ಮುರುಘಾಶ್ರೀಗಳಿಗೆ ಇಂದೂ ಸಿಗಲಿಲ್ಲ ಬೇಲು ; ಅ. 21 ರವರೆಗೆ ಜೈಲು 

10-10-22 03:31 pm       HK News Desk   ಕರ್ನಾಟಕ

ಚಿತ್ರದುರ್ಗದ ಮುರುಘಾಶ್ರೀಗಳಿಗೆ ಇಂದೂ ಜಾಮೀನು ಮಂಜೂರಾಗಿಲ್ಲ. ಅವರನ್ನು ಮತ್ತೆ ಹನ್ನೊಂದು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಲಯ ಆದೇಶಿಸಿದೆ. 

ಚಿತ್ರದುರ್ಗ,ಅ.10: ಚಿತ್ರದುರ್ಗದ ಮುರುಘಾಶ್ರೀಗಳಿಗೆ ಇಂದೂ ಜಾಮೀನು ಮಂಜೂರಾಗಿಲ್ಲ. ಅವರನ್ನು ಮತ್ತೆ ಹನ್ನೊಂದು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಲಯ ಆದೇಶಿಸಿದೆ. 

ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಮುರುಘಾ ಶರಣರ ನ್ಯಾಯಾಂಗ ಬಂಧನ ಇಂದು ಅಂತ್ಯವಾದ ಹಿನ್ನೆಲೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

Bail of rape accused rejected by POCSO court

ಮುರುಘಾಶ್ರೀಗೆ ಇಂದಾದರೂ ಜಾಮೀನು ಸಿಗಬಹುದು ಎಂಬ ನಿರೀಕ್ಷೆ ಭಕ್ತರಲ್ಲಿತ್ತು, ಆದರೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಆದೇಶಿಸಲಾಗಿದೆ. ಅಕ್ಟೋಬರ್ 21 ರವರೆಗೆ ಅವರು ಚಿತ್ರದುರ್ಗದ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರಲಿದ್ದಾರೆ. ಚಿತ್ರದುರ್ಗ ಅಪರ ಜಿಲ್ಲಾ & ಸತ್ರ ನ್ಯಾಯಾಲಯ ಆದೇಶವನ್ನು ನೀಡಿದೆ.

ಪ್ರಕರಣದ ಎರಡನೇ ಆರೋಪಿ ಹಾಸ್ಟೆಲ್‌ನ ಮಹಿಳಾ ವಾರ್ಡನ್‌ ಅವರ ನ್ಯಾಯಾಂಗ ಬಂಧನ ಮುಗಿದಿತ್ತು. ಅವರನ್ನು ಸಹ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಲೇಡಿ ವಾರ್ಡನ್‌ ಅವರನ್ನು ಅಕ್ಟೋಬರ್‌ 21ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ.

Muruga Mutt bail plea rejected, judicial custody till October 21.