ಕಾಂತಾರ ಎಫೆಕ್ಟ್ ; 60 ವರ್ಷ ಮೇಲ್ಪಟ್ಟ ದೈವ ನರ್ತಕರಿಗೆ ಪ್ರತಿ ತಿಂಗಳು ಮಾಸಾಶನ ; ಸಚಿವ ಸುನಿಲ್ 

20-10-22 01:15 pm       Bangalore Correspondent   ಕರ್ನಾಟಕ

60 ವರ್ಷ ಮೇಲ್ಪಟ್ಟ ದೈವ ನರ್ತಕರಿಗೆ ಪ್ರತಿ ತಿಂಗಳು ಎರಡು ಸಾವಿರ ರೂ. ಮಾಸಾಶನ ನೀಡಲು ರಾಜ್ಯ ಸರಕಾರ ತೀರ್ಮಾನಿಸಿದೆ ಎಂದು ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.‌

ಬೆಂಗಳೂರು, ಅ.20: 60 ವರ್ಷ ಮೇಲ್ಪಟ್ಟ ದೈವ ನರ್ತಕರಿಗೆ ಪ್ರತಿ ತಿಂಗಳು ಎರಡು ಸಾವಿರ ರೂ. ಮಾಸಾಶನ ನೀಡಲು ರಾಜ್ಯ ಸರಕಾರ ತೀರ್ಮಾನಿಸಿದೆ ಎಂದು ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.‌

ಕಾಂತಾರ ಚಿತ್ರದ ಹಿನ್ನೆಲೆಯಲ್ಲಿ ದೈವಾರಾಧನೆ ಬಗ್ಗೆ ಮಾತನಾಡಿದ ಸಚಿವರು, ದೈವಾರಾಧನೆ ನಮ್ಮ ತುಳುನಾಡಿನ ಸಾಂಸ್ಕೃತಿಕ ಪ್ರತಿಬಿಂಬ. ಇಂತಹ ಆಚರಣೆಗಳ ಬಗ್ಗೆ ಯಾರೂ ಕೆಟ್ಟದಾಗಿ ಮಾತನಾಡಬಾರದು. ಭೂತಾರಾಧನೆಯೂ ಹಿಂದೂ ಸಂಸ್ಕೃತಿಯ ಭಾಗ, ಯಾರೋ ಒಬ್ಬರು ಹೇಳಿದ ಮಾತ್ರಕ್ಕೆ ಆ ಸಂಸ್ಕೃತಿ ನಮ್ಮಿಂದ ದೂರವಾಗಲ್ಲ‌ ಎಂದು ಸುನಿಲ್ ಕುಮಾರ್ ಹೇಳಿದ್ದಾರೆ. ಇದೇ ವೇಳೆ, 60 ವರ್ಷ ಮೇಲ್ಪಟ್ಟ ದೈವ ನರ್ತನ ಮಾಡುವವರಿಗೆ ರಾಜ್ಯ ಸರ್ಕಾರ ಪ್ರತಿ ತಿಂಗಳು 2000 ಮಾಸಾಶನ ನೀಡಲಿದೆ ಎಂದಿದ್ದಾರೆ.‌

Kantara Box Office Collection Day 6: Witnesses a huge jump on Dussehra -  JanBharat Times

ಕಾಂತಾರ ಸಿನಿಮಾ ಬಗ್ಗೆ ಬೆಂಗಳೂರಲ್ಲಿ ಮಾತನಾಡಿದ್ದ ನಟ ಚೇತನ್, ಭೂತಕೋಲ ಹಿಂದೂ ಧರ್ಮದಲ್ಲಿ ಬರೋದಿಲ್ಲ ಎಂದು ತನ್ನ ಪೋಸ್ಟ್ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ದೈವ ನರ್ತಕರ ಪರ ನಿಂತಿದ್ದಲ್ಲದೆ, ಮಾಸಾಶನ ಕೊಡುವುದಾಗಿ ಹೇಳಿದೆ. 

ನಟ ಚೇತನ್ ಹೇಳಿಕೆಯ ಬಗ್ಗೆ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಬಹುತೇಕರು ಚೇತನ್ ಮಾನಸಿಕ ಸ್ಥಿಮಿತ ಕಳಕೊಂಡಿದ್ದಾಗಿ ಬರೆದುಕೊಂಡಿದ್ದಾರೆ. ‌

Kantara effect, Karnataka Minister Sunil Kumar announces 2 thousand pension for daiva narthaka.