನು ಕೇಳಿ ಮಾಡಬೇಕು. ಅದನ್ನು ಶಶಿ ತರೂರ್​ ​ಅವರೇ ಹೇಳಿದ್ದಾರೆ. ಶಶಿ ತರೂರ್ ಖರ್ಗೆ ಅವರಿಗೆ ರಾಹುಲ್ ಮತ್ತು ಸೋನಿಯಾ ಪ್ರಾಯೋಜಿತ ಅಭ್ಯರ್ಥಿ ಎಂದು ಹೇಳಿದ್ದಾರೆ. ಇನ್ನೇನು ಬೇಕು ಎಂದರು.

Congress which can't even talk about PFI talks about RSS slams Pralhad Joshi in Dharwad.