ಟಿಪ್ಪು ಎಕ್ಸ್‌ಪ್ರೆಸ್‌ ರೈಲು ಇನ್ನು ಒಡೆಯರ್ ಎಕ್ಸ್‌ಪ್ರೆಸ್‌ ! ಮರು ನಾಮಕರಣ ಮಾಡಿ ಕೇಂದ್ರ ಆದೇಶ 

07-10-22 10:42 pm       HK News Desk   ಕರ್ನಾಟಕ

ಮೈಸೂರು ಮೂಲಕ ಹಾದು ಹೋಗುವ ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರು ಬದಲಿಸಬೇಕು ಅನ್ನೋದು ಹಲವರ ಬೇಡಿಕೆಯಾಗಿತ್ತು. ಮೈಸೂರು ಸಂಸದ ಪ್ರತಾಪ್ ಸಿಂಹ ನಡೆಸಿದ ಸತತ ಪ್ರಯತ್ನದಿಂದಾಗಿ ಕೇಂದ್ರ ಸರ್ಕಾರ ಮರು ನಾಮಕರಣ ಮಾಡಿದೆ.

ಮೈಸೂರು, ಅ.7 : ಮೈಸೂರು ಮೂಲಕ ಹಾದು ಹೋಗುವ ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರು ಬದಲಿಸಬೇಕು ಅನ್ನೋದು ಹಲವರ ಬೇಡಿಕೆಯಾಗಿತ್ತು. ಮೈಸೂರು ಸಂಸದ ಪ್ರತಾಪ್ ಸಿಂಹ ನಡೆಸಿದ ಸತತ ಪ್ರಯತ್ನದಿಂದಾಗಿ ಕೇಂದ್ರ ಸರ್ಕಾರ ಮರು ನಾಮಕರಣ ಮಾಡಿದೆ. 

ಟಿಪ್ಸು ಎಕ್ಸ್‌ಪ್ರೆಸ್ ರೈಲಿನ ಹೆಸರನ್ನು ಕೇಂದ್ರ ಸರ್ಕಾರ ಒಡೆಯರ್ ಎಕ್ಸ್‌ಪ್ರೆಸ್ ರೈಲು ಎಂದು ನಾಮಕರಣ ಮಾಡಿದೆ. ಈ ಮೂಲಕ ಮೈಸೂರನ್ನು ಕಾಪಾಡಿದ, ಸಂಸ್ಕತಿಯನ್ನು ಉಳಿಸಿ ಬೆಳೆಸಿ, ವಿಶ್ವದಲ್ಲೇ ಪ್ರಸಿದ್ಧಿ ಮಾಡಿದ ಒಡೆಯರ್ ರಾಜಮನೆತನಕ್ಕೆ ಗೌರವ ನೀಡಿದೆ. ಒಡೆಯರ್ ಎಕ್ಸ್‌ಪ್ರೆಸ್ ಜೊತೆಗೆ ಮೈಸೂರು ತಾಳಗುಪ್ಪ ಎಕ್ಸ್‌ಪ್ರೆಸ್ ರೈಲಿನ ಹೆಸರನ್ನು ಕುವೆಂಪು ಎಕ್ಸ್‌ಪ್ರೆಸ್ ಎಂದು ಹೆಸರಿಡಲಾಗಿದೆ.

Pratap Simha: ಗ್ಯಾಸ್ ಪೈಪ್​ಲೈನ್ ಸಂಪರ್ಕ ಏರ್ಪಟ್ಟರೆ ಜನರಿಗೆ ₹ 400 ಉಳಿತಾಯವಾಗಲಿದೆ:  ಸಂಸದ ಪ್ರತಾಪ್ ಸಿಂಹ ಮಾಹಿತಿ | Mysuru MP Pratap Simha explains benefits of Gas  Pipeline and criticizes BJP MLA ...

ಈ ಕುರಿತು ಮೈಸೂರು ಸಂಸದ ಪ್ರತಾಪ್ ಸಿಂಹ ಟ್ವಿಟರ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಶುಕ್ರವಾರದ ಶುಭ ಸುದ್ದಿ. ಇನ್ನು ಮುಂದೆ ಟಿಪ್ಪು ಎಕ್ಸ್ಪ್ರೆಸ್ ಬದಲು "ಒಡೆಯರ್ ಎಕ್ಸ್ಪ್ರೆಸ್ " ನಿಮಗೆ ಸೇವೆ ನೀಡಲಿದೆ! ಮೈಸೂರು- ತಾಳಗುಪ್ಪ ರೈಲು "ಕುವೆಂಪು ಎಕ್ಸ್ಪ್ರೆಸ್'' ಆಗಲಿದೆ. ಥಾಂಕ್ಯೂ ಅಶ್ವಿನಿ ವೈಷ್ಣವ್ ಮತ್ತು ಈ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತ ಪ್ರಹ್ಲಾದ್ ಜೋಶಿಗೆ ಧನ್ಯವಾದ ಎಂದು ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ.

The Railways has renamed Tipu Express, which plies between Mysuru and Bengaluru, as Wodeyar Express while an express service from Mysuru to Talaguppa has been named after poet laureate Kuvempu.The demand was made by Mysuru MP Pratap Simha, in a letter to Minister for Railways Ashwini Vaishnaw a few months ago.