ಮೈಸೂರಿನಲ್ಲಿ ದೊಡ್ಡ ಗೌಡ್ರ ಚುನಾವಣೆ ತಯಾರಿ ; ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಿಸಿದ ಜಿಟಿ ದೇವೇಗೌಡ ! 

21-10-22 05:37 pm       HK News Desk   ಕರ್ನಾಟಕ

ವಿಧಾನಸಭೆ ಚುನಾವಣೆಗೆ ಆರು ತಿಂಗಳು ಇರುವಾಗಲೇ ದೇವೇಗೌಡರು ತೊಡೆ ತಟ್ಟಿದ್ದಾರೆ. ಪಕ್ಷದ ಪಾಲಿಗೆ ಪ್ರಬಲ ಕೋಟೆ ಎಂದೇ ಪರಿಗಣಿಸಲ್ಪಟ್ಟ ಮೈಸೂರಿನಲ್ಲಿ ಚುನಾವಣೆಗೆ ತಯಾರಿ ನಡೆಸಿದ್ದು ಅಭ್ಯರ್ಥಿಗಳ ಪಟ್ಟಿಯನ್ನೂ ಘೋಷಣೆ ಮಾಡಲಾಗಿದೆ. 

ಮೈಸೂರು,‌ ಅ.21 : ವಿಧಾನಸಭೆ ಚುನಾವಣೆಗೆ ಆರು ತಿಂಗಳು ಇರುವಾಗಲೇ ದೇವೇಗೌಡರು ತೊಡೆ ತಟ್ಟಿದ್ದಾರೆ. ಪಕ್ಷದ ಪಾಲಿಗೆ ಪ್ರಬಲ ಕೋಟೆ ಎಂದೇ ಪರಿಗಣಿಸಲ್ಪಟ್ಟ ಮೈಸೂರಿನಲ್ಲಿ ಚುನಾವಣೆಗೆ ತಯಾರಿ ನಡೆಸಿದ್ದು ಅಭ್ಯರ್ಥಿಗಳ ಪಟ್ಟಿಯನ್ನೂ ಘೋಷಣೆ ಮಾಡಲಾಗಿದೆ. 

ಮೈಸೂರು ಭಾಗದ ಹಿರಿಯ ನಾಯಕ ಜಿಟಿ ದೇವೇಗೌಡರ ಜೊತೆ ಚಾಮುಂಡೇಶ್ವರಿ ಸನ್ನಿಧಿಗೆ ಆಗಮಿಸಿದ ಗೌಡರು, ಅಲ್ಲಿಂದಲೇ ಮೈಸೂರು ಜಿಲ್ಲೆಯ ಎಲ್ಲ ಹೊಣೆಯನ್ನೂ ಜಿಟಿಡಿಗೆ ಎಂದು ಘೋಷಿಸಿದ್ದಾರೆ.‌ ಅಲ್ಲದೆ, ಜಿಟಿಡಿ ಅವರ ನಾಯಕತ್ವದ ಬಗ್ಗೆ ಏನೇ ಅಪಸ್ವರ ಕೇಳಿದರೂ ನಾನು ಸಹಿಸುವುದಿಲ್ಲ. ಅಪಸ್ವರ ಎತ್ತುವವರು ಹೊರಗೆ ಹೋಗಬಹುದು. ಮೈಸೂರು ಭಾಗದಲ್ಲಿ ಅವರ ನೇತೃತ್ವದಲ್ಲಿಯೇ ಚುನಾವಣೆ ನಡೆಯಲಿದೆ, ಅವರ ತೀರ್ಮಾನವೇ ಅಂತಿಮ ಎಂದು ಹೇಳಿದ್ದಾರೆ. 

ಇದೇ ವೇಳೆ, ಚಾಮುಂಡಿ ಸನ್ನಿಧಿಯಲ್ಲಿಯೇ ಮೈಸೂರು ಭಾಗದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಜಿ.ಟಿ ದೇವೇಗೌಡ ಘೋಷಣೆ ಮಾಡಿದ್ದಾರೆ. ಚಾಮುಂಡೇಶ್ವರಿಗೆ ಜಿ.ಟಿ. ದೇವೇಗೌಡ, ಹುಣಸೂರಿಗೆ ಜಿ.ಟಿ.ಡಿ‌ ಮಗ ಹರೀಶ್‌ ಗೌಡ, ಕೆ.ಆರ್. ನಗರಕ್ಕೆ ಸಾ.ರಾ. ಮಹೇಶ್, ಪಿರಿಯಾಪಟ್ಟಣಕ್ಕೆ ಕೆ.ಮಹದೇವ್, ತಿ.ನರಸೀಪುರಕ್ಕೆ ಅಶ್ವಿನ್ ಕುಮಾರ್, ಎಚ್.ಡಿ. ಕೋಟೆಗೆ ಮಾಜಿ ಶಾಸಕ ಚಿಕ್ಕಣ್ಣ ಪುತ್ರ ಜಯಪ್ರಕಾಶ್‌ಗೆ ಟಿಕೆಟ್ ಬಹುತೇಕ ಅಂತಿಮ ಎಂದು ಪ್ರಕಟಿಸಿದ್ದಾರೆ. 

ನಾನು ನಿನ್ನೆಯಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. ಮನಸ್ಸು ಮೂರು ವರ್ಷಗಳ ನಂತರ ಸಮಾಧಾನದಲ್ಲಿದೆ. ನಾನು ನನ್ನ‌ ಮನೆಯವರು ಹೆಚ್ಚು ಖುಷಿಯಲ್ಲಿದ್ದೇವೆ. ಇನ್ನು ಯಾವ ಗೊಂದಲಗಳು ಉಳಿದಿಲ್ಲ. ಚಾಮುಂಡಿ ತಾಯಿಗೆ ಎಚ್‌.ಡಿ. ದೇವೇಗೌಡರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನೊಂದು ತಿಂಗಳನಲ್ಲಿ ನಾನು ವಾಕ್ ಮಾಡುವ ಶಕ್ತಿಕೊಡು ಎಂದು ತಾಯಿ ಮುಂದೆ ಬೇಡಿದ್ದಾರೆ. ಜನವರಿ ತಿಂಗಳಲ್ಲಿ ಎಚ್.ಡಿ. ದೇವೇಗೌಡರು ಚಂಡಿಕಾ ಹೋಮ ನಡೆಸಲಿದ್ದಾರೆ. ಎಚ್.ಡಿ. ದೇವೇಗೌಡರ ಉತ್ಸಾಹ ನೋಡಿ ನಾವೇ ಅಚ್ಚರಿಗೆ ಒಳಗಾಗಿದ್ದೇವೆ. ಅವರೇ ನಮಗೆ ಪ್ರೇರಣೆ.ಅವರನ್ನು ಸಂತೋಷವಾಗಿಡುವುದೇ ನಮ್ಮ ಸಂತೋಷ ಎಂದು ಹೇಳಿದ್ದಾರೆ.‌

Chamundeshwari MLA G.T. Deve Gowda, who was estranged from the Janata Dal (Secular) and flip-flopped between the BJP and the Congress, announced here on Thursday that he would work ‘’to bring the JD(.S) to power’’.