ಬಂಡೇಮಠದ ಸ್ವಾಮೀಜಿ ಆತ್ಮಹತ್ಯೆ ; ಹನಿಟ್ರ್ಯಾಪ್, ಬ್ಲಾಕ್ಮೇಲ್ ಲಿಂಕ್ ಪತ್ತೆ, ಸಾವಿಗೂ ಮುನ್ನ ಮಠಕ್ಕೆ ಬಂದಿದ್ದ ಸಚಿವರ ಆಪ್ತರು ! ಪ್ರಕರಣ ಮುಚ್ಚಿ ಹಾಕಲು ನಡೀತಿದ್ಯಾ ಸಂಚು ! 

26-10-22 05:18 pm       Bangalore Correspondent   ಕರ್ನಾಟಕ

ರಾಮನಗರ ಜಿಲ್ಲೆಯ ಮಾಗಡಿಯ ಕಂಚುಗಲ್ ಬಂಡೇಮಠದ ಪೀಠಾಧ್ಯಕ್ಷ ಶ್ರೀ ಬಸವಲಿಂಗ ಸ್ವಾಮೀಜಿ (45) ಆತ್ಮಹತ್ಯೆ ಪ್ರಕರಣ ಮಹತ್ವದ ತಿರುವು ಪಡೆದಿದ್ದು ಸ್ವಾಮೀಜಿಯನ್ನು ಹನಿಟ್ರ್ಯಾಪ್ ಒಳಪಡಿಸಿ ಬ್ಲಾಕ್ಮೇಲ್ ಮಾಡಲಾಗಿತ್ತು ಎನ್ನುವ ಅಂಶ ತನಿಖೆಯಲ್ಲಿ ತಿಳಿದುಬಂದಿದೆ. 

ಬೆಂಗಳೂರು, ಅ.26 : ರಾಮನಗರ ಜಿಲ್ಲೆಯ ಮಾಗಡಿಯ ಕಂಚುಗಲ್ ಬಂಡೇಮಠದ ಪೀಠಾಧ್ಯಕ್ಷ ಶ್ರೀ ಬಸವಲಿಂಗ ಸ್ವಾಮೀಜಿ (45) ಆತ್ಮಹತ್ಯೆ ಪ್ರಕರಣ ಮಹತ್ವದ ತಿರುವು ಪಡೆದಿದ್ದು ಸ್ವಾಮೀಜಿಯನ್ನು ಹನಿಟ್ರ್ಯಾಪ್ ಒಳಪಡಿಸಿ ಬ್ಲಾಕ್ಮೇಲ್ ಮಾಡಲಾಗಿತ್ತು ಎನ್ನುವ ಅಂಶ ತನಿಖೆಯಲ್ಲಿ ತಿಳಿದುಬಂದಿದೆ. 

