ಪರೇಶ್ ಮೇಸ್ತನದ್ದು ಕೊಲೆಯಲ್ಲ, ಆಕಸ್ಮಿಕ ಸಾವು ; ಸಿಬಿಐ ತಂಡದಿಂದ ಕೋರ್ಟಿಗೆ ವರದಿ ಸಲ್ಲಿಕೆ, ಬಿಜೆಪಿ ನಾಯಕರಿಗೆ ಮುಖಭಂಗ ! 

03-10-22 10:57 pm       HK News Desk   ಕರ್ನಾಟಕ

ಹೊನ್ನಾವರ ಪರೇಶ್ ಮೇಸ್ತಾ ಹತ್ಯೆ ಪ್ರಕರಣದಲ್ಲಿ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದು ಪರೇಶ್ ಮೇಸ್ತನದ್ದು ಹತ್ಯೆಯಲ್ಲ, ಆಕಸ್ಮಿಕ ಸಾವು ಎಂದು ವರದಿ ನೀಡಿದೆ. 

ಕಾರವಾರ, ಅ.3 : ಹೊನ್ನಾವರ ಪರೇಶ್ ಮೇಸ್ತಾ ಹತ್ಯೆ ಪ್ರಕರಣದಲ್ಲಿ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದು ಪರೇಶ್ ಮೇಸ್ತನದ್ದು ಹತ್ಯೆಯಲ್ಲ, ಆಕಸ್ಮಿಕ ಸಾವು ಎಂದು ವರದಿ ನೀಡಿದೆ. 

ಹೊನ್ನಾವರ ನ್ಯಾಯಾಲಯಕ್ಕೆ ಸಿಬಿಐ ತಂಡ ವರದಿ ಸಲ್ಲಿಸಿದ್ದು ವರದಿ ಪರಿಶೀಲಿಸಿದ ಹೊನ್ನಾವರ ನ್ಯಾಯಾಲಯ ನವಂಬರ್ 16ಕ್ಕೆ ತೀರ್ಪು ಮುಂದೂಡಿದೆ. 2017ರ ಡಿಸೆಂಬರ್ 6ರಂದು ಹೊನ್ನಾವರದಲ್ಲಿ ನಡೆದ ಗಲಭೆಯಲ್ಲಿ ಮೀನುಗಾರ ಯುವಕ ಪರೇಶ್ ಮೇಸ್ತಾ ಕಾಣೆಯಾಗಿದ್ದ. ಎರಡು ದಿನಗಳ ನಂತರ ಡಿಸೆಂಬರ್ 8ರಂದು ಹೊನ್ನಾವರ ನಗರದ  ಶನಿ ದೇವಸ್ಥಾನದ ಹಿಂಭಾಗದ ಶೆಟ್ಟಿ ಕೆರೆಯಲ್ಲಿ ಪರೇಶ್ ಮೇಸ್ತನ ಶವವಾಗಿ ಪತ್ತೆಯಾಗಿತ್ತು.‌ ಆತನನ್ನು ಅನ್ಯ ಕೋಮಿನವರು ಹತ್ಯೆ ಮಾಡಿದ್ದಾರೆಂದು ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ನಾಯಕರು ಆರೋಪಿಸಿದ್ದರು.

CBI vs CBI: Everything you need to know about the battle within India's top  investigation agency

BJP attacks Siddaramaiah for 'visiting temple after eating meat' |  Bengaluru - Hindustan Times

ಈತನನ್ನು ಹಿಂದು ಸಂಘಟನೆಗಳು ಹಿಂದು ಕಾರ್ಯಕರ್ತ ಎಂದು ಬಿಂಬಿಸಿದ್ದರಿಂದ ಕೋಮು ಸಂಘರ್ಷಕ್ಕೂ ಕಾರಣವಾಗಿತ್ತು. ಇದೇ ವಿಚಾರದಲ್ಲಿ ಹೊನ್ನಾವರದಲ್ಲಿ ಭಾರೀ ಗಲಾಟೆಯೂ ನಡೆದಿತ್ತು. ಅಂದಿನ ಸಿದ್ದರಾಮಯ್ಯ ಸರ್ಕಾರ ಒತ್ತಡಕ್ಕೆ ಬಿದ್ದು ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಐದು ಜನರನ್ನು ಪೊಲೀಸರು ಪ್ರಕರಣದಲ್ಲಿ ಬಂಧಿಸಿದ್ದರು. ಬಳಿಕ ನಾಲ್ಕೂವರೆ ವರ್ಷದ ಕಾಲ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು ಕೂಲಂಕಷ ತನಿಖೆಯ ಬಳಿಕ ಕೋರ್ಟಿಗೆ ವರದಿ ಸಲ್ಲಿಸಿದ್ದಾರೆ.

Paresh Mesta death was not murder it was an accidental death says CBI report to court. Paresh Mesta, a resident of Tulasinagar in Honnavar taluk was murdered on December 6, 2017 in Honnavar. His body was found floating in Honnavar’s Shettikere lake on December 8, 2017.