ಪಿಎಫ್ಐ ಬ್ಯಾನ್ ಆಗಿದ್ದರೂ ಮಂಗಳೂರಿನಲ್ಲಿ ಸಂಚು ರೂಪಿಸ್ತಿದ್ದ ಐವರ ಬಂಧನ ; ಎಡಿಜಿಪಿ ಅಲೋಕ್ ಕುಮಾರ್ 

20-10-22 10:20 pm       HK News Desk   ಕರ್ನಾಟಕ

ಪಿಎಫ್​ಐ ಸಂಘಟನೆ ನಿಷೇಧವಾಗಿದ್ದರೂ, ಸದ್ದಿಲ್ಲದೇ ಸಂಚು ರೂಪಿಸುತ್ತಿದ್ದ ಪಿಎಫ್​ಐಗೆ ಸೇರಿದ ಇನ್ನೂ ಐವರನ್ನು ಮಂಗಳೂರಿನಲ್ಲಿ ದಸ್ತಗಿರಿ ಮಾಡಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ. 

ಹಾಸನ, ಅ.20 : ಪಿಎಫ್​ಐ ಸಂಘಟನೆ ನಿಷೇಧವಾಗಿದ್ದರೂ, ಸದ್ದಿಲ್ಲದೇ ಸಂಚು ರೂಪಿಸುತ್ತಿದ್ದ ಪಿಎಫ್​ಐಗೆ ಸೇರಿದ ಇನ್ನೂ ಐವರನ್ನು ಮಂಗಳೂರಿನಲ್ಲಿ ದಸ್ತಗಿರಿ ಮಾಡಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ. 

ಹಾಸನದಲ್ಲಿ ಹಾಸನಾಂಬೆ ದರ್ಶನ ಮತ್ತು ವ್ಯವಸ್ಥೆ ಬಗ್ಗೆ ಪರಿಶೀಲನೆಗೆ ಆಗಮಿಸಿದ್ದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್, ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಬಂಧಿತ ಐವರನ್ನು ವಿಚಾರಣೆ ನಡೆಸಲಾಗುತ್ತಿದೆ. ಪಿಎಫ್ಐ ಬ್ಯಾನ್ ಆದರೂ ಈ ಐದು ಜನ ಒಂದು ಕಡೆ ಕುಳಿತು ಸಂಚು ಮಾಡುತ್ತಿದ್ದರು. ವಿಶೇಷವಾಗಿ ಆರೋಪಿಗಳಿಗೆ ಯಾರ ಜೊತೆ ಲಿಂಕ್ ಇತ್ತು. ಎಲ್ಲೆಲ್ಲಿ ತರಬೇತಿ ನೀಡುತ್ತಿದ್ದರು. ಯಾವ ರೀತಿ ಸಂಚು ರೂಪಿಸಿದ್ದರು ಎಂಬಿತ್ಯಾದಿ ಆಯಾಮಗಳಲ್ಲಿ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಇವರ ಜೊತೆ ಯಾರ್ಯಾರು ಇದ್ದಾರೆಂದು ಪತ್ತೆ ಹಚ್ಚಬೇಕಿದೆ ಎಂದರು. 

ಕಾನೂನು ಇತಿಮಿತಿಯಲ್ಲಿ ಪ್ರತಿಭಟನೆ ಮಾಡಿದರೆ ನಮ್ಮ ಕಡೆಯಿಂದ ತಡೆ ಇರುವುದಿಲ್ಲ. ಕಾನೂನು ಮೀರಿ ಯಾರಾದರು ಪ್ರತಿಭಟನೆ ಮಾಡಿದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು

Big jolt to PFI as IT Dept cancels its 80G registration - Details | India  News

ಪಿಎಫ್​ಐ ಸಂಘಟನೆ ಬ್ಯಾನ್ ಆಗಿದ್ದರೂ ಅವರ ಮೇಲೆ ನಾವು ನಿಗಾ ಇಟ್ಟಿದ್ದೇವೆ. ಕರಾವಳಿ ಭಾಗ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ಮೈಸೂರು, ದಾವಣಗೆರೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ನಮ್ಮ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಎಲ್ಲಾ ವಿಚಾರಗಳನ್ನು ತನಿಖಾಧಿಕಾರಿಗಳು ಕಲೆ ಹಾಕುತ್ತಿದ್ದಾರೆ.

ಪುತ್ತೂರಿನಲ್ಲಿ ನಡೆಯುತ್ತಿದ್ದ ತರಬೇತಿ ‌ಬಿಟ್ಟು ಬೇರೆ ಬೇರೆ ಕಡೆ ಎಲ್ಲೆಲ್ಲಿ ತರಬೇತಿ ನಡೆಯುತ್ತಿದೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಅಲೋಕ್ ಕುಮಾರ್ ಹೇಳಿದರು. ಇದಕ್ಕೂ ಮುನ್ನ ಎಡಿಜಿಪಿ ಅಲೋಕ್‌ಕುಮಾರ್ ಅವರು ಹಾಸನಾಂಬೆ ದೇವಿ ದರ್ಶನ ಪಡೆದರು. ಅಲ್ಲಿ ದರ್ಶನಕ್ಕೆ ಕೈಗೊಂಡ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು. ಈ ವೇಳೆ ಹಾಸನ ಎಸ್​ಪಿ ಹರಿರಾಂ ಶಂಕರ್, ಎ‌ಎಸ್‌ಪಿ ಮಿಥುನ್, ಡಿವೈಎಸ್‌ಪಿ ಉದಯ್‌ಭಾಸ್ಕರ್ ಇದ್ದರು.

Five PFI members of Mangalore have been arrested for plotting even after the ban of PFI in India, says ADGP Alok Kumar in Hassan.