ಪಡಿತರ ಚೀಟಿಯಲ್ಲಿ ಯೇಸು ಕ್ರಿಸ್ತನ ಚಿತ್ರ, ಕನಕಪುರದಲ್ಲಿ ಮತ್ತೊಂದು ವಿವಾದ, ಇಲಾಖೆಗೆ ಸಂಬಂಧ ಇಲ್ಲವೆಂದ ಅಧಿಕಾರಿಗಳು

19-10-22 10:33 pm       HK News Desk   ಕರ್ನಾಟಕ

ರೇಶನ್ ಕಾರ್ಡಿನಲ್ಲಿ ಯೇಸು ಕ್ರಿಸ್ತನ ಚಿತ್ರವನ್ನು ಮುದ್ರಿಸಿ ಹಂಚಿಕೆ ಮಾಡಿರುವ ಬೆಳವಣಿಗೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ನಡೆದಿದ್ದು, ಹಿಂದು ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿದೆ.

ರಾಮನಗರ, ಅ.19: ರೇಶನ್ ಕಾರ್ಡಿನಲ್ಲಿ ಯೇಸು ಕ್ರಿಸ್ತನ ಚಿತ್ರವನ್ನು ಮುದ್ರಿಸಿ ಹಂಚಿಕೆ ಮಾಡಿರುವ ಬೆಳವಣಿಗೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ನಡೆದಿದ್ದು, ಹಿಂದು ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹುಟ್ಟೂರು ದೊಡ್ಡ ಆಲಹಳ್ಳಿ, ಉಯ್ಯಂಬಳ್ಳಿ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಈ ರೀತಿಯ ಪಡಿತರ ಚೀಟಿಗಳನ್ನು ಮುದ್ರಿಸಿ ಹಂಚಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಪಡಿತರ ಚೀಟಿಯ ಹಿಂಭಾಗದಲ್ಲಿ ಯೇಸು ಕ್ರಿಸ್ತನ ಭಾವಚಿತ್ರ ಮುದ್ರಿಸಲಾಗಿದ್ದು, ಹಿಂದು ಸಂಘಟನೆಗಳು, ಬಿಜೆಪಿ ನಾಯಕರ ಆಕ್ರೋಶಕ್ಕೆ ತುತ್ತಾಗಿದೆ. ವರ್ಷದ ಹಿಂದೆ ರಾಮನಗರ ಜಿಲ್ಲೆಯ ಹಾರೋಬೆಲೆಯ ಮುನೇಶ್ವರಿ ಸ್ವಾಮಿ ಬೆಟ್ಟದಲ್ಲಿ ಏಸು ಪ್ರತಿಮೆ ಸ್ಥಾಪನೆ ವಿವಾದ ಉಂಟಾಗಿತ್ತು.

ಇದೀಗ ಮತ್ತೊಂದು ವಿವಾದ ಕೇಳಿಬಂದಿದ್ದು, ಇದರ ಫೋಟೋ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರ ಬೆನ್ನಲ್ಲೇ ಶ್ರೀರಾಮ ಸೇನೆ, ಬಿಜೆಪಿ ನಾಯಕರು ಜಿಲ್ಲಾ ಆಹಾರ ಮತ್ತು ನಾಗರಿಕೆ ಪೂರೈಕೆ ಇಲಾಖೆಗೆ ದೂರು ಸಲ್ಲಿಸಿದ್ದು, ತಪ್ಪಿತಸ್ಥರ ವಿರುದ್ಧ ತನಿಖೆಗೆ ಆಗ್ರಹಿಸಿದ್ದಾರೆ. ಅಲ್ಲದೆ, ಈ ಫೋಟೋಗಳನ್ನು ದೊಡ್ಡ ಆಲಹಳ್ಳಿಯ ಪುಷ್ಪಾ ಸ್ಟುಡಿಯೋದಲ್ಲಿ ಮುದ್ರಣ ಮಾಡಲಾಗಿದೆ ಎನ್ನಲಾಗುತ್ತಿದೆ. ಹಿಂಭಾಗದಲ್ಲಿ ಸ್ಟುಡಿಯೋ ಹೆಸರು ಇದೆ. ಇದೇ ವೇಳೆ, ಈ ಫೋಟೋ ಅಸಲಿಯೋ, ನಕಲಿಯೋ ಅನ್ನುವ ಅನುಮಾನವೂ ವ್ಯಕ್ತವಾಗಿದೆ.

ಈಗ ಪಡಿತರ ಚೀಟಿಗಳನ್ನು ಕೊಡಲಾಗುತ್ತಿಲ್ಲ. ಕಳೆದ ಎರಡು ವರ್ಷದಿಂದ ರೇಶನ್ ಕಾರ್ಡ್ ಪಾಸ್ ಬುಕ್ ರದ್ದುಪಡಿಸಲಾಗಿದ್ದು, ಥಂಬ್ ಕೊಟ್ಟು ಆಹಾರ ಧಾನ್ಯ ಪಡೆಯುವ ಕ್ರಮ ಅನುಸರಿಸಲಾಗುತ್ತಿದೆ. ಅಂಥದರಲ್ಲಿ ಇಂಥ ಕಾರ್ಡ್ ಬಂದಿದ್ದು ಹೇಗೆ ಎಂದು ಅಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಹಾರ ಇಲಾಖೆ ಅಧಿಕಾರಿ, ಇದಕ್ಕೂ ಇಲಾಖೆಗೂ ಸಂಬಂಧ ಇಲ್ಲ. ಅದು ಲ್ಯಾಮಿನೇಶನ್ ಮಾಡಿಕೊಳ್ಳುವ ವೇಳೆ ಮಾಡಿದ್ದಿರಬಹುದು. ಇಲಾಖೆಯಿಂದ ಅಚ್ಚು ಹಾಕಿಸಿದ್ದಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

Controversy erupted in Karnataka's Ramnagar district after photos showing ration cards displaying the images of Jesus Christ and Goddess Lakshmi went viral on social media.The incident took place in Dodda Alanahalli village, the birthplace of the state's Congress President D.K. Shivakumar.Hindu organisations have condemned the incident and also demanded an investigation. The Sri Ram Sena has said that it would take up the matter with the District Commissioner.