ಓಲಾ, ಉಬರ್ ಕಂಪನಿಗಳಿಗೆ ಹೈಕೋರ್ಟ್ ರಿಲೀಫ್ ; ಲೈಸನ್ಸ್ ನವೀಕರಿಸಲು ಸರ್ಕಾರಕ್ಕೆ ನಿರ್ದೇಶನ 

14-10-22 10:48 pm       Bangalore Correspondent   ಕರ್ನಾಟಕ

ಆ್ಯಪ್ ಆಧಾರಿತ ಆಟೋ ಸೇವೆ ನೀಡುತ್ತಿದ್ದ ಓಲಾ, ಉಬರ್ ಕಂಪೆನಿಗಳಿಗೆ ನ್ಯಾಯಾಲಯದಿಂದ ಬಿಗ್ ರಿಲೀಫ್ ಸಿಕ್ಕಿದೆ. ಓಲಾ, ಉಬರ್, ರಾಪಿಡೊ ಆಟೋ ಓಡಿಸದಂತೆ ಆದೇಶ ಮಾಡಿದ್ದ ಸಾರಿಗೆ ಇಲಾಖೆಗೆ ಹೈಕೋರ್ಟ್  ಆದೇಶದಿಂದ ಹಿನ್ನಡೆಯಾಗಿದೆ.

ಬೆಂಗಳೂರು, ಅ.14 : ಆ್ಯಪ್ ಆಧಾರಿತ ಆಟೋ ಸೇವೆ ನೀಡುತ್ತಿದ್ದ ಓಲಾ, ಉಬರ್ ಕಂಪೆನಿಗಳಿಗೆ ನ್ಯಾಯಾಲಯದಿಂದ ಬಿಗ್ ರಿಲೀಫ್ ಸಿಕ್ಕಿದೆ. ಓಲಾ, ಉಬರ್, ರಾಪಿಡೊ ಆಟೋ ಓಡಿಸದಂತೆ ಆದೇಶ ಮಾಡಿದ್ದ ಸಾರಿಗೆ ಇಲಾಖೆಗೆ ಹೈಕೋರ್ಟ್  ಆದೇಶದಿಂದ ಹಿನ್ನಡೆಯಾಗಿದೆ. ಸರ್ಕಾರದ ನಿಯಮ ಪಾಲಿಸದ ಕಾರಣ ಸಾರಿಗೆ ಇಲಾಖೆ ಅವುಗಳ ಪರವಾನಗಿ ರದ್ದುಪಡಿಸಿತ್ತು.‌

ರಾಜ್ಯ ಸರ್ಕಾರ ಕಂಪನಿಗಳ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ. ಓಲಾ, ಉಬರ್ ಕಂಪನಿ ಅನುಕೂಲಕಾರಿ ದರವನ್ನೇ ವಿಧಿಸಬೇಕು. ಅಲ್ಲದೆ, ಅವುಗಳ ಪರವಾನಿಗೆ ಕಾಲಾವಕಾಶ ವಿಸ್ತರಿಸುವಂತೆ ಸಾರಿಗೆ ಇಲಾಖೆಗೆ ಆದೇಶಿಸಿದೆ. 

Bombay HC Slams Uber, Ola For Operating Without Valid Licences in  Maharashtra; Gives March Deadline

2021ರಲ್ಲಿ ಸಾರಿಗೆ ಇಲಾಖೆ ನಿಗದಿ ಪಡಿಸಿದ್ದ ದರವನ್ನೇ ಕಂಪನಿಗಳು ಪಾಲನೆ ಮಾಡಬೇಕು. ಹೆಚ್ಚುವರಿ ಸರ್ವಿಸ್ ಚಾರ್ಜ್ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಬೇಕು. ಇದಲ್ಲದೆ, 10 ರಿಂದ 15 ದಿನ ಒಳಗೆ ಈ ಬಗ್ಗೆ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ನ್ಯಾಯಾಲಯ ಸೂಚನೆ ನೀಡಿದೆ. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಜಿಎಸ್‌ ಕಮಲ್‌ ಅವರಿದ್ದ ಪೀಠವು, ಆಟೋರಿಕ್ಷಾ ಸೇವೆಗೆ ನ್ಯಾಯಯುತ ದರ ವಿಧಿಸುವುದಕ್ಕೆ ಸಂಬಂಧಿಸಿ ಕಂಪನಿಗಳ ಜೊತೆ ಸಭೆ ನಡೆಸಿ ಒಮ್ಮತಕ್ಕೆ ಬರುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತು.

The Karnataka High Court has posted to Friday the hearing of petitions filed by Ola and Uber challenging the state government order banning auto-rickshaw aggregate services.