ಭೂತಕೋಲ ಹಿಂದು ಸಂಸ್ಕೃತಿ ಅಲ್ಲ ; 'ಕಾಂತಾರ' ಬಗ್ಗೆ ನಟ ಚೇತನ್ ವಿಭಿನ್ನ ಟ್ವೀಟ್ ! 

19-10-22 01:11 pm       Bangalore Correspondent   ಕರ್ನಾಟಕ

ನಟ, ನಿರ್ದೇಶಕ ರಿಷಬ್ ಶೆಟ್ಟಿ ಸಾರಥ್ಯದಲ್ಲಿ ಬಂದ ಕಾಂತಾರ ಸಿನಿಮಾ ದೇಶಾದ್ಯಂತ ಸದ್ದು ಮಾಡುತ್ತಿದೆ. ಎಲ್ಲಾ ಭಾಷೆಗಳ ನಟ- ನಟಿಯರಿಂದಲೂ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರ ನೋಡಿ ಸಿನಿಮಾ ಪ್ರೇಮಿಗಳು ಹಾಡಿ ಹೊಗಳುತ್ತಿದ್ದಾರೆ. ಈ ಮಧ್ಯೆ ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ ಎನ್ನುವ ಮೂಲಕ ನಟ ಚೇತನ್ ಕುಮಾರ್ ಸಿನಿಮಾ ಬಗ್ಗೆ ಟೀಕೆ ಮಾಡಿದ್ದಾರೆ. 

ಬೆಂಗಳೂರು, ಅ.19: ನಟ, ನಿರ್ದೇಶಕ ರಿಷಬ್ ಶೆಟ್ಟಿ ಸಾರಥ್ಯದಲ್ಲಿ ಬಂದ ಕಾಂತಾರ ಸಿನಿಮಾ ದೇಶಾದ್ಯಂತ ಸದ್ದು ಮಾಡುತ್ತಿದೆ. ಎಲ್ಲಾ ಭಾಷೆಗಳ ನಟ- ನಟಿಯರಿಂದಲೂ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರ ನೋಡಿ ಸಿನಿಮಾ ಪ್ರೇಮಿಗಳು ಹಾಡಿ ಹೊಗಳುತ್ತಿದ್ದಾರೆ. ಈ ಮಧ್ಯೆ ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ ಎನ್ನುವ ಮೂಲಕ ನಟ ಚೇತನ್ ಕುಮಾರ್ ಸಿನಿಮಾ ಬಗ್ಗೆ ಟೀಕೆ ಮಾಡಿದ್ದಾರೆ. 

ಭೂತಕೋಲ ಹಿಂದು ಸಂಸ್ಕೃತಿ ಅನ್ನುವ ರಿಷಬ್ ಶೆಟ್ಟಿ ಮಾತು ಸುಳ್ಳು. ಪಂಬದ, ನಲಿಕೆ, ಪರವರ ಬಹುಜನ ಸಂಪ್ರದಾಯಗಳಷ್ಟೇ ವೈದಿಕ ಬ್ರಾಹ್ಮಣರ ಹಿಂದೂ ಧರ್ಮಕ್ಕಿಂತ ಹಿಂದಿನಿಂದಲೇ ಬಂದಿದೆ. ಮೂಲ ನಿವಾಸಿಗಳ ಸಂಸ್ಕೃತಿಗಳನ್ನು ಪರದೆ ಮೇಲೆ ಮತ್ತು ಹೊರಗೆ ಸತ್ಯವಾಗಿಯೇ ಪ್ರದರ್ಶಿಸಬೇಕು ಎಂದು ಅವರು ಟ್ವೀಟ್ ಮಾಡಿದ್ದಾರೆ. 

ಈಗಾಗಲೇ ಕಾಂತಾರ ಸಿನಿಮಾ ಬಗ್ಗೆ ಕೆಲವು ಎಡಪಂಥೀಯರು ಟೀಕಿಸಿದ್ದು ಉರಿದುಕೊಳ್ಳುವ ರೀತಿ ಬರೆದುಕೊಂಡಿದ್ದಾರೆ.‌ ಈಗ ಎಡಚನಾಗಿ ಗುರುತಿಸಿರುವ ನಟ ಚೇತನ್ ಕುಮಾರ್ ಅದೇ ಧಾಟಿಯಲ್ಲಿ ಕೊಂಕು ಮಾತನ್ನಾಡಿದ್ದಾರೆ. ಚೇತನ್ ಟೀಕೆಗೆ ಜಾಲತಾಣದಲ್ಲಿ ಟೀಕೆ ಕೇಳಿಬಂದಿದ್ದು ಆತ ಪ್ರಚಾರಕ್ಕಾಗಿ ಇಂಥ ಹೇಳಿಕೆ ನೀಡುತ್ತಾರೆ ಎಂದು ಟೀಕಿಸಿದ್ದಾರೆ.

Actor Chetan Ahimsa raises contriversy on Kantara kovie says Bhutakola Is Not A Hindu Culture.