ಕಾಸು ಕೊಟ್ಟರಷ್ಟೇ ನೌಕರಿ ; ರಾಹುಲ್ ಗಾಂಧಿ ಟೀಕೆಗೆ ಸಿಎಂ ಬೊಮ್ಮಾಯಿ ತಿರುಗೇಟು, ಸಿದ್ದರಾಮಯ್ಯ ಸರಕಾರದ ಹಗರಣ ಬಿಚ್ಚಿಡುತ್ತೇನೆ ! 

18-10-22 07:05 pm       HK News Desk   ಕರ್ನಾಟಕ

ಸರ್ಕಾರಿ ನೌಕರಿಗೆ ಕರ್ನಾಟಕದಲ್ಲಿ ಕಾಸು ಕೊಡಲೇಬೇಕು ಎಂಬ ರಾಹುಲ್ ಗಾಂಧಿ ಟೀಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಆಗಿರುವ ಹಗರಣ ಮತ್ತು ಅವ್ಯವಹಾರ ಸಂಬಂಧ ಎಲ್ಲ ಮಾಹಿತಿ, ದಾಖಲೆಗಳನ್ನು ರಾಹುಲ್ ಗಾಂಧಿಯವರಿಗೆ ಮುಟ್ಟಿಸುತ್ತೇನೆ.

ಬೀದರ್, ಅ.18 : ಸರ್ಕಾರಿ ನೌಕರಿಗೆ ಕರ್ನಾಟಕದಲ್ಲಿ ಕಾಸು ಕೊಡಲೇಬೇಕು ಎಂಬ ರಾಹುಲ್ ಗಾಂಧಿ ಟೀಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಆಗಿರುವ ಹಗರಣ ಮತ್ತು ಅವ್ಯವಹಾರ ಸಂಬಂಧ ಎಲ್ಲ ಮಾಹಿತಿ, ದಾಖಲೆಗಳನ್ನು ರಾಹುಲ್ ಗಾಂಧಿಯವರಿಗೆ ಮುಟ್ಟಿಸುತ್ತೇನೆ. ಅವರು ಏನು ಶಿಕ್ಷೆ ಕೊಡುತ್ತಾರೆ ಕಾದು ನೋಡೋಣ ಎಂದು  ಸವಾಲು ಹಾಕಿದ್ದಾರೆ.

ಔರಾದ್ ಪಟ್ಟಣದಲ್ಲಿ ಮಂಗಳವಾರ 'ಜನಸಂಕಲ್ಪ ಯಾತ್ರೆ'ಗೆ ಚಾಲನೆ ನೀಡಿ ಮಾತನಾಡಿದ ಅವರು, 2016ರ ಶಿಕ್ಷಕರ ನೇಮಕಾತಿ ಹಗರಣ, ಪ್ರಾಸಿಕ್ಯೂಟರ್ ಮತ್ತು ಪೊಲೀಸ್ ನೇಮಕಾತಿಯಲ್ಲಿನ ಹಗರಣ ಸೇರಿ ಎಲ್ಲ ದಾಖಲೆಗಳನ್ನು ರಾಹುಲ್‌ ಗಾಂಧಿಗೆ ತಲುಪಿಸಲಿದ್ದೇನೆ. ಅರ್ಜಿ ಹಾಕದೇ ಶಿಕ್ಷಕರ ನೇಮಕಾತಿ ನಡೆದಿದ್ದು, ಇದರಲ್ಲಿ ಎಷ್ಟು ಪರ್ಸಂಟೇಜ್ ಹೊಡೆದಿರಬಹುದು? ಇದು ಕಾಂಗ್ರೆಸ್ ಸರ್ಕಾರದ ಆಡಳಿತ. ಆದರೆ, ನಾವು ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಉನ್ನತ ಅಧಿಕಾರಿಗಳು ಸೇರಿ ತಪ್ಪು ಮಾಡಿದ್ದವರನ್ನು ಯಾರಿಗೂ ಬಿಡಲಿಲ್ಲ ಎಂದರು.

My mother sent me sunscreen, but I don't use it: Rahul Gandhi on tanning |  Video - India Today

ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಹೆಚ್ಚಳ ಕಾಂಗ್ರೆಸ್ ಪಕ್ಷದ ಕೊಡುಗೆ ಎಂದು ಹೇಳಲು ರಾಹುಲ್ ಗಾಂಧಿಗೆ ಆತ್ಮಸಾಕ್ಷಿ ಬೇಕಲ್ಲವೇ ಎಂದು ಪ್ರಶ್ನಿಸಿದ ಸಿಎಂ ಬೊಮ್ಮಾಯಿ, ಮೀಸಲು ಹೆಚ್ಚಿಸಿ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿದ್ದಾಗ ರಾಜ್ಯದಲ್ಲಿ ಯಾರ ಸರ್ಕಾರ ಇತ್ತು, ನಿರ್ಣಯ ತೆಗೆದುಕೊಂಡವರು ಯಾರು ಎನ್ನುವುದನ್ನೂ ರಾಹುಲ್ ಅರಿಯಬೇಕು. ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ದೀನ ದಲಿತರಿಗೆ ಶೂನ್ಯ ಕೊಡುಗೆ ನೀಡಿದೆ ಎಂದು ಹೇಳಿದರು. 

ಸಮಾವೇಶದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ರಾಜ್ಯದ ಸಚಿವರಾದ ಗೋವಿಂದ ಕಾರಜೋಳ, ಪ್ರಭು ಚವ್ಹಾಣ, ಬಿ. ಶ್ರೀರಾಮಲು, ಭೈರತಿ ಬಸವರಾಜ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಸೇರಿದಂತೆ ಶಾಸಕರು, ಪ್ರಮುಖರು ಪಾಲ್ಗೊಂಡಿದ್ದರು.

CM Bommai at Bidar meeting, slams rahul and Siddaramaiah.