ಬ್ರೇಕಿಂಗ್ ನ್ಯೂಸ್
10-10-22 09:47 pm Bangalore Correspondent ಕರ್ನಾಟಕ
ಬೆಂಗಳೂರು, ಅ.10: ಆರೋಪಿಗಳ ಕೈಯಿಂದ ಜಪ್ತಿ ಮಾಡಿದ್ದ 50 ಲಕ್ಷ ರೂ. ನಗದಿನಲ್ಲಿ 10 ಲಕ್ಷ ರೂ. ಎಗರಿಸಿದ್ದ ಆರೋಪದಲ್ಲಿ ಪೊಲೀಸ್ ಮುಖ್ಯ ಪೇದೆಯೊಬ್ಬರನ್ನು ಚಂದ್ರಾ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಹೇಂದ್ರ ಗೌಡ (45) ಬಂಧಿತ ಪೊಲೀಸ್ ಹೆಡ್ ಕಾನ್ಸ್ ಟೇಬಲ್. ರಾಮನಗರ ಜಿಲ್ಲೆಯ ರಾಮಾಪುರ ಗ್ರಾಮದ ಲಿಂಗೇಶ್ ಎಂಬವರು ನೀಡಿದ ದೂರಿನಂತೆ ತನಿಖೆ ನಡೆಸಿದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಹಣ ಎಗರಿಸಿದ ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ, ಮಹೇಂದ್ರ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಿದ್ದಾರೆ.
ಕಮಿಷನ್ ಆಸೆಗೆ ಬಿದ್ದು ಸಿಕ್ಕಿಬಿದ್ದಿದ್ದರು
ರಾಮನಗರದ ಲಿಂಗೇಶ್ ವ್ಯವಸಾಯದ ಜೊತೆಗೆ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದ ವ್ಯಕ್ತಿ. ಇತ್ತೀಚೆಗೆ ಸ್ನೇಹಿತ ಪ್ರದೀಪ್ ಕರೆ ಮಾಡಿ, ಕಮಿಷನ್ ಡೀಲ್ ಬಗ್ಗೆ ಹೇಳಿಕೊಂಡಿದ್ದ. ತನ್ನ ಬೇರೆ ಸೇಹಿತರೊಬ್ಬರ ಬಳಿ 2 ಸಾವಿರ ರೂ. ನೋಟಿನ ಕೋಟ್ಯಂತರ ರೂಪಾಯಿ ಇದೆ. ಭವಿಷ್ಯದಲ್ಲಿ ಎರಡು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ರದ್ದು ಮಾಡುವ ಸಾಧ್ಯತೆ ಇದ್ದು 500 ರೂ. ನೋಟುಗಳಿಗೆ ಬದಲಾಯಿಸಲು ನೋಡುತ್ತಿದ್ದಾರೆ. 500 ರೂ. ನೋಟು ನೀಡಿದರೆ, ಶೇ.10 ಕಮಿಷನ್ ನೀಡಲಿದ್ದಾರೆ ಎಂದು ಹೇಳಿದ್ದರು. ಡೀಲ್ ಒಪ್ಪಿದ್ದ ಲಿಂಗೇಶ್, 500ರ ನೋಟಿನ 50 ಲಕ್ಷ ರೂ. ರೆಡಿ ಮಾಡಿದ್ದರು. ಅದರಂತೆ, ಅ.2ರಂದು ಲಿಂಗೇಶ್ ಮತ್ತು ಪ್ರದೀಪ್ ಕಾರಿನಲ್ಲಿ ಇಲೆಕ್ಟ್ರಾನಿಕ್ ಸಿಟಿ ಬಳಿಯ ಸಿಂಗಸಂದ್ರಕ್ಕೆ 50 ಲಕ್ಷ ನೋಟುಗಳ ಜೊತೆ ತೆರಳಿದ್ದರು. ಅಲ್ಲಿ ವಟ್ರಿವೇಲು ಎಂಬಾತನನ್ನು ಭೇಟಿಯಾಗಿದ್ದು ಬಳಿಕ ಮೂವರು ಚಂದ್ರಾಲೇಔಟ್ ಎಂಬಲ್ಲಿಗೆ ಬಂದಿದ್ದರು.