ಶ್ರೀಗಳನ್ನು ಪೀಠತ್ಯಾಗ ಮಾಡಿಸುವ ನಿಟ್ಟಿನಲ್ಲಿ ಹನಿಟ್ರ್ಯಾಪ್ ಬಲೆಗೆ ಬೀಳಿಸಲು ಏಳು ತಿಂಗಳಿನಿಂದ ಕೆಲವರು ಪ್ರಯತ್ನ ಮಾಡಿದ್ದಾರೆ. ಇದಕ್ಕಾಗಿ ಅನಾಮಧೇಯ ಮಹಿಳೆಯೊಬ್ಬಳು ಶ್ರೀಗಳ ಮೊಬೈಲ್​ಗೆ ವಿಡಿಯೋ ಕಾಲ್​ ಮಾಡಿರುವುದು ಕಂಡುಬಂದಿದೆ. ವಂಚಕರ ಬಲೆಗೆ ಬಿದ್ದ ಶ್ರೀಗಳು ಹನಿಟ್ರ್ಯಾಪ್​ ಒಳಗಾಗಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ವಾಟ್ಸಪ್ ವಿಡಿಯೋ ಕರೆಯೇ ಕಾರಣ ಎಂದು ತಿಳಿದುಬಂದಿದೆ. ಮಹಿಳೆಯ ಜೊತೆ ಮಾತನಾಡಿರುವ ವಿಡಿಯೋ ಕರೆ ರೆಕಾರ್ಡ್ ಆಗಿದ್ದು ಅದನ್ನು ಮುಂದಿಟ್ಟು ಬ್ಲಾಕ್ಮೇಲ್ ಮಾಡಲಾಗಿತ್ತು. ವಿಡಿಯೋ ಹೊರ ಬಂದರೆ ಮಾನ, ಮರ್ಯಾದೆ ಹಾಳಾಗುತ್ತದೆ ಎಂದು ಹೆದರಿ ಶ್ರೀಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಅಲ್ಲದೆ, ಸ್ವಾಮೀಜಿ ಸಾವನ್ನಪ್ಪಿದ ದಿನವೇ ಇಬ್ಬರು ಪ್ರಭಾವಿಗಳು ಅವರನ್ನು ಭೇಟಿಯಾಗಿದ್ದರು. ಅರ್ಧ ಗಂಟೆ ಕಾಲ ಗೌಪ್ಯ ಮಾತುಕತೆ ನಡೆಸಿದ್ದರು. ಸ್ವಾಮೀಜಿ ಭೇಟಿ ಆಗಿದ್ದವರು ಹಾಲಿ ಸಚಿವರೊಬ್ಬರ ಆಪ್ತರು ಎಂದು ಹೇಳಲಾಗುತ್ತಿದೆ. ಭೇಟಿಯ ಬಳಿಕ ತನ್ನ ಕೊಠಡಿ ಹೋಗಿದ್ದ ಸ್ವಾಮೀಜಿ ಅಲ್ಲಿ‌ಂದ ಹೊರ ಬಂದಿರಲಿಲ್ಲ. ಮಠದ ಸಿಬಂದಿ ಬಳಿಕ ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿರುವುದು ಪತ್ತೆಯಾಗಿತ್ತು. ಹೀಗಾಗಿ ಶ್ರೀಗಳ ವಿರುದ್ಧ ಸಂಚು ರೂಪಿಸಿ ಖೆಡ್ಡಾಕ್ಕೆ ಕೆಡವಿದ ಪ್ರಭಾವಿಗಳು ಯಾರು ಎಂಬ ಪ್ರಶ್ನೆ ಮೂಡಿದೆ. ಮಠದ ಪೀಠಾಧ್ಯಕ್ಷ ಸ್ಥಾನ ಹಿಡಿಯಲು ಮತ್ತೊಬ್ಬ ಸ್ವಾಮೀಜಿ ಸಂಚು ರೂಪಿಸಿರುವ ಶಂಕೆಯೂ ಪೊಲೀಸರಲ್ಲಿದೆ. ಮಠದ ಆಸ್ತಿಯ ಮೇಲೆ ಕಣ್ಣಿಟ್ಟಿದ್ದ ಕೆಲವರು ಶ್ರೀಗಳನ್ನು ಪೀಠಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಹನಿಟ್ರ್ಯಾಪ್​ ಸಂಚು ರೂಪಿಸಿದ್ದರು ಎಂಬ ಅಂಶ ತನಿಖೆಯಲ್ಲಿ ಬಯಲಾಗಿದೆ. 

ಡೆತ್ ನೋಟ್ ನಲ್ಲಿ ಹಲವರ ಹೆಸರು, ಎಫ್ಐಆರ್ ನಲ್ಲಿ ಇಲ್ಲ ! 

ಸ್ವಾಮೀಜಿ ಆತ್ಮಹತ್ಯೆ ಪ್ರಕರಣ ಸಂಬಂಧಿಸಿ ಎಫ್‌ಐಆರ್ ದಾಖಲಾಗಿದ್ದು ಪೊಲೀಸರು ಯಾವುದೇ ಆರೋಪಿಗಳ ಹೆಸರು ಉಲ್ಲೇಖಿಸಿಲ್ಲ. ಹೀಗಾಗಿ ಇಡೀ ಪ್ರಕರಣ ಮುಚ್ಚಿಹಾಕಲು ಪ್ರಯತ್ನ ನಡೆಯುತ್ತಿದೆಯಾ ಎಂಬ ಅನುಮಾನ ಮೂಡಿದೆ. ಪ್ರಕರಣದಲ್ಲಿ ಪ್ರಭಾವಿ ಹಾಲಿ ಸಚಿವರ ಕೈವಾಡದ ಶಂಕೆ ವ್ಯಕ್ತವಾಗಿದೆ. ಡೆತ್​ನೋಟ್​ನಲ್ಲಿ ಹಲವರ ಹೆಸರು ಇದೆ ಎನ್ನಲಾಗುತ್ತಿದ್ದರೂ ಎಫ್‌ಐಆರ್ ನಲ್ಲಿ ಮಾತ್ರ ಅನಾಮಧೇಯ ವ್ಯಕ್ತಿಯೆಂದು ಉಲ್ಲೇಖಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಮಾಗಡಿ ತಾಲೂಕಿನ ಕುದೂರು ಠಾಣೆಯಲ್ಲಿ ಈ ಬಗ್ಗೆ ಎಫ್​ಐಆರ್​ ದಾಖಲಾಗಿದೆ.

The seer of Sri Kanchugal Bande Mutt, Basavalinga Swami was found dead in a room of the mutt in Ramnagara district, police have informed.