ಬ್ರೇಕಿಂಗ್ ನ್ಯೂಸ್
10-10-22 10:24 pm Bangalore Correspondent ಕರ್ನಾಟಕ
ಬೆಂಗಳೂರು, ಅ.10: ಚೆನ್ನೈ ಮೂಲದ ವೈದ್ಯರ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರೀತಿ ನೆಪದಲ್ಲಿ ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ಇಟ್ಟುಕೊಂಡಿದ್ದ ವೈದ್ಯ, ಏಕಕಾಲದಲ್ಲಿ ಇಬ್ಬರ ಜೊತೆಗೆ ಪ್ರೀತಿಯ ನಾಟಕವಾಡಿದ್ದ ತೀಟೆ ತೀರಿಸಿಕೊಳ್ಳುತ್ತಿದ್ದ ಯುವತಿಯ ಕಳ್ಳಾಟ ಬಯಲಿಗೆ ಬಂದಿದೆ.
ಸೆ.14ರಂದು ಬೇಗೂರು ಠಾಣೆ ವ್ಯಾಪ್ತಿಯಲ್ಲಿ ವೈದ್ಯ ವಿಕಾಸ್ ಕೊಲೆ ಪ್ರಕರಣ ದಾಖಲಾಗಿತ್ತು. ಸೆ.10ರ ರಾತ್ರಿ ವಿಕಾಸ್(27) ಮೇಲೆ ಆತನ ಸ್ನೇಹಿತರೇ ಹಲ್ಲೆ ನಡೆಸಿದ್ದು ಮಾರಣಾಂತಿಕ ಹಲ್ಲೆಯಿಂದಾಗಿ ವಿಕಾಸ್ ಮೃತಪಟ್ಟಿದ್ದ ಬಗ್ಗೆ ಕೇಸು ದಾಖಲಾಗಿತ್ತು. ಈ ವೇಳೆ, ವೈದ್ಯನ ಜೊತೆಗೆ ಲಿವಿಂಗ್ ರಿಲೇಶನ್ ಹೊಂದಿದ್ದ ಪತ್ನಿ ಕಂ ಲವರ್ ಪ್ರತಿಭಾ ತನ್ನ ಖಾಸಗಿ ಫೋಟೋಗಳನ್ನು ಜಾಲತಾಣದಲ್ಲಿ ಷೇರ್ ಮಾಡಿದ್ದ ಬಗ್ಗೆ ಹೇಳಿಕೊಂಡಿದ್ದಳು. ಹೀಗಾಗಿ ಜಟಾಪಟಿ ನಡೆದು ಹಲ್ಲೆ ಆಗಿತ್ತು ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಳು.
ಚೆನ್ನೈ ಮೂಲದ ವಿಕಾಸ್ ಉಕ್ರೇನ್‌ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿದ್ದು, ಎರಡು ವರ್ಷ ಅಲ್ಲಿಯೇ ವೈದ್ಯನಾಗಿದ್ದ. ಇತ್ತೀಚೆಗೆ ರಷ್ಯಾ-ಉಕ್ರೇನ್ ಯುದ್ಧದ ಕಾರಣ ವಿಕಾಸ್ ನಾಲ್ಕು ತಿಂಗಳ ಹಿಂದೆ ಸ್ವದೇಶಕ್ಕೆ ಬಂದಿದ್ದ. ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ಮನೆ ಬಾಡಿಗೆ ಪಡೆದಿದ್ದ ವಿಕಾಸ್ ಎಫ್‌ಎಂಜಿಸಿ ಪರೀಕ್ಷೆಗೂ ತಯಾರಿ ನಡೆಸುತ್ತಿದ್ದ. ವಿಕಾಸ್ ಮತ್ತು ಚೆನ್ನೈ ಮೂಲದ ಪ್ರತಿಭಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದ್ದು ನಗರದಲ್ಲಿ ಒಂದೇ ಮನೆಯಲ್ಲಿದ್ದುಕೊಂಡು ಸಹ ಜೀವನ ನಡೆಸುತ್ತಿದ್ದರು. ವಿಕಾಸ್ ಕುಟುಂಬಸ್ಥರಿಗೂ ಈ ವಿಷಯ ತಿಳಿದಿತ್ತು.
