ಭಾರತ್ ಜೋಡೊ ಅಖಾಡಕ್ಕೆ ಸೋನಿಯಾ ; ಮಡಿಕೇರಿ ಬದಲು ಕಬಿನಿಯಲ್ಲಿ ವಾಸ್ತವ್ಯ, 4-5ರಂದು ಪಾದಯಾತ್ರೆ ರದ್ದು, ರೆಸಾರ್ಟಿನಲ್ಲಿಯೇ ಮಹತ್ವದ ಸಭೆ 

03-10-22 09:13 pm       HK News Desk   ಕರ್ನಾಟಕ

ಸಂಸದ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೊ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ಸೋನಿಯಾ ಗಾಂಧಿ ಮೈಸೂರಿಗೆ ಆಗಮಿಸಿದ್ದು, ಕಬಿನಿಯ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ.

ಮೈಸೂರು, ಅ.3: ಸಂಸದ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೊ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ಸೋನಿಯಾ ಗಾಂಧಿ ಮೈಸೂರಿಗೆ ಆಗಮಿಸಿದ್ದು, ಕಬಿನಿಯ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ.

ಮೈಸೂರಿನ ಮಂಡಕಳ್ಳಿ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿದ ಸೋನಿಯಾ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬರಮಾಡಿಕೊಂಡರು. ಮೈಸೂರಿಗೆ ಆಗಮಿಸಿದ ಬಳಿಕ ಮಡಿಕೇರಿಗೆ ತೆರಳಿ ಅಲ್ಲಿ ಸೋನಿಯಾ ಗಾಂಧಿ ವಾಸ್ತವ್ಯ ಹೂಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಕೊನೆಕ್ಷಣದಲ್ಲಿ ಮಡಿಕೇರಿ ವಾಸ್ತವ್ಯ ನಿರ್ಧಾರವನ್ನು ಬದಲಾವಣೆ ಮಾಡಿದ್ದಾರೆ.

Karnataka Hindutva protesters throw eggs at Siddaramaiah's car after  Savarkar photo row | Cities News,The Indian Express

ಮಡಿಕೇರಿಯಲ್ಲಿ ಇತ್ತೀಚೆಗೆ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ, ಗಲಾಟೆ ನಡೆದಿದ್ದ ಕಾರಣ ಭದ್ರತಾ ದೃಷ್ಟಿಯಿಂದ ಸೋನಿಯಾ ವಾಸ್ತವ್ಯವನ್ನು ಮಡಿಕೇರಿ ಬದಲು ಕಬಿನಿಗೆ ವರ್ಗಾಯಿಸಿದ್ದಾರೆ ಎನ್ನಲಾಗುತ್ತಿದೆ. ಕಬಿನಿಯ ರೆಸಾರ್ಟಿನಲ್ಲಿ ಸೋನಿಯಾ ಅವರು ಇನ್ನೆರಡು ದಿನ ವಾಸ್ತವ್ಯ ಹೂಡಲಿದ್ದು, ಅಲ್ಲಿಯೇ ಕಾಂಗ್ರೆಸ್ ಪ್ರಮುಖರ ಜೊತೆಗೆ ಮಾತುಕತೆ ನಡೆಸಲಿದ್ದಾರೆ.

Sonia Gandhi to visit Karnataka today, to participate in 'Bharat Jodo Yatra'  on October 6

Bharat Jodo enters day 4 in Karnataka; Sonia, Priyanka likely to join Rahul  Gandhi

ದಸರಾ ಹಬ್ಬದ ನಿಮಿತ್ತ ಅ.4 ಮತ್ತು 5ರಂದು ಭಾರತ್ ಜೋಡೊ ಯಾತ್ರೆ ಇರುವುದಿಲ್ಲ. ಎರಡು ದಿನಗಳ ಯಾತ್ರೆಯನ್ನು ರದ್ದುಪಡಿಸಲಿದ್ದು, 6ರಂದು ಮತ್ತೆ ಯಾತ್ರೆ ಮಂಡ್ಯದ ಪಾಂಡವಪುರದಿಂದ ಶುರುವಾಗಲಿದೆ. ಸೋಮವಾರ ಶ್ರೀರಂಗಪಟ್ಟಣ ದಾಟಿ ಮಂಡ್ಯಕ್ಕೆ ಪಾದಯಾತ್ರೆ ತಲುಪಿತ್ತು. 6ರಂದು ಸೋನಿಯಾ ಗಾಂಧಿ, ರಾಹುಲ್ ಜೊತೆಗೆ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಎರಡು ದಿನಗಳ ವಿಶ್ರಾಂತಿ ಸಂದರ್ಭದಲ್ಲಿ ರಾಹುಲ್, ಸೋನಿಯಾ ಮತ್ತು ರಾಜ್ಯದ ಕಾಂಗ್ರೆಸ್ ನಾಯಕರು ಕಬಿನಿ ರೆಸಾರ್ಟಿನಲ್ಲಿ ಮಹತ್ವದ ಮಾತುಕತೆ, ಸಭೆಯನ್ನು ನಡೆಸಲಿದ್ದಾರೆ. ಇದರಲ್ಲಿ ಪಕ್ಷದ ಕೇಂದ್ರ ಮಟ್ಟದ ನಾಯಕರು ಕೂಡ ಪಾಲ್ಗೊಳ್ಳಲಿದ್ದಾರೆ.

All India Congress Committee (AICC) leader Sonia Gandhi arrived in Mysuru airport on Monday. She is scheduled to join the Bharat Jodo Yatra led by Congress leader Rahul Gandhi on October 6, said sources in the Congress.