ಬ್ರೇಕಿಂಗ್ ನ್ಯೂಸ್
15-10-22 05:23 pm HK News Desk ಕರ್ನಾಟಕ
ಬಳ್ಳಾರಿ, ಅ.15: ಬಿಜೆಪಿ ಮತ್ತು ಆರೆಸ್ಸೆಸ್ ಸಿದ್ಧಾಂತ ದೇಶವನ್ನು ಒಡೆಯುತ್ತಿದೆ. ದೇಶದ ಜನರನ್ನು ಎರಡಾಗಿ ವಿಭಜಿಸುತ್ತಿದೆ. ನಾವು ದೇಶವನ್ನು ಒಗ್ಗೂಡಿಸುವುದಕ್ಕಾಗಿ ಭಾರತ್ ಜೋಡೊ ಯಾತ್ರೆ ಮಾಡುತ್ತಿದ್ದೇವೆ. ಯಾತ್ರೆಯುದ್ದಕ್ಕೂ ಬಿಜೆಪಿ- ಆರೆಸ್ಸೆಸ್ ಜನರನ್ನು ಒಡೆಯುತ್ತಿರುವ ಬಗ್ಗೆ ಹೇಳುತ್ತಿದ್ದಾರೆ. ಇದು ನನ್ನ ಭಾವನೆಯಲ್ಲ. ದೇಶದ ಜನರ ಭಾವನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಭಾರತ್ ಜೋಡೊ ಯಾತ್ರೆ ಬಳ್ಳಾರಿ ತಲುಪಿದ್ದು ಭಾರೀ ಜನಸಾಗರದ ನಡುವೆ ರಾಹುಲ್ ಗಾಂಧಿ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ. ಯಾತ್ರೆಯಲ್ಲಿ ವಿವಿಧ ಧರ್ಮದ, ಭಾಷೆಯ ಜನರು ಭಾಗವಹಿಸಿದ್ದಾರೆ. ಯಾತ್ರೆಯಲ್ಲಿ ನಿಮಗೆ ಹಿಂಸೆ ಕಾಣುವುದಿಲ್ಲ. ಎಲ್ಲರೊಳಗೊಂದು ಅನ್ನುವುದು ಕರ್ನಾಟಕ ಮಾತ್ರವಲ್ಲ ಇಡೀ ದೇಶದ ವಿಚಾರಧಾರೆ ಆಗಿದೆ. ಯಾರೇ ಎಷ್ಟೇ ಒತ್ತಡ ಹಾಕಿದ್ರೂ ನಮ್ಮ ವಿಚಾರಧಾರೆ ಬದಲಾಗಲ್ಲ. ನಡಿಗೆಯಲ್ಲಿ ಸಾಕಷ್ಟು ಯುವಕರನ್ನ ಭೇಟಿ ಮಾಡಿದ್ದೇನೆ. ನಿಮ್ಮ ಮುಂದಿನ ಭವಿಷ್ಯದಲ್ಲಿ ಏನ್ ಮಾಡ್ತೀರಾ ಅಂತಾ ಕೇಳಿದ್ದೇನೆ. ಶಿಕ್ಷಣ ಮುಗಿದ ಬಳಿಕ ನಿಮಗೆ ಉದ್ಯೋಗ ಸಿಗುತ್ತಾ ಎಂದು ಕೇಳಿದರೆ, ಅವರಲ್ಲಿ ನೌಕರಿ ಸಿಗುವ ವಿಶ್ವಾಸವಿಲ್ಲ. ಪ್ರಧಾನಿ ಮೋದಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ಆದರೆ ಎರಡು ಕೋಟಿ ಉದ್ಯೋಗ ಸಿಗುತ್ತಿದ್ದರೆ ನಿರುದ್ಯೋಗ ಯಾಕೆ ಹೆಚ್ಚುತ್ತಿದೆ ಎಂದು ರಾಹುಲ್ ಪ್ರಶ್ನೆ ಮಾಡಿದರು.
ರಾಜ್ಯದಲ್ಲಿ ಲಂಚ ನೀಡಿದರಷ್ಟೇ ಉದ್ಯೋಗ
ಕರ್ನಾಟಕದಲ್ಲಿ 2.5 ಲಕ್ಷ ಸರಕಾರಿ ಉದ್ಯೋಗ ಖಾಲಿ ಇದೆ. ಯಾಕೆ ಅದನ್ನು ಫಿಲ್ ಮಾಡಲು ಆಗುತ್ತಿಲ್ಲ. ಒಬ್ಬ ಪಿಎಸ್ ಐ ಆಗಬೇಕು ಅಂದ್ರೆ 80 ಲಕ್ಷ ಲಂಚ ಕೊಡಬೇಕಾದ ಸ್ಥಿತಿ ಇದೆ. ಕರ್ನಾಟಕದಲ್ಲಿ ನಿಮಗೆ ದುಡ್ಡು ಇದ್ರೆ ನೌಕರಿ. ಇಲ್ಲದಿದ್ದರೆ ನೀವು ಜೀವನ ಪರ್ಯಂತ ಮನೆಯಲ್ಲಿ ಕೂರಬೇಕಾದ ಸ್ಥಿತಿ. ಸಹಕಾರಿ ಸಂಘ ಸೇರಿ ಎಲ್ಲ ನೌಕರಿ ನೇಮಕದಲ್ಲೂ ಹಗರಣ ಆಗುತ್ತಿದೆ. ಇದಕ್ಕಾಗಿ ಕರ್ನಾಟಕದಲ್ಲಿ 40 ಪರ್ಸೆಂಟ್ ಕಮಿಷನ್ ಸರ್ಕಾರ ಇದೆ ಎಂದು ಹೇಳಿದ ರಾಹುಲ್ ಗಾಂಧಿ, ಈ ಯಾತ್ರೆಯನ್ನು ನಿರುದ್ಯೋಗ ಸಮಸ್ಯೆ ನಿವಾರಿಸಲು ಮಾಡುತ್ತಿದ್ದೇವೆ. ಬೆಲೆ ಏರಿಕೆ ಗಗನಕ್ಕೇರಿದೆ, ಅದು ನಿಲ್ಲುತ್ತಿಲ್ಲ. ಮೋದಿ ಗ್ಯಾಸ್ 400 ರೂ.ಗೆ ಕೊಡುವುದಾಗಿ ಹೇಳುತ್ತಿದ್ರು. ಆದರೆ ಸಿಲಿಂಡರ್ ಬೆಲೆ ಈಗ ಸಾವಿರ ರೂ. ಆಗಿದೆ. ಆದರೆ ಮೋದಿ ಇದಕ್ಕೆ ಯಾಕೆ ಉತ್ತರ ನೀಡುತ್ತಿಲ್ಲ?