ಇತ್ತೀಚೆಗೆ ಇವರ ನಡುವೆ ವೈಮನಸ್ಸು ಉಂಟಾಗಿದ್ದು, ಪ್ರತಿಭಾ ಬೇರೊಬ್ಬ ವ್ಯಕ್ತಿಯ ಜೊತೆಗೆ ಸಲುಗೆ ಹೊಂದಿರುವುದು ವಿಕಾಸ್ ಗೆ ತಿಳಿದು ಹೋಗಿತ್ತು. ಇಂಜಿನಿಯರ್ ಸುಶೀಲ್ ಎಂಬವನ ಜೊತೆಗೆ ಸಹವಾಸ ಹೊಂದಿರುವ ಬಗ್ಗೆ ತಿಳಿದು ವಿಕಾಸ್ ಹಲವು ಬಾರಿ ವಾರ್ನ್ ಮಾಡಿದ್ದ. ಇದೇ ನೆಪದಲ್ಲಿ ಪ್ರತಿಭಾ ತನ್ನ ಜೊತೆಗಿರುತ್ತಿದ್ದ ಖಾಸಗಿ ಫೋಟೋಗಳನ್ನು ಇನ್ ಸ್ಟಾ ಗ್ರಾಮ್ ನಲ್ಲಿ ಷೇರ್ ಮಾಡಿ ಸೇಡು ತೀರಿಸಿದ್ದ.
ಉಪಾಯದಿಂದ ಕರೆಸಿ ಸ್ನೇಹಿತರಿಂದಲೇ ಹಲ್ಲೆ
ಈ ಬಗ್ಗೆ ಪ್ರತಿಭಾ ತನ್ನ ಸ್ನೇಹಿತ ಸುಶೀಲ್ ಗೆ ತಿಳಿಸಿದ್ದು, ಸೆ.10ರಂದು ಉಪಾಯದಿಂದ ಮಾತನಾಡಲೆಂದು ವಿಕಾಸ್ ನನ್ನು ನ್ಯೂ ಮೈಕೋ ಲೇಔಟ್ ನಲ್ಲಿರುವ ಸುಶೀಲ್ ಮನೆಗೆ ಕರೆಸಿದ್ದರು. ಅಲ್ಲಿ ಖಾಸಗಿ ಫೋಟೋಗಳ ಬಗ್ಗೆ ಮಾತಿಗೆ ಮಾತು ಬೆಳೆಸಿ ಸುಶೀಲ್ ಮತ್ತು ಆತನ ಗೆಳೆಯರಾದ ಗೌತಮ್, ಸೂರ್ಯ ಎಂಬವರು ವಿಕಾಸ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ತಲೆಗೆ ಪೆಟ್ಟು ಬಿದ್ದು ನೆಲಕ್ಕೆ ಕುಸಿದ ವಿಕಾಸ್ ನನ್ನು ಬಳಿಕ ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಸಿಯುನಲ್ಲಿದ್ದ ವಿಕಾಸ್, ಸೆಪ್ಟೆಂಬರ್ 14ರಂದು ಮೃತಪಟ್ಟಿದ್ದ. ಸ್ನೇಹಿತ ವಿಕಾಸ್ ಸಾವಿನ ಬಗ್ಗೆ ಆತನ ಪತ್ನಿಯೆಂದು ಪರಿಗಣಿತವಾಗಿದ್ದ ಪ್ರತಿಭಾ ಹೇಳಿಕೆಯನ್ನೇ ಪೊಲೀಸರು ಸತ್ಯವೆಂದು ನಂಬಿದ್ದರು. ಆದರೆ ತನಿಖೆಯಲ್ಲಿ ಪ್ರತಿಭಾ ನಡೆಸುತ್ತಿದ್ದ ಕಳ್ಳಾಟ ಹೊರ ಬಂದಿದೆ.
