ಬ್ರೇಕಿಂಗ್ ನ್ಯೂಸ್
17-10-22 10:22 pm Bangalore Correspondent ಕರ್ನಾಟಕ
ಬೆಂಗಳೂರು, ಅ.17: ಬೆಂಗಳೂರು ನಗರ ಪೊಲೀಸ್ ಆಡಳಿತ ವಿಭಾಗದಲ್ಲಿ ಡಿಸಿಪಿ ಆಗಿರುವ ನಿಶಾ ಜೇಮ್ಸ್ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆದಿದೆ. 'ವಿ ಸಪೋರ್ಟ್ ಯೂ' ಎಂದು ಜನರು ಬೆಂಬಲಕ್ಕೆ ನಿಂತಿದ್ದಾರೆ. ಪೊಲೀಸ್ ಆಯುಕ್ತರ ಕಚೇರಿಯ ಸಿಬಂದಿ ಆಡಳಿತ ವಿಭಾಗದ ಎಡಿಜಿಪಿಗೆ ನಿಶಾ ಜೇಮ್ಸ್ ವಿರುದ್ಧವೇ ದೂರು ನೀಡಿದ್ದಾರೆ ಎನ್ನುವ ಸುದ್ದಿ ಬೆನ್ನಲ್ಲೇ ಕೆಲವರು ನಿಶಾ ಪರವಾಗಿ ನಿಂತಿದ್ದಾರೆ.
ಕೆಲವರ ಪ್ರಕಾರ, ನಿಶಾ ಜೇಮ್ಸ್ ಬೆಂಗಳೂರು ಆಡಳಿತ ವಿಭಾಗದಲ್ಲಿ ಡಿಸಿಪಿಯಾಗಿದ್ದು ಎರಡು ವರ್ಷದಲ್ಲಿ ನಗರ ಪೊಲೀಸ್ ವ್ಯವಸ್ಥೆ ಸರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ವರ್ಗಾವಣೆಯಲ್ಲಿ ಪಾರದರ್ಶಕ ನಿಲುವು ಹೊಂದಿದ್ದ ನಿಶಾ ಜೇಮ್ಸ್ ಐದು ವರ್ಷ ಒಂದೇ ಠಾಣೆಯಲ್ಲಿ ಠಿಕಾಣಿ ಹೂಡಿದ್ದ ಪೊಲೀಸರ ಬುಡ ಅಲ್ಲಾಡಿಸಿದ್ದರು. ಜೊತೆಗೆ ಗನ್ ಲೈಸೆನ್ಸ್ ಪರವಾನಗಿ ಹಾಗೂ ನವಿಕರಣದಲ್ಲಿದ್ದ ಲಂಚಗುಳಿತನಕ್ಕೆ ಬ್ರೇಕ್ ಹಾಕಿದ್ದರು. ಇದಕ್ಕಾಗಿ ನಿಶಾ ಜೇಮ್ಸ್ ವಿರುದ್ಧ ಕೆಲವು ವಿಕೃತ ಮನಸ್ಥಿತಿಯ ಎಸ್ ಡಿಎ ಹಾಗೂ ಎಫ್‌ಡಿಎ ಸಿಬ್ಬಂದಿ ಷಡ್ಯಂತ್ರ ನಡೆಸಿದ್ದಾರೆ ಎಂದು ಜಾಲತಾಣದಲ್ಲಿ ಬರೆದಿದ್ದಾರೆ.
ಡಿಸಿಪಿ ಆಡಳಿತ ವಿಭಾಗದಿಂದ ನಿಶಾ ಜೇಮ್ಸ್ ಅವರನ್ನು ಎತ್ತಂಗಡಿ ಮಾಡಿಸಲು ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ನಿಶಾ ಜೇಮ್ಸ್ ಒಬ್ಬ ಮಹಿಳಾ ಅಧಿಕಾರಿ ಅನ್ನುವುದನ್ನೂ ನೋಡದೆ ಚಾರಿತ್ರ್ಯ ಹರಣವನ್ನೂ ಮಾಡುತ್ತಿದ್ದಾರೆ. ನಿಶಾ ಜೇಮ್ಸ್ ಗೆ ಮತ್ತೊಬ್ಬ ಐಪಿಎಸ್ ಅಧಿಕಾರಿ ಜೊತೆ ಸಂಬಂಧ ಕಟ್ಟಿ ಕೆಟ್ಟದಾಗಿ ಬರೆದು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ ಎನ್ನಲಾದ ದೂರಿನ ಪ್ರತಿಯನ್ನೂ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
ಜೊತೆಗೆ ನಿಶಾ ಜೇಮ್ಸ್ ಪತಿಯ ಹೆಸರನ್ನ ಉಲ್ಲೇಖಿಸಿ ಸಂಸಾರದಲ್ಲಿ ಹುಳಿ ಹಿಂಡುವ ಕೆಲಸವನ್ನೂ ಕೆಲವರು ಮಾಡುತ್ತಿದ್ದಾರಂತೆ. ಹೀಗಾಗಿ ಪೊಲೀಸ್ ಇಲಾಖೆಯ ಒಳಗಿದ್ದವರೂ ಸೇರಿ ಸಾಮಾಜಿಕ ಜಾಲತಾಣದಲ್ಲಿ ನಿಶಾ ಜೇಮ್ಸ್ ಫೋಟೋ ಹಾಕಿ we support you madam ಎಂದು ಅಭಿಯಾನ ಶುರು ಮಾಡಿದ್ದಾರೆ.
We support IPS Nisha James campaign starts on social media after she was falsely alleged of giving mental torture to police staffs after a complaint was filed at the commissioners office in Bengaluru.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
24-02-25 10:14 pm
HK News Desk
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
25-02-25 02:34 pm
Mangalore Correspondent
Puttur doctor, C Section, Mangalore: ಸಿಸೇರಿಯನ...
25-02-25 12:24 pm
Puttur News, Dr Anil Baipadithaya, hospital:...
24-02-25 02:50 pm
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
25-02-25 01:37 pm
HK News Desk
Delhi crime, Wife Murder: ತ್ರಿವೇಣಿ ಸಂಗಮದಲ್ಲಿ...
24-02-25 10:51 pm
Illegal drug supply, Mangalore: ಮಂಗಳೂರು ಜೈಲಿಗ...
24-02-25 09:43 pm
Bangalore crime, Police constable, Rape, Bomm...
24-02-25 07:08 pm
Sirsi Murder, KSRTC Bus, crime: ಶಿರಸಿ ; ಹತ್ತು...
23-02-25 03:42 pm