ಒಂದು ಕಡೆ ನಿರುದ್ಯೋಗ, ಮತ್ತೊಂದೆಡೆ ಬೆಲೆ ಏರಿಕೆ ಇದೆ. ಯಾತ್ರೆಯಲ್ಲಿ ನಾನು ರೈತರನ್ನ ಭೇಟಿ ಮಾಡಿದ್ದೇನೆ. ಕೃಷಿ ಉತ್ಪನ್ನಗಳ ಬಗ್ಗೆ ಕೇಳಿದ್ದೇನೆ, ಖರ್ಚು ವೆಚ್ಚದ ಬಗ್ಗೆ ಕೇಳಿರುವೆ. ರೈತರಿಗೆ ಸಹಾಯ ಮಾಡುವುದು ಬಿಟ್ಟು ಕೃಷಿ ಉತ್ಪನ್ನಗಳ ಮೇಲೆ ಜಿಎಸ್ ಟಿ ಹಾಕಿದ್ದಾರೆ. ರೈತರಿಗೆ ಕನಿಷ್ಠ ಬೆಂಬಲ ಬೆಲೆ ಸಿಗುತ್ತಿಲ್ಲ ಎಂದು ರಾಹುಲ್ ಹೇಳಿದರು.
Congress leader Rahul Gandhi on Saturday said that the ideology of BJP and RSS is breaking the country. Speaking at the rally in Karnataka's Ballari, Rahul Gandhi said, "We named this yatra as 'Bharat Jodo Yatra' because thousands of people feel that the ideology of BJP/RSS is breaking the country."
31-03-25 12:24 pm
HK News Desk
Areca Nut, Machine Accident, Sirsi: ಅಡಿಕೆ ಸುಲ...
29-03-25 09:19 pm
Mysuru three drowned, Lake, Ugadi: ಮೈಸೂರು ; ಹ...
29-03-25 03:13 pm
Naxal Karanataka, Anti Naxal Force: ನಕ್ಸಲ್ ನಿ...
28-03-25 10:47 pm
Minister Rajanna, honeytrap, Son, Murder atte...
28-03-25 12:19 pm
31-03-25 04:07 pm
HK News Desk
BR Ambedkar birth anniversary, Holiday: ಏ.14ರ...
29-03-25 04:40 pm
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
ನಡುಗಿದ ಮ್ಯಾನ್ಮಾರ್, ಥೈಲ್ಯಾಂಡ್ ; ಭೀಕರ ಭೂಕಂಪಕ್ಕೆ...
28-03-25 04:15 pm
Elon Musk, Fraud India: ವಿಶ್ವದ ನಂಬರ್ 1 ಶ್ರೀಮಂ...
28-03-25 01:38 pm
31-03-25 12:26 pm
Mangalore Correspondent
CCB Police, CM Medal, Mangalore: ಮಂಗಳೂರು ಪೊಲೀ...
30-03-25 11:02 pm
Mangalore, Ullal Netravati Bridge Repair, Tra...
30-03-25 03:07 pm
Kumapla, Mangalore, Crime: ಲಕೋಟೆಯಲ್ಲಿ ಸಂಸ್ಕರಿ...
30-03-25 02:39 pm
Mangalore CM Medal, Anupam Agrawal, Police Ma...
29-03-25 11:04 pm
30-03-25 08:59 am
Mangaluru Correspondent
ಆಂಧ್ರದಲ್ಲಿ ಪ್ಯಾಸ್ಟರ್ ಪ್ರವೀಣ್ ಕುಮಾರ್ ಸಂಶಯಾಸ್ಪದ...
29-03-25 10:33 pm
Bajrang Dal, Arrest, Cow Transport, Mangalore...
29-03-25 04:02 pm
Mangalore Nandigudde Prostitution case: ನಂದಿಗ...
28-03-25 09:25 pm
Ccb Mangalore, Drugs, Charas, Crime: ಸಿಸಿಬಿ ಪ...
28-03-25 08:37 pm