ಪರಿಶಿಷ್ಟ ಜಾತಿಗೆ ಶೇ.15ರಿಂದ 17, ಪರಿಶಿಷ್ಟ ಪಂಗಡಕ್ಕೆ ಶೇ.3ರಿಂದ 7ಕ್ಕೆ ಮೀಸಲು ಹೆಚ್ಚಳ ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಣಯ 

08-10-22 07:56 pm       Bangalore Correspondent   ಕರ್ನಾಟಕ

ಪರಿಶಿಷ್ಟ ಜಾತಿಗೆ ಇರುವ ಮೀಸಲಾತಿಯನ್ನು ಶೇ.15 ರಿಂದ 17ಕ್ಕೆ ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.3 ರಿಂದ 7ಕ್ಕೆ ಹೆಚ್ಚಿಸುವ ಕುರಿತು ನ್ಯಾ.ನಾಗಮೋಹನ್ ದಾಸ್ ಸಮಿತಿ ನೀಡಿರುವ ವರದಿ ಅನುಷ್ಠಾನಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. 

ಬೆಂಗಳೂರು, ಅ.8 : ಪರಿಶಿಷ್ಟ ಜಾತಿಗೆ ಇರುವ ಮೀಸಲಾತಿಯನ್ನು ಶೇ.15 ರಿಂದ 17ಕ್ಕೆ ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.3 ರಿಂದ 7ಕ್ಕೆ ಹೆಚ್ಚಿಸುವ ಕುರಿತು ನ್ಯಾ.ನಾಗಮೋಹನ್ ದಾಸ್ ಸಮಿತಿ ನೀಡಿರುವ ವರದಿ ಅನುಷ್ಠಾನಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. 

ಸಂಪುಟ ಸಭೆಯ ಬಳಿಕ ಮಾಹಿತಿ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಪ್ರಮಾಣ ಹೆಚ್ಚಳ ಕುರಿತ ಸರ್ವಪಕ್ಷ ಸಭೆ ನಿರ್ಣಯಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿಲಾಗಿದೆ. ನ್ಯಾ.ನಾಗಮೋಹನ ದಾಸ್​ ವರದಿ ಅನುಷ್ಠಾನಕ್ಕೆ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. 

Unanimous decision to hike reservation for Scheduled Castes by 17 per cent, Scheduled  Tribes by 7 per cent: CM Bommai - The Daily Guardian

ಜಸ್ಟೀಸ್ ನಾಗಮೋಹನ್ ದಾಸ್ ಸಮಿತಿಯ ವರದಿ ಒಪ್ಪಿಕೊಂಡು ಎಸ್ಸಿಗೆ ಶೇ.15 ರಿಂದ 17, ಎಸ್ಟಿ ಗೆ ಶೇ.3ರಿಂದ 7ಕ್ಕೆ ಮೀಸಲಾತಿ ನೀಡಲು ಒಪ್ಪಿದ್ದೇವೆ. ಕೂಡಲೇ ಈ ಬಗ್ಗೆ ಆದೇಶ ಹೊರಡಿಸಿ, ಗಜೆಟ್ ನೋಟಿಫಿಕೇಷನ್ ಮಾಡಲಾಗುವುದು ಎಂದಿದ್ದಾರೆ.

ಆದರೆ ಈ ನಿರ್ಣಯಕ್ಕೆ ಕಾನೂನಿನ ರಕ್ಷಣೆ ಕೊಡಲು ಶೆಡ್ಯೂಲ್ 9 ರಡಿ ಸೇರಿಸಬೇಕಾಗಿದೆ. ಅದಕ್ಕೆ ಕಾನೂನು ಸಚಿವರು, ಲಾ ಕಮಿಷನ್, ಅಡ್ವೊಕೇಟ್ ಜನರಲ್ ಜೊತೆ ಚರ್ಚೆ ಮಾಡಿ ತೀರ್ಮಾನ‌ ಮಾಡ್ತೀವಿ. ಇಂದ್ರಾ ಸಾನಿ ಕೇಸ್‌ನಲ್ಲಿ ಮುಖ್ಯ ವಾಹಿನಿಯಿಂದ ಯಾರೆಲ್ಲಾ ಹೊರಗುಳಿದಿದ್ದಾರೆ ಎಂಬುದರ ಬಗ್ಗೆ ನಾಗಮೋಹನ್ ದಾಸ್ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಒಂದು ಜನಸಂಖ್ಯೆ ಹೆಚ್ಚಿರೋದನ್ಬು ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಮಧ್ಯಪ್ರದೇಶ, ಜಾರ್ಖಂಡ್, ತಮಿಳುನಾಡಿನಲ್ಲಿ ಇದೇ ಮಾದರಿಯಿದ್ದು ಕೋರ್ಟ್ ತೀರ್ಪು ಅಲ್ಲಿ ಉಲ್ಟಾ ಬಂದಿಲ್ಲ. ಅಲ್ಲಿ ಮೀಸಲು ಶೇ. 50ಕ್ಕಿಂತ ಮೀರಿದೆ. ಇದು ಸುಪ್ರೀಂ ಕೋರ್ಟ್ ತೀರ್ಪು ವಿರುದ್ಧವಾಗಿದೆ. ಹೀಗಾಗಿ ಅಲ್ಲಿ ಕಾನೂನು ಕಗ್ಗಂಟಿನ ಬಗ್ಗೆ ಚರ್ಚೆ ನಡೆಸಲಾಗ್ತಿದೆ. ರಿಸರ್ವೇಷನ್ ಹೊರತುಪಡಿಸಿ ಏನೆಲ್ಲಾ ಎಸ್ಸಿಗಳಿಗೆ ಕೊಡಲಾಗಿದೆ ಅನ್ನೋದ್ರ ಚರ್ಚೆಯಾಗ್ತಿದೆ. ನಾಗಮೋಹನ್ ದಾಸ್ ವರದಿಯಲ್ಲಿ ಕೆಳ ಸಮುದಾಯಕ್ಕೆ ರಿಸರ್ವೇಷನ್ ಮುಟ್ಟಿಲ್ಲ ಅಂತ ಹೇಳಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗದುಕೊಳ್ಳಲಾಗುವುದು. ನಾಗಮೋಹನ್ ದಾಸ್ ಸಮಿತಿ ಹಳೆಯ ವರದಿಯಾಗಿದೆ. ಅದರಲ್ಲಿರೋ ಮೀಸಲಾತಿ ಬಗ್ಗೆ ಚರ್ಚೆ ಮಾಡಲು ಸೂಚಿಸಿದ್ದೇನೆ ಎಂದರು.

The state government on Friday decided to accept the Justice Nagamohan Das Committee’s recommendation on increasing the reservation for Scheduled Castes (SC) from 15 per cent to 17 per cent and Scheduled Tribes (ST) from 3 to 7 per cent. A special cabinet meeting has been called on Saturday to accept the committee’s recommendation. The changes will not adversely impact other communities, Chief Minister Basavaraj Bommai said on Friday.