ನಲ್ವತ್ತು ಪರ್ಸೆಂಟ್ ಪ್ರಶ್ನೆ ಕೇಳಿದ್ದಕ್ಕೆ ಪತ್ರಕರ್ತರ ಮೇಲೆ ರೇಗಾಡಿದ ಈಶ್ವರಪ್ಪ ; ಹತ್ತು ಪರ್ಸೆಂಟ್ ಅಂತ ಮೋದಿ ಹೇಳಿದ್ದೇಗೆ ಎಂದಾಗ ಸಿಡಿಮಿಡಿ ! 

18-10-22 10:19 pm       HK News Desk   ಕರ್ನಾಟಕ

ನಲ್ವತ್ತು ಪರ್ಸೆಂಟ್ ಕಮಿಷನ್ ಬಗ್ಗೆ ಪ್ರಶ್ನೆ ಕೇಳಿದ ಪತ್ರಕರ್ತರ ಮೇಲೆ ಮಾಜಿ ಸಚಿವ ಈಶ್ವರಪ್ಪ ಕೆಂಡಾಮಂಡಲರಾಗಿ ಕಿಡಿಕಾರಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. 

ಬಾಗಲಕೋಟೆ, ಅ.18 : ನಲ್ವತ್ತು ಪರ್ಸೆಂಟ್ ಕಮಿಷನ್ ಬಗ್ಗೆ ಪ್ರಶ್ನೆ ಕೇಳಿದ ಪತ್ರಕರ್ತರ ಮೇಲೆ ಮಾಜಿ ಸಚಿವ ಈಶ್ವರಪ್ಪ ಕೆಂಡಾಮಂಡಲರಾಗಿ ಕಿಡಿಕಾರಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. 

40% ಅನ್ನೋದೆಲ್ಲ ಸುಳ್ಳು ಎಂದ ಈಶ್ವರಪ್ಪ ಅವರಲ್ಲಿ, ಹಾಗಾದ್ರೆ ಎಷ್ಟು ಪರ್ಸೆಂಟ್ ನಡಿತಾ ಇದೆ ಎನ್ನುವ ಪ್ರಶ್ನೆ ತೂರಲಾಯಿತು. ಇದಕ್ಕೆ ಸಿಡಿಮಿಡಿಗೊಂಡ, ಇದು ಮಾನ ಮರ್ಯಾದ ಇಲ್ಲದೇ ಇರೋರು ಕೇಳುವ ಪ್ರಶ್ನೆ.‌ ಅವರಿಗಂತೂ(ಕೆಂಪಣ್ಣ) ಜ್ಞಾನ ಇಲ್ಲ. ನೀವು ಮೈಮೇಲೆ ಜ್ಞಾನ ಇಟ್ಟುಕೊಂಡು ಕೇಳಬೇಕು. ಅವರು (ಕೆಂಪಣ್ಣ) ಕಾಂಗ್ರೆಸ್ ನಿಂದ ದುಡ್ಡು ತಿಂದು ಹೇಳಿಕೆ ಕೊಡ್ತಿರೋದು. ಆರೋಪ ಮಾಡಬೇಕಾದ್ರೆ ದಾಖಲೆ ಇರಬೇಕು ಎಂದು ಈಶ್ವರಪ್ಪ ವಾದಿಸಿದರು.‌

Opinion: A reality check for Indian PM Narendra Modi | Asia | An in-depth  look at news from across the continent | DW | 12.12.2018