ವಿಕಾಸ್ ಜೊತೆಗೆ ವೈಮನಸ್ಸು ಉಂಟಾದ ಬಳಿಕ ಪ್ರತಿಭಾ, ಸುಶೀಲ್ ಜೊತೆ ತಿರುಗಾಟ ಶುರು ಮಾಡಿದ್ದಳು. ತನ್ನನ್ನು ಬಿಟ್ಟು ಬೇರೊಬ್ಬನ ಜೊತೆ ಸಹವಾಸ ಬೆಳೆಸಿದ್ದು ವಿಕಾಸ್ ಗೆ ಸಿಟ್ಟು ತರಿಸಿತ್ತು. ತನ್ನ ಮಾತು ಕೇಳದೇ ಇದ್ದಾಗ ಆಕೆಯ ಜೊತೆಗಿನ ಖಾಸಗಿ ಫೋಟೊ ಮತ್ತು ವಿಡಿಯೋಗಳನ್ನು ವಿಕಾಸ್ ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದ. ಇದೇ ವಿಚಾರದಲ್ಲಿ ಪ್ರತಿಭಾ, ವಿಕಾಸ್ ಮೇಲೆ ಸಿಟ್ಟು ತೀರಿಸಿಕೊಳ್ಳಲು ತನ್ನ ಸ್ನೇಹಿತರಿಂದಲೇ ಹಲ್ಲೆ ನಡೆಸುವಂತೆ ಮಾಡಿದ್ದಳು. ಇದೀಗ ತನಿಖೆಯಲ್ಲಿ ಅಸಲಿ ವಿಷಯ ಬಹಿರಂಗ ಆಗುತ್ತಲೇ ಇಂಜಿನಿಯರ್ ಹುಡುಗ ಸುಶೀಲ್ ಸೇರಿದಂತೆ ಕಳ್ಳಾಟ ಮಾಡಿದ್ದ ಪ್ರತಿಭಾ, ಕೃತ್ಯಕ್ಕೆ ಬೆಂಬಲಿಸಿದ್ದ ಇತರರು ಜೈಲು ಸೇರಿದ್ದಾರೆ.
The doctor murder case in Karnataka has taken a new twist with the police investigations revealing that the now-deceased had released private photos of his live-in partner on learning about her affair with another person, police said on Monday.According to police, the accused 27-year-old architect Pratibha had developed an affair with co-accused Susheel, even after agreeing to marry Dr Vikas. The doctor found out about her affair which led to a fight.
06-02-25 07:55 pm
Bangalore Correspondent
Yadagiri Accident, Five Killed: ಯಾದಗಿರಿ; ಸಾರಿ...
05-02-25 06:39 pm
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
06-02-25 05:37 pm
HK News Desk
ಅಮೆರಿಕದಲ್ಲಿ ಅಕ್ರಮ ವಲಸಿಗರ ಗಡೀಪಾರು ; ಪ್ರಧಾನಿ ಮೋ...
06-02-25 02:21 pm
Kerala Suicide, Ragging: ಕೇರಳದಲ್ಲಿ 15ರ ಬಾಲಕ ಮ...
04-02-25 10:49 pm
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
05-02-25 10:51 pm
Mangalore Correspondent
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
Mangalore gun misfire, congress, chittaranjan...
04-02-25 07:47 pm
06-02-25 04:35 pm
HK News Desk
Raichur Rape, Crime: ರಾಯಚೂರಿನಲ್ಲಿ ಎರಡನೇ ಕ್ಲಾಸ...
06-02-25 12:00 pm
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm
Ullal Police Station, Mangalore, Crime: ಪಿಎಸ್...
03-02-25 05:46 pm
Bangalore honeytrap case, Crime: ಮದುವೆಗೆ ವಧು...
02-02-25 09:00 pm