ಪಿಎಫ್ಐನಲ್ಲಿ ಬಂಧಿತರಿಗೆ ಅಲ್ ಖಾಯಿದಾ, ಬಾಂಗ್ಲಾ ಉಗ್ರರ ಸಂಪರ್ಕ ; ಪೊಲೀಸರ ವಿಚಾರಣೆಯಲ್ಲಿ ಬಹಿರಂಗ

21-10-22 02:08 pm       Bangalore Correspondent   ಕರ್ನಾಟಕ

ಇತ್ತೀಚೆಗೆ ರಾಜ್ಯದಲ್ಲಿ ಬಂಧಿತರಾಗಿದ್ದ ಪಿಎಫ್ಐ ಸಂಘಟನೆಗೆ ಸೇರಿದ ಏಳು ಮಂದಿ ಪ್ರಮುಖರು ಪಾಕಿಸ್ಥಾನದ ಅಲ್ ಖಾಯಿದಾ ಮತ್ತು ಬಾಂಗ್ಲಾದೇಶದ ಅನ್ಸಾರುಲ್ಲಾ ಬಾಂಗ್ಲಾ ಟೀಂ(ಎಬಿಟಿ) ಜೊತೆಗೆ ಸಂಪರ್ಕ ಹೊಂದಿದ್ದರು ಅನ್ನುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.

ಬೆಂಗಳೂರು, ಅ.21: ಇತ್ತೀಚೆಗೆ ರಾಜ್ಯದಲ್ಲಿ ಬಂಧಿತರಾಗಿದ್ದ ಪಿಎಫ್ಐ ಸಂಘಟನೆಗೆ ಸೇರಿದ ಏಳು ಮಂದಿ ಪ್ರಮುಖರು ಪಾಕಿಸ್ಥಾನದ ಅಲ್ ಖಾಯಿದಾ ಮತ್ತು ಬಾಂಗ್ಲಾದೇಶದ ಅನ್ಸಾರುಲ್ಲಾ ಬಾಂಗ್ಲಾ ಟೀಂ(ಎಬಿಟಿ) ಜೊತೆಗೆ ಸಂಪರ್ಕ ಹೊಂದಿದ್ದರು ಅನ್ನುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.

ಸೆ.22ರಂದು ಎನ್ಐಎ ಮತ್ತು ರಾಜ್ಯ ಪೊಲೀಸರು ನಡೆಸಿದ ಜಂಟಿ ದಾಳಿಯಲ್ಲಿ 15ಕ್ಕೂ ಹೆಚ್ಚು ಮಂದಿಯನ್ನು ರಾಜ್ಯದಲ್ಲಿ ಬಂಧಿಸಲಾಗಿತ್ತು. ಈ ಪೈಕಿ ಅನೀಸ್ ಅಹ್ಮದ್, ಅಫ್ಸರ್ ಪಾಷಾ, ಅಬ್ದುಲ್ ವಹೀದ್ ಸೇಠ್, ಯಾಸೀರ್ ಅರ್ಫತ್ ಹಸನ್, ಮೊಹಮ್ಮದ್ ಶಾಕೀರ್ ಅಲಿಯಾಸ್ ಶಾಕೀಫ್, ಮೈಸೂರಿನ ಮೊಹಮ್ಮದ್ ಫಾರೂಕ್ ಉರ್ ರೆಹಮಾನ್, ಕಲಬುರಗಿಯ ಶಾಹೀದ್ ನಾಸೀರ್ ಎಂಬವರು ಉಗ್ರರ ಜೊತೆ ನಂಟು ಹೊಂದಿರುವುದು ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಆರ್.ಟಿ ನಗರದಲ್ಲಿ ಬಂಧಿತನಾಗಿದ್ದ ಯಾಸೀರ್ ಅರ್ಫತ್ ಅಲಿಯಾಸ್ ಯಾಸೀರ್ ಹಸನ್ ನನ್ನು ಹೆಚ್ಚಿನ ವಿಚಾರಣೆಗೆ ಎನ್ಐಎ ಅಧಿಕಾರಿಗಳು ದೆಹಲಿಗೆ ಕರೆದೊಯ್ದಿದ್ದಾರೆ.

NIA conducts raids at more than 50 locations in north India to crackdown on  gangsters - India Today

ಸೆ.22ರಂದು ದೇಶಾದ್ಯಂತ ಎನ್ಐಎ ಅಧಿಕಾರಿಗಳು ಪಿಎಫ್ಐ ವಿರುದ್ಧ ಕಾರ್ಯಾಚರಣೆ ನಡೆಸಿದ್ದರು. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲಿ ಪ್ರಮುಖವಾಗಿ ಈ ಕಾರ್ಯಾಚರಣೆ ನಡೆದಿತ್ತು. ಬೆಂಗಳೂರಿನಲ್ಲಿ ಬಂಧಿತರಾಗಿದ್ದ ನಾಲ್ವರು ನೀಡಿದ್ದ ಮಾಹಿತಿ ಆಧರಿಸಿ ಆಬಳಿಕ ಅಸ್ಸಾಂನಲ್ಲಿ ಕಾರ್ಯಾಚರಣೆ ನಡೆಸಿದ್ದ ಅಧಿಕಾರಿಗಳು, ಅಲ್ಲಿನ ಪಿಎಫ್ಐ ರಾಜ್ಯಾಧ್ಯಕ್ಷ ಅಮಿನುಲ್ಲಾ ಹಕ್ಯು, ಪಶ್ಚಿಮ ಬಂಗಾಳ ವಿಭಾಗ ಮುಖ್ಯಸ್ಥನಾಗಿದ್ದ ಡಾ.ಮಿನರುಲ್ ಶೇಖ್ ಎಂಬವರನ್ನು ಬಂಧಿಸಿದ್ದರು. ಈ ವೇಳೆ, ಇಬ್ಬರಿಗೂ ಅಲ್ ಖಾಯಿದಾ ಮತ್ತು ಬಂಗ್ಲಾದೇಶದ ಅನ್ಸಾರುಲ್ಲಾ ಬಾಂಗ್ಲಾ ಟೀಮ್ ಜೊತೆಗೆ ನಿಕಟ ಸಂಪರ್ಕ ಇದ್ದುದು ಪತ್ತೆಯಾಗಿತ್ತು.

