ಬ್ರೇಕಿಂಗ್ ನ್ಯೂಸ್
20-10-22 12:39 pm Bangalore Correspondent ಕರ್ನಾಟಕ
ಬೆಂಗಳೂರು, ಅ.20 : ಪಕ್ಷಕ್ಕೆ ಸತತವಾಗಿ ಎದುರಾದ ಸೋಲು, ದೇಶ ಮಟ್ಟದಲ್ಲಿ ಬಿಜೆಪಿ ಸರಕಾರದ ವಿರುದ್ಧ ಜನಾಭಿಪ್ರಾಯ ಬದಲಾವಣೆ, ಪಕ್ಷದಲ್ಲಿ ನಾಯಕತ್ವ ಕೊರತೆ, ಇವೆಲ್ಲವುಗಳ ಮಧ್ಯೆ 24 ವರ್ಷಗಳ ನಂತರ ಗಾಂಧಿ ಕುಟುಂಬ ಹೊರತಾದ ಮತ್ತು ದಲಿತ ನಾಯಕರೊಬ್ಬರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿರುವುದು ರಾಷ್ಟ್ರ ಮಟ್ಟದಲ್ಲಿ ಬಿಜೆಪಿಗೆ ಹೊಸ ಸವಾಲುಗಳನ್ನು ತಂದೊಡ್ಡಲಿದೆ ಎನ್ನುವ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ಕೇಳಿಬಂದಿದೆ.
ಕಾಂಗ್ರೆಸ್ ಕುಟುಂಬ ಆಧಾರಿತ ಪಕ್ಷ, ಕುಟುಂಬ ರಾಜಕಾರಣ ಮಾಡಿಕೊಂಡು ಬಂದಿರುವ ಪಕ್ಷ ಎಂದು ಪ್ರಧಾನಿ ಮೋದಿಯಿಂದ ಹಿಡಿದು ರಾಷ್ಟ್ರ, ರಾಜ್ಯ ನಾಯಕರು ಆರೋಪ ಮಾಡುತ್ತ ಬಂದಿರುವ ಸಂದರ್ಭದಲ್ಲಿ ಗಾಂಧಿ ಕುಟುಂಬಕ್ಕೆ ಹೊರತಾದ ಮೇರು ವ್ಯಕ್ತಿತ್ವದ ಮಲ್ಲಿಕಾರ್ಜುನ ಖರ್ಗೆ ಆ ಸ್ಥಾನಕ್ಕೇರಿರುವುದು ಹೊಸ ಸವಾಲು ಎನ್ನಲಾಗುತ್ತಿದೆ. ಇದರಿಂದ ಕುಟುಂಬ ರಾಜಕಾರಣದ ಆರೋಪಕ್ಕೆ ರಾಷ್ಟ್ರ ಮಟ್ಟದಲ್ಲಿ ಅಂತ್ಯ ಸಿಗಬಹುದು ಎನ್ನುವ ವಾದವೂ ಕೇಳಿಬಂದಿದೆ. ಜೊತೆಗೆ, ಕಾಂಗ್ರೆಸ್ ಪಕ್ಷ ಅಧ್ಯಕ್ಷ ಆಯ್ಕೆಗೆ ಆಯ್ದುಕೊಂಡ ರೀತಿ ಹೆಚ್ಚು ಆಸಕ್ತಿಕರ. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಆಂತರಿಕವಾಗಿ ಕಾಂಗ್ರೆಸ್ ಹೆಚ್ಚು ಪ್ರಜಾಪ್ರಭುತ್ವವಾದಿ ಎಂಬುದನ್ನು ತೋರಿಸಿದೆ. ಪಾರದರ್ಶಕತೆ ಮತ್ತು ಪಕ್ಷದಲ್ಲಿನ ವ್ಯವಸ್ಥೆ ಸರಿಯಿಲ್ಲ ಎಂಬ ಆರೋಪಗಳ ಮಧ್ಯೆ ಕಾಂಗ್ರೆಸ್ ಸಾಂಸ್ಥಿಕ ಚುನಾವಣೆಯ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದು ವಿರೋಧಿ ಪಾಳಯ ಬಿಜೆಪಿಗೆ ಸವಾಲಿನದ್ದೇ ಸರಿ. ಬಿಜೆಪಿಯೆಂಬ ಮಹಾ ಸಾಗರದಲ್ಲಿ ಹಿಂದಿನಿಂದಲೂ ಆಯ್ಕೆ ಎನ್ನುವ ಪದಕ್ಕೆ ಜಾಗ ಇರಲಿಲ್ಲ. ನಿಯೋಜನೆ, ನೇರ ನೇಮಕದಿಂದಲೇ ಎಲ್ಲ ಘಟಕಗಳ ಅಧ್ಯಕ್ಷರ ಆಯ್ಕೆ ಆಗುತ್ತಾ ಬಂದಿದ್ದು. ಹೀಗಾಗಿ ಆಂತರಿಕ ಪ್ರಜಾಪ್ರಭುತ್ವ ಮಾದರಿಯ ಆಯ್ಕೆ ಎನ್ನೋದು ಬಿಜೆಪಿ ಪಾಲಿಗೆ ಸವಾಲಿನ ಹೊಡೆತ.