ಕಾರಿನಿಂದ ಹಣ ಎಗರಿಸಿದ್ದ ಪೊಲೀಸ್
ಅಲ್ಲಿ ವಟ್ರಿವೇಲು, ಸಂತೋಷ್ ಎಂಬವರ ಜೊತೆಗೆ ಲಿಂಗೇಶ್ ಮಾತನಾಡುತ್ತಿದ್ದಾಗಲೇ ಪೊಲೀಸ್ ಮುಖ್ಯಪೇದೆ ಮಹೇಂದ್ರಗೌಡ ಹೊಯ್ಸಳ ವಾಹನದಲ್ಲಿ ಗಸ್ತು ಬಂದಿದ್ದರು. ಪೊಲೀಸ್ ವಾಹನ ನೋಡುತ್ತಲೇ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದ ವಟ್ರಿವೇಲು ಕಾರಿನಲ್ಲಿ ಮುಂದೆ ತೆರಳಿದ್ದರು. ಅಷ್ಟರಲ್ಲಿ ಮಹೇಂದ್ರಗೌಡ ಮತ್ತೊಂದು ಪೊಲೀಸ್ ವಾಹನ ಕರೆಸಿಕೊಂಡು ನಾಲ್ವರನ್ನು ಕೂಡ ವಶಕ್ಕೆ ಪಡೆದಿದ್ದು ಪೊಲೀಸ್ ಠಾಣೆಗೆ ಕರೆತಂದಿದ್ದರು. ಲಿಂಗೇಶ್ ಅವರಿದ್ದ ಕಾರನ್ನು ಪೊಲೀಸ್ ಮಹೇಂದ್ರಗೌಡ ಸ್ವತಃ ಚಲಾಯಿಸಿಕೊಂಡು ಠಾಣೆಗೆ ತಂದಿದ್ದರು.
ಪೊಲೀಸ್ ಠಾಣೆ ತಲುಪಿದಾಗ, ಅವರ ಕಾರಿನಲ್ಲಿ 40 ಲಕ್ಷ ಇರುವುದಾಗಿ ಮಹೇಂದ್ರ ಗೌಡ ತೋರಿಸಿದ್ದರು. ಆದರೆ ಲಿಂಗೇಶ್, ತಾನು ಮನೆಯಿಂದ 50 ಲಕ್ಷ ರೂ. ತಂದಿದ್ದೆ. ಕಾರನ್ನು ಚಲಾಯಿಸಿಕೊಂಡು ಬಂದಿದ್ದ ಮುಖ್ಯಪೇದೆಯೇ ಹಣ ಎಗರಿಸಿರುವ ಅನುಮಾವಿದೆ ಎಂದು ಚಂದ್ರಾಲೇಔಟ್ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ತನಿಖೆ ಕೈಗೊಂಡಾಗ, ಮಹೇಂದ್ರ ಗೌಡ ದಾರಿ ಮಧ್ಯೆ 10 ಲಕ್ಷ ರೂ. ಎಗರಿಸಿರುವುದು ಸಾಬೀತಾಗಿದ್ದು ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೆ, ಹಣದ ಡೀಲ್ ಕುದುರಿಸಲು ಹೋಗಿರುವ ಲಿಂಗೇಶ್ ತಂಡದ ಮೇಲೂ ಪ್ರಕರಣ ದಾಖಲಿಸಿದ್ದಾರೆ.
A Karnataka policeman has been arrested on charges of keeping Rs 10 lakh for himself while seizing Rs 50 lakh in Bengaluru, police said on Sunday.The policeman has been identified as Mahendra Gowda, a head constable attached to the Chandra Layout police station. According to the police, the accused committed the crime during his patrolling duty.
06-02-25 07:55 pm
Bangalore Correspondent
Yadagiri Accident, Five Killed: ಯಾದಗಿರಿ; ಸಾರಿ...
05-02-25 06:39 pm
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
06-02-25 05:37 pm
HK News Desk
ಅಮೆರಿಕದಲ್ಲಿ ಅಕ್ರಮ ವಲಸಿಗರ ಗಡೀಪಾರು ; ಪ್ರಧಾನಿ ಮೋ...
06-02-25 02:21 pm
Kerala Suicide, Ragging: ಕೇರಳದಲ್ಲಿ 15ರ ಬಾಲಕ ಮ...
04-02-25 10:49 pm
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
05-02-25 10:51 pm
Mangalore Correspondent
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
Mangalore gun misfire, congress, chittaranjan...
04-02-25 07:47 pm
06-02-25 04:35 pm
HK News Desk
Raichur Rape, Crime: ರಾಯಚೂರಿನಲ್ಲಿ ಎರಡನೇ ಕ್ಲಾಸ...
06-02-25 12:00 pm
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm
Ullal Police Station, Mangalore, Crime: ಪಿಎಸ್...
03-02-25 05:46 pm
Bangalore honeytrap case, Crime: ಮದುವೆಗೆ ವಧು...
02-02-25 09:00 pm