PFI ban: Delhi Police makes first arrest of members after ban, 4 arrested |  Mint

ಕರ್ನಾಟಕ ಸೇರಿದಂತೆ ವಿವಿಧ ಕಡೆ ಬಂಧಿತರಾಗಿದ್ದ ಪಿಎಫ್ಐ ಸಂಘಟನೆಯ ನಾಯಕರು ಜಿಹಾದಿ ಕೃತ್ಯಕ್ಕಾಗಿ ಹಣ ಸಂಗ್ರಹ ಮಾಡುತ್ತಿದ್ದರು. ವಿಧ್ವಂಸಕ ಕೃತ್ಯಕ್ಕಾಗಿ ದೇಣಿಗೆ ಸಂಗ್ರಹ ನಡೆಸುತ್ತಿರುವುದು, ಆ ಉದ್ದೇಶಕ್ಕಾಗಿ ಭಾರೀ ಮೊತ್ತದ ಹಣವು ವಿದೇಶಗಳಿಂದ ಹರಿದು ಬರುತ್ತಿರುವುದು ತನಿಖೆಯಲ್ಲಿ ಕಂಡುಬಂದಿತ್ತು. ಇದಲ್ಲದೆ, ಅಲ್ ಖಾಯಿದಾ ಮತ್ತು ಎಬಿಟಿ ತಂಡಗಳಿಂದ ಇವರಿಗೆ ಈ ಹಿಂದೆ ಆರ್ಥಿಕ ನೆರವು ಲಭಿಸಿದ್ದು ಆ ಹಣವನ್ನು ಎನ್ನಾರ್ಸಿ ಮತ್ತು ಸಿಎಎ ಹೋರಾಟದಲ್ಲಿ ತೊಡಗಿಸಿದ್ದುದು ಪತ್ತೆಯಾಗಿತ್ತು.

Love Jihad: बरेली में जिहाद के लिए लव का षडयंत्र, हिंदू छात्रा काे मजार में  सिखाई इबादत - Love Jihad Love conspiracy for jihad in Bareilly Hindu  student taught worship in the

ಲವ್ ಜಿಹಾದ್ ಉದ್ದೇಶಕ್ಕೆ ಶಾಹೀನ್ ಗ್ಯಾಂಗ್

ಇದಲ್ಲದೆ, ಪಿಎಫ್ಐನ ಸಹವರ್ತಿ ಸಂಘಟನೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಜೊತೆಗೆ ಶಾಹೀನ್ ಗ್ಯಾಂಗ್ ಎನ್ನುವ ನಿಗೂಢ ತಂಡ ಕಾರ್ಯಾಚರಿಸುತ್ತಿರುವುದೂ ತನಿಖೆಯಲ್ಲಿ ಪತ್ತೆಯಾಗಿದೆ. ಶಾಹೀನ್ ಗ್ಯಾಂಗ್ ಕಾಲೇಜು ಓದುತ್ತಿದ್ದ ಮಹಿಳಾ ಸದಸ್ಯರಿದ್ದ ಗುಂಪಾಗಿದ್ದು, ಅದರಲ್ಲಿದ್ದವರು ಹಿಂದು ವಿದ್ಯಾರ್ಥಿನಿಯರ ಜೊತೆಗೆ ಸ್ನೇಹ ಸಂಪಾದಿಸಿ ಮುಸ್ಲಿಂ ಯುವಕರ ಪರಿಚಯ ಮಾಡಿಸಿಕೊಡುತ್ತಿದ್ದರು. ಹಿಂದು ವಿದ್ಯಾರ್ಥಿನಿಯರ ಸ್ನೇಹ ಸಂಪಾದಿಸಿ ಲವ್ ಜಿಹಾದ್ ಕೃತ್ಯಕ್ಕೆ ಬಳಸಿಕೊಳ್ಳುವುದು ಈ ಗ್ಯಾಂಗಿನ ಸಂಚಾಗಿತ್ತು. ಕಾಲೇಜು ವಿದ್ಯಾರ್ಥಿಗಳನ್ನು ಮುಂದಿಟ್ಟು ಸಂಘಟನೆ ಮಾಡುತ್ತಿದ್ದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಶಾಹೀನ್ ಗ್ಯಾಂಗ್ ಅನ್ನುವ ತಂಡವನ್ನೂ ಕಟ್ಟಿಕೊಂಡಿತ್ತು ಅನ್ನುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Arrested members of PFI had links with Bangla terror group and Al Qaeda says police after investigation