ಮೊನ್ನೆಯಷ್ಟೇ ಜೆಪಿ ನಡ್ಡಾ ಅವರನ್ನು ಮತ್ತೊಂದು ಅವಧಿಗೆ ಮುಂದುವರಿಸಿದ ನಡುವೆ, ಬಿಜೆಪಿ ಯಾವಾಗ ತನ್ನ ಅಧ್ಯಕ್ಷರನ್ನು ಆಯ್ಕೆ ಮಾಡುತ್ತದೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದು ಸವಾಲು ಒಡ್ಡುವ ರೀತಿಯದ್ದು. ಮತ್ತೊಂದು, ಖರ್ಗೆಯವರು ದಲಿತ ಅಭ್ಯರ್ಥಿ ಎಂಬುದು ಕೂಡ ಬಿಜೆಪಿಗೆ ಸವಾಲಿನದ್ದು. ಮುಂದಿನ ವರ್ಷ ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತದೆ. ಮಲ್ಲಿಕಾರ್ಜುನ ಖರ್ಗೆಯವರ ನಾಯಕತ್ವ ಖಂಡಿತವಾಗಿಯೂ ರಾಜ್ಯದ ಚುನಾವಣೆ ಮೇಲೆ ಪರಿಣಾಮ ಬೀರಲಿದೆ.
ಕರ್ನಾಟಕದಲ್ಲಿ ಶೇಕಡಾ 20ರಷ್ಟು ದಲಿತರಿದ್ದಾರೆ. ಆ ಪೈಕಿ ಹೆಚ್ಚಿನವು ಕಾಂಗ್ರೆಸ್ ಪರವಾಗಿಯೇ ಇದ್ದರೂ ಉತ್ತರ ಕರ್ನಾಟಕದಲ್ಲಿ ಕಳೆದ ಚುನಾವಣೆಯಲ್ಲಿ ಬದಲಾವಣೆ ಗಾಳಿ ಬೀಸಿತ್ತು. ಬಿಜೆಪಿ ದೇಶದ ರಾಷ್ಟ್ರಪತಿಯಾಗಿ ದಲಿತ ಮಹಿಳೆಯನ್ನು ಆಯ್ಕೆ ಮಾಡಿದ್ದಕ್ಕೆ ಪ್ರತಿಯಾಗಿ ಕಾಂಗ್ರೆಸ್ ರಾಷ್ಟ್ರೀಯ ಘಟಕದ ಅಧ್ಯಕ್ಷರನ್ನಾಗಿ ದಲಿತ ನಾಯಕರನ್ನು ಆಯ್ಕೆ ಮಾಡಿದೆ. ಆಮೂಲಕ ಬಹುಕಾಲದ ಬಳಿಕ ಸಮರ್ಥ ದಾಳವನ್ನು ಕಾಂಗ್ರೆಸ್ ಉರುಳಿಸಿದಂತೆ ಕಂಡುಬರುತ್ತಿದೆ. ಮಲ್ಲಿಕಾರ್ಜುನ ಖರ್ಗೆಯವರು ಪಕ್ಷವನ್ನು ಹೇಗೆ ಸಂಘಟಿಸುತ್ತಾರೆ. ಮುಂದಿನ ಅವರ ಕ್ರಮಗಳೇನು ಎಂಬುದಷ್ಟೆ ಕುತೂಹಲ.
