ಅಪಪ್ರಚಾರ, ಮರ್ಯಾದೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಲಿಂಗಾಯತ ಸ್ವಾಮೀಜಿ ; ಬಂಡೆಮಠದಲ್ಲಿ ಸ್ಮಶಾನ ಮೌನ 

24-10-22 01:07 pm       HK News Desk   ಕರ್ನಾಟಕ

ಮಾಗಡಿ ತಾಲೂಕಿನ ಕಂಚುಗಲ್​ ಬಂಡೆಮಠದ ಬಸವಲಿಂಗ ಸ್ವಾಮೀಜಿ(45) ಆತ್ಮಹತ್ಯೆ ಮಾಡಿಕೊಂಡಿದ್ದು ಮರ್ಯಾದೆಗೆ ಅಂಜಿ ಸಾವಿಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಮೂರು ಪುಟಗಳ ಡೆತ್‌ ನೋಟ್ ಬರೆದಿಟ್ಟು ಮಠದಲ್ಲಿಯೇ ಕಿಟಕಿಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. 

ರಾಮನಗರ, ಅ.24: ಮಾಗಡಿ ತಾಲೂಕಿನ ಕಂಚುಗಲ್​ ಬಂಡೆಮಠದ ಬಸವಲಿಂಗ ಸ್ವಾಮೀಜಿ(45) ಆತ್ಮಹತ್ಯೆ ಮಾಡಿಕೊಂಡಿದ್ದು ಮರ್ಯಾದೆಗೆ ಅಂಜಿ ಸಾವಿಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಮೂರು ಪುಟಗಳ ಡೆತ್‌ ನೋಟ್ ಬರೆದಿಟ್ಟು ಮಠದಲ್ಲಿಯೇ ಕಿಟಕಿಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. 

ಡೆತ್‌ ನೋಟ್​ನಲ್ಲಿ ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಯಾರ ಸಹಾಯವೂ ಇರಲಿಲ್ಲ. ಕೆಲವರಿಂದ ಬೆದರಿಕೆ ಕರೆಗಳು ಸಹ ಬಂದಿವೆ ಎಂದು ಉಲ್ಲೇಖಿಸಿದ್ದಾರೆ. ಮಾಗಡಿ ತಾಲೂಕಿನಲ್ಲೇ ಲಿಂಗಾಯತರ ಪಾಲಿಗೆ ಅತ್ಯಂತ ದೊಡ್ಡ ಮಠ ಎಂಬ ಪ್ರಖ್ಯಾತಿ ಪಡೆದಿರುವ ಕಂಚುಗಲ್​ ಬಂಡೆಮಠದ ಆವರಣದಲ್ಲಿ ಶಾಲಾ ಕಾಲೇಜುಗಳಿವೆ. 50 ಕೋಟಿಗೂ ಹೆಚ್ಚು ಮೌಲ್ಯ ಹೊಂದಿರುವ ಆಸ್ತಿಗಳಿವೆ. ಆದ್ರೆ ಕೆಲ ದಿನಗಳಿಂದ ಸ್ವಾಮೀಜಿಗಳ ವಿರುದ್ಧ ಕೇಳಿಬಂದಿದ್ದ ಆರೋಪಕ್ಕೆ ಅಂಜಿ ಸ್ವಾಮೀಜಿ ಪ್ರಾಣ ತ್ಯಾಗ ಮಾಡಿದ್ದಾರೆ.

ಸ್ವಾಮೀಜಿಗಳ ಹೆಸರಲ್ಲಿ 80 ಎಕರೆ ಜಮೀನು ಇದೆ. 25 ವರ್ಷಗಳ ಹಿಂದೆ ಬಂಡೆಮಠದಲ್ಲಿ ಪೀಠ ಅಲಂಕರಿಸಿದ್ದರು. ಇತ್ತೀಚೆಗೆ ಬೆಳ್ಳಿ ಮಹೋತ್ಸವ ಆಚರಣೆ ಮಾಡಿಕೊಂಡಿದ್ದರು. ಶ್ರೀಗಳು ಬಂಡೇಮಠದಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದರು. ಚಿಲುಮೆ ಮಠದ ಬಸವಲಿಂಗ ಸ್ವಾಮೀಜಿಯವರು ಇದೇ ರೀತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿ ಒಂದು ವರ್ಷವೂ ಆಗಿಲ್ಲ. ಆಗ ಇದೇ ರೀತಿ ಮತ್ತೊಂದು ಘಟನೆ ನಡೆದಿದೆ. 

ಶ್ರೀಗಳು ಮಠದಲ್ಲಿ ನೂತನ ಕಟ್ಟಡದ ಗುದ್ದಲಿ ಪೂಜೆಗೆ ಪ್ಲಾನ್ ಮಾಡಿಕೊಂಡಿದ್ದರು. ಮಠದ ಕಟ್ಟಡಕ್ಕೆ ಸರ್ಕಾರದಿಂದ ಹಣ ಸಹ ಮಂಜೂರಾತಿಯೂ ಆಗಿತ್ತು. ಇದೇ ಬುಧವಾರ 26 ರಂದು ಮಾಜಿ ಸಿಎಂ ಯಡಿಯೂರಪ್ಪನವರು ಗುದ್ದಲಿ ಪೂಜೆ ಮಾಡಬೇಕಿತ್ತು. ನೂತನ ಕಟ್ಟಡದ ಗುದ್ದಲಿ ಪೂಜೆಗೆ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಅಷ್ಟರಲ್ಲಿ ಸ್ವಾಮೀಜಿ ಸಾವು ಕಂಡಿದ್ದಾರೆ. ‌

Shri Kanchugal Bande Math Basavalinga Swamiji (45) of Kanchugal Bandemath ended his life in the math itself by hanging. The incident occurred at the Bandemath situated at Magadi taluk of the district. The exact reason for the extreme step taken by the seer is not known.