ವಿಜಯದಶಮಿ ಬಳಿಕವೂ ಹತ್ತು ದಿನ ಮೈಸೂರು ಝಗಮಗ ; ಮುಖ್ಯಮಂತ್ರಿ ಬೊಮ್ಮಾಯಿ 

05-10-22 10:16 pm       HK News Desk   ಕರ್ನಾಟಕ

ವಿಜಯದಶಮಿ ಬಳಿಕವೂ 10 ದಿನಗಳ ಕಾಲ ದೀಪಾಲಂಕಾರ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. 

ಮೈಸೂರು, ಅ.5: ವಿಜಯದಶಮಿ ಬಳಿಕವೂ 10 ದಿನಗಳ ಕಾಲ ದೀಪಾಲಂಕಾರ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. 

ಸುತ್ತೂರು ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ದಸರಾ ನಂತರವೂ ಮೈಸೂರು ಜಗಮಗಿಸಲು ಅವಕಾಶ ನೀಡಲಾಗಿದೆ. ಈಗಾಗಲೇ ಮೈಸೂರಿನಲ್ಲಿ ವಿದ್ಯುತ್ ದೀಪಾಲಂಕಾರ ಜನರ ಗಮನ ಸೆಳೆದಿದೆ. ಹೀಗಾಗಿ ದಸರಾ ನಂತರವೂ 10 ದಿನ ದಸರಾ ದೀಪಾಲಂಕಾರ ಕಣ್ತುಂಬಿಕೊಳ್ಳುವ ಅವಕಾಶ ಕೊಡುವುದಾಗಿ ತಿಳಿಸಿದರು.

Mysore Dussehra 2022: साढ़े 7 सौ किलो का आसन, लाइटिंग के लिए डेढ़ लाख  बल्‍ब! कमाल है इस दशहरे की भव्‍यता | world famous Mysore Dussehra 2022  festival celebration and devi chamundeshwari

ಕಳೆದ ಎರಡು ವರ್ಷದಲ್ಲಿ ಕೋವಿಡ್ ಹಿನ್ನೆಲೆ ದಸರಾಗೆ ಬರುವವರ ಸಂಖ್ಯೆ ಕಡಿಮೆಯಾಗಿತ್ತು. ಈ ಬಾರಿ ಬಹಳಷ್ಟು ಅರ್ಥಪೂರ್ಣ ಹಾಗೂ ವೈಭವಪೂರ್ಣ ದಸಾರಾಗೆ ಹೆಚ್ಚಿನ ಜನ ಆಕರ್ಷಣೆಯಾಗಿದ್ದಾರೆ. ಲಕ್ಷಾಂತರ ಜನ ಇಡೀ ರಾಜ್ಯದಿಂದ ವಿದೇಶದಿಂದ ಬಂದಿದ್ದಾರೆ. ಮತ್ತೊಮ್ಮೆ ಪಾರಂಪರಿಕವಾದ ವೈಭವ ನೋಡೋಕೆ ಸಿಗ್ತಾ ಇದೆ ಎಂದರು.

Chamundeshwari Temple,Mysore: How To Reach, Timing & Entry Fee

ಆ ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ, ಸಕಲ ಕನ್ನಡಿನಾಡಿನ ಜನತೆಗೆ ಒಳ್ಳೆಯದು ಮಾಡಲಿ. ಸುಖ ಶಾಂತಿ ನೆಲಸಲಿ, ರೈತರ ಮಳೆ ಬೆಳೆ ಎಲ್ಲಾ ಚೆನ್ನಾಗಿ ಆಗ್ಲಿ ಅಂತ ಪ್ರಾರ್ಥಿಸಿದ್ದೇನೆ ಎಂದ ಅವರು, ಇಲ್ಲಿ ಟೂರಿಸಂ ಸರ್ಕಿಟ್ ಮಾಡಬೇಕಿದೆ ಅದಕ್ಕೆ ಕ್ರಮಗಳನ್ನ ತೆಗೆದುಕೊಂಡಿದ್ದೇವೆ. ಮೈಸೂರು ಸರ್ಕಿಟ್ ಅಂದ್ರೆ ಮೈಸೂರು ಹಳೇಬೀಡು ಬೇಲೂರು ಸೋಮನಾಥಪುರ ಸುತ್ತಲೂ ಇರೋದನ್ನ ವೆಬ್ ಸೈಟ್ ನಲ್ಲಿ ಬುಕ್ ಮಾಡಿ ಎಲ್ಲವನ್ನು ಮಾಡಬಹುದು. ಟೂರಿಸಂ ಉತ್ತೇಜನಕ್ಕೆ ಶೀಘ್ರದಲ್ಲಿ ಕಾರ್ಯರಂಭವಾಗುತ್ತದೆ. ಉತ್ತರದಲ್ಲಿ ಹಂಪಿ, ದಕ್ಷಿಣದಲ್ಲಿ ಮೈಸೂರು ದಸರಾವನ್ನ ಟೂರಿಸ್ಟ್ ಸರ್ಕಿಟ್ ನ್ನಾಗಿ ಮಾಡುತ್ತೇವೆ ಎಂದು ಹೇಳಿದರು.

Mysuru to be colourful for ten days even after Vijayadashami says CM Bommai.