2018 ರಲ್ಲಿ ನರೇಂದ್ರ ಮೋದಿ 10 ಶೇ. ಸರ್ಕಾರ ಎಂದಾಗ ಯಾವ ದಾಖಲೆ ಕೊಟ್ಟಿದ್ರಿ ಎನ್ನುವ ಪ್ರಶ್ನೆ ಕೇಳಲಾಯಿತು. ಇದಕ್ಕೆ ತಡಬಡಾಯಿಸಿದ ಈಶ್ವರಪ್ಪ, ಅದು ಮೋದಿ ಹತ್ರ ಏನು ದಾಖಲೆ ಇತ್ತು. ನೀವು ಅವರನ್ನ ಕೇಳಿ, ನನಗೇನು ಗೊತ್ತು...? ಎಂದರು. ಮತ್ತೆ ಆಗ ಚುನಾವಣೆ ಪ್ರಚಾರದಲ್ಲಿ 10% ಸರ್ಕಾರ ಅಂದಿದ್ದೇಕೆ ಎನ್ನುವ ಪ್ರಶ್ನೆಗೆ, ನಾನಂತೂ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 10 ಶೇ. ಸರ್ಕಾರ ಎಂದೂ ಯಾವತ್ತು ಮಾತಾಡಿಲ್ಲ. ಕಾರಣ ನನಗೇನು ಆ ಬಗ್ಗೆ ಗೊತ್ತಿರಲಿಲ್ಲ ಎಂದರು. 

My mother sent me sunscreen, but I don't use it: Rahul Gandhi on tanning |  Video - India Today

ಈಗ ನನ್ನ ಮೇಲೆ ರಾಹುಲ್ ಗಾಂಧಿ ಸಹ ಯಾಕೆ ರಾಜೀನಾಮೆ ಕೊಟ್ರಿ ಅಂದಿದ್ದಾರೆ. ಮರ್ಯಾದೆ ಪ್ರಶ್ನೆ, ಹಾಗೆ ನಾನು ರಾಜೀನಾಮೆ ಕೊಟ್ಟೆ. ನಾನು ತನಿಖೆಯಲ್ಲಿ ನಿರ್ದೋಷಿ ಎಂದು ಗೊತ್ತಾದ ಮೇಲೂ ನನ್ನ ಹೆಸರೇ ಗೊತ್ತಿಲ್ಲದ ರಾಹುಲ್ ಗಾಂಧಿ ಕಡೆಯಿಂದ ಮಾತಾಡಿಸಿದ್ರು. ಆ ಕೆಂಪಣ್ಣನಿಗೆ ಈಗಲೂ ಹೇಳ್ತೇನೆ. ನಿಮ್ಮ‌ಕಡೆ ಒಬ್ಬ ಮಂತ್ರಿ ಬಗ್ಗೆ ದಾಖಲೆ ಇದ್ರೆ ಕೊಡಿ. ಸಂತೋಷ ಪಾಟೀಲ ಮೇಲೆ ನಾನು ಕೇಸ್ ಹಾಕಿದೆ. ಪಾಪ ಅವನು ಸುಸೈಡ್ ಮಾಡಿಕೊಂಡ. ನಾನೇನು ಮಾಡ್ಲಿ...? ಎಂದು ಪ್ರಶ್ನಿಸಿದರು.‌

I will take political retirement if Kumaraswamy proves I met Yediyurappa:  Siddaramaiah | Deccan Herald

ಮತ್ತೆ ದಾಖಲೆ ಇಲ್ಲದೆ ಸಿದ್ದರಾಮಯ್ಯ ಅವರನ್ನ ಜೈಲಿಗೆ ಹಾಕ್ತೇವೆ ಎಂದು ನಿಮ್ಮ‌ಅಧ್ಯಕ್ಷರು ಹೇಗೆ ಹೇಳ್ತಾರೆ ಎನ್ನುವ ಪ್ರಶ್ನೆಗೆ, ಅವರ ಬಳಿ ದಾಖಲೆ ಇವೆ. ಆ ಸ್ಥಿತಿ ಬರುತ್ತೆ.. ನಮ್ಮ‌ ಅಧ್ಯಕ್ಷರು ಬುದ್ದಿವಂತ್ರು. ಒಂದೊಂದು ಪದ ಹೇಳಬೇಕಾದ್ರೂ ಕೇಸ್ ಸ್ಟಡಿ ಮಾಡ್ತಾರೆ ಎಂದು ಅಡಿಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ಹೇಳಿಕೆ ಕೊಟ್ಟು ಜಾಗ ಖಾಲಿ ಮಾಡಿದ್ದಾರೆ.

Eshwarappa becomes angry after a journalist asks a question on 40 percent commission in Bagalakot.