ಹಲವಾರು ಘಟಾನುಘಟಿ ನಾಯಕರ ಒತ್ತಡದ ಬಳಿಕ ಈಗಷ್ಟೇ ಅಧ್ಯಕ್ಷರ ಆಯ್ಕೆಯಾಗಿದೆ. ಪ್ರಜಾಪ್ರಭುತ್ವ ಮಾದರಿ ಆಯ್ಕೆಗೆ ಒತ್ತಡ ಹೇರಿದ್ದೇ ಪಕ್ಷದ ಒಳಗೆ ಬಂಡೆದ್ದು ನಿಂತಿದ್ದ ನಾಯಕರು. ಆ ಪೈಕಿ ಹೆಚ್ಚಿನವರು ಖರ್ಗೆ ಜೊತೆ ಕೈಜೋಡಿಸಿದ್ದಾರೆ. ಖರ್ಗೆಯವರೇ ರಾಷ್ಟ್ರ ಮಟ್ಟದಲ್ಲಿ ಸರ್ವಸದಸ್ಯರ ಅಧಿವೇಶನವನ್ನು ನಡೆಸಲಿದ್ದಾರೆ. ಅಲ್ಲಿ ಹೊಸತಾಗಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಆಯ್ಕೆ ಆಗಲಿದೆ. ಇದು ಪಕ್ಷದಲ್ಲಿ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿರುತ್ತದೆ. ರಾಹುಲ್ ಗಾಂಧಿ ಹಿಡಿತ ಏನಿದ್ದರೂ, ಪಕ್ಷದ ಈ ಸಮಿತಿಯಲ್ಲಿ ಗಟ್ಟಿ ನಿರ್ಧಾರಗಳು ಹೊರ ಹೊಮ್ಮಿದರೆ ಬಿಜೆಪಿಗೆ ಸವಾಲಾಗುವ ಸ್ಥಿತಿ ಎದುರಾಗುವುದರಲ್ಲಿ ಸಂಶಯವಿಲ್ಲ.
ಇದಲ್ಲದೆ, ಪಕ್ಷದ ಸಾಂಸ್ಥಿಕ ಚುನಾವಣೆಗಳು ಮತ್ತು ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯು ನಿಸ್ಸಂದೇಹವಾಗಿ ಅಸ್ಥಿರ ಸಂಘಟನೆಗೆ ಮರುಜೀವ ತಂದುಕೊಟ್ಟಿದೆ. ಬಿಜೆಪಿಯಿಂದಾಗಿ ಸರಣಿ ಚುನಾವಣಾ ಸೋಲನ್ನು ಎದುರಿಸಿದ ನಂತರ ಕಾಂಗ್ರೆಸ್ ಪಕ್ಷವು ಅಂತಿಮವಾಗಿ ಸಮತೋಲನದತ್ತ ಹೆಜ್ಜೆ ಹಾಕತೊಡಗಿದೆ. ಕೇಂದ್ರ ಮಟ್ಟದಲ್ಲಿ ಚುಕ್ಕಾಣಿ ಇಲ್ಲದಿರುವುದು, ಗಟ್ಟಿ ನಿರ್ಧಾರಗಳಿಗೆ ತಡೆಯಾಗಿದ್ದುದೇ ಪಕ್ಷದ ಕಳಪೆ ಸಾಧನೆಗೆ ಕಾರಣವಾಗಿತ್ತು. ಹಾಗೆ ನೋಡಿದರೆ, ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯೇ ಏರಿದ್ದಾರೆ ಎನ್ನಬೇಕು. ಸಮಚಿತ್ತ, ಶಾಂತ ಸ್ವಭಾವದ ವ್ಯಕ್ತಿಯ ಚುಕ್ಕಾಣಿ ರಾಷ್ಟ್ರ ಮಟ್ಟದಲ್ಲಿ ಪಕ್ಷಕ್ಕೆ ಹೊಸ ಸ್ವರೂಪಕ್ಕೆ ಕಾರಣವಾಗಬಲ್ಲದು ಎನ್ನುವ ಮಾತುಗಳು ರಾಜಕೀಯದಲ್ಲಿ ಕೇಳಿಬರುತ್ತಿವೆ.
In what can be said to be a historical moment for the Indian National Congress, senior leader Mallikarjun Kharge has been elected as the President of the Indian National Congress, becoming the first member outside the Gandhi family to helm the party, in 24 years. When the results of the Congress presidential polls were announced on October 19, Wednesday, 80-year-old Kharge, who is a 9-time MLA from Karnataka’s Gulbarga, emerged victorious, by securing a margin of 6,285 votes over Shashi Tharoor, MP from Thiruvananthapuram. While Kharge received 7,897 votes, Tharoor got 1,072 